AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯಾಯಸಮ್ಮತ ತನಿಖೆ ನಿಮಗೆ ಇಷ್ಟವಿಲ್ಲವೇ? ರಮೇಶ್ ಜಾರಕಿಹೊಳಿ ಪರ ವಕೀಲರಿಗೆ ಹೈಕೋರ್ಟ್​ ಪ್ರಶ್ನೆ

ಸಿಬಿಐ ತನಿಖೆ ನಡೆಸಬೇಕು ಎಂದು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ರಮೇಶ್ ಜಾರಕಿಹೊಳಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದರು. ‘ನ್ಯಾಯ ಸಮ್ಮತ ತನಿಖೆ ನಡೆಸುವುದು ನಮ್ಮ ಉದ್ದೇಶ. ನಿಮಗೆ ನ್ಯಾಯಸಮ್ಮತ ತನಿಖೆ ಇಷ್ಟವಿಲ್ಲವೇ‘ ಎಂದು ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಪ್ರಶ್ನಿಸಿದರು.

ನ್ಯಾಯಸಮ್ಮತ ತನಿಖೆ ನಿಮಗೆ ಇಷ್ಟವಿಲ್ಲವೇ? ರಮೇಶ್ ಜಾರಕಿಹೊಳಿ ಪರ ವಕೀಲರಿಗೆ ಹೈಕೋರ್ಟ್​ ಪ್ರಶ್ನೆ
ಕರ್ನಾಟಕ ಹೈಕೋರ್ಟ್
Ghanashyam D M | ಡಿ.ಎಂ.ಘನಶ್ಯಾಮ
|

Updated on:May 31, 2021 | 3:21 PM

Share

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (Central Bureau of Investigation – CBI) ತನಿಖೆ ನಡೆಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹೈಕೋರ್ಟ್​ ಸೋಮವಾರ ವಿಚಾರಣೆ ನಡೆಸಿತು. ಈ ವೇಳೆ ಪ್ರಕರಣದ ತನಿಖೆಗೆಂದು ರಚಿಸಿರುವ ವಿಶೇಷ ತನಿಖಾ ದಳ (Special Investigation Team – SIT) ಹೈಕೋರ್ಟ್​ಗೆ ತನಿಖೆಯ ಪ್ರಗತಿ ವರದಿ ಸಲ್ಲಿಸಿತು. ಸೀಲ್ ಮಾಡಿದ್ದ ಮುಚ್ಚಿದ ಲಕೋಟೆಯಲ್ಲಿದ್ದ ವರದಿಯನ್ನು ಸೀಲ್ ತೆರೆದು ವಿಭಾಗೀಯ ಪೀಠ ಪರಿಶೀಲಿಸಿತು.

ಪೋಷಕರು ಸಲ್ಲಿಸಿದ್ದ ದೂರಿನಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ ಎಂಬ ಹೇಳಿಕೆಯಿತ್ತು. ಯುವತಿ ನೀಡಿದ ಕೇಸ್‌ನ ತನಿಖೆ ಅಂತಿಮ ಹಂತದಲ್ಲಿದೆ ಎಂದು ಹೈಕೋರ್ಟ್‌ಗೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹೇಳಿಕೆ ನೀಡಿದರು. ಸಂತ್ರಸ್ತ ಯುವತಿಯು ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ, ಆ ಪತ್ರದ ಬಗ್ಗೆಯೂ ಹೈಕೋರ್ಟ್​ ಎಸ್​ಐಟಿಯಿಂದ ವರದಿ ಕೇಳಿತು.

ಸಿಬಿಐ ತನಿಖೆ ನಡೆಸಬೇಕು ಎಂದು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ರಮೇಶ್ ಜಾರಕಿಹೊಳಿ ಪರ ವಕೀಲ ಸಿ.ವಿ.ನಾಗೇಶ್ ಆಕ್ಷೇಪಣೆ ಸಲ್ಲಿಸಿದರು. ಮೂರನೇ ವ್ಯಕ್ತಿಗಳು ತನಿಖೆಯನ್ನು ನಿರ್ಧರಿಸಬಾರದು ಎಂದು ಅವರು ವಾದಿಸಿದರು. ಈ ವೇಳೆ ಮಾತನಾಡಿದ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ, ‘ನ್ಯಾಯ ಸಮ್ಮತ ತನಿಖೆ ನಡೆಸುವುದು ನಮ್ಮ ಉದ್ದೇಶ. ನಿಮಗೆ ನ್ಯಾಯಸಮ್ಮತ ತನಿಖೆ ಇಷ್ಟವಿಲ್ಲವೇ. ನೀವು ಆಕ್ಷೇಪ ಎತ್ತಿದರೆ ನಾವು ಹಾಗೆ ಭಾವಿಸಬೇಕಾಗುತ್ತದೆ’ ಎಂದು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರು ಈವರೆಗೂ ಸಿಕ್ಕಿಲ್ಲ ಎಂದು ಸರ್ಕಾರ ಸಲ್ಲಿಸಿದ್ದ ವರದಿಯಲ್ಲಿ ಮಾಹಿತಿ ನೀಡಿದೆ.

(Ramesh Jarkiholi cd scandal Case Proceedings in Karnataka High Court SIT Submits Report)

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಶಂಕಿತ ಅಭ್ಯರ್ಥಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನಲ್ಲಿ ಆರೋಪಿಗಳಾದ ನರೇಶ್, ಶ್ರವಣ್ ಗೆ ಬೇಲ್ ನೀಡದಂತೆ ಎಸ್​ಐಟಿಯಿಂದ ಮನವಿ

Published On - 3:18 pm, Mon, 31 May 21