ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಯತ್ತ ಆಂಧ್ರದ ಸೋಂಕಿತರು; ಪ್ರಥಮ ಚಿಕಿತ್ಸೆ ನೀಡಿ ವಾಪಸ್ ಕಳಿಸುತ್ತಿರುವ ವೈದ್ಯರು
ಅನ್ಯ ರಾಜ್ಯದ ರೋಗಿಗಳ ಸಂಖ್ಯೆ ಇತ್ತಿಚೇಗೆ ಹೆಚ್ಚಾಗುತ್ತಿದೆ. ಇದರಿಂದ ಆಸ್ಪತ್ರೆಗಳಲ್ಲಿ ಮತ್ತೊಂದು ಸಮಸ್ಯೆ ತಲೆದೊರಿದೆ. ಇನ್ನೂ ಕೆಲವು ಅತಿ ಬುದ್ಧಿವಂತರು ಕರ್ನಾಟಕದ ತಮ್ಮ ಸಂಬಂಧಿಗಳ ಗುರುತಿನ ಚೀಟಿ ತಂದು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಪಿ.ವಿ.ರಮೇಶ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ: ಕೊರೊನಾ ಎರಡನೇ ಅಲೆ ಹೆಚ್ಚಾಗಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪರಿಸ್ಥಿತಿಯನ್ನು ಸುಧಾರಿಸಲು ಲಾಕ್ಡೌನ್ ಘೋಷಿಸಿದೆ. ಜತೆಗೆ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಅದರಂತೆ ಕೊರೊನಾ ಇರುವ ಕಾರಣಕ್ಕೆ ಹೊರ ರಾಜ್ಯದ ರೋಗಿಗಳಿಗೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಅವಕಾಶ ಇಲ್ಲ ಎಂದು ತಿಳಿಸಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆ ಒಂದೆಡೆ ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿದೆ. ಮತ್ತೊಂದೆಡೆ ಆಂಧ್ರದ ಗಡಿನಾಡಿಗೂ ಅಂಟಿಕೊಂಡಿದೆ. ಇದರಿಂದಾಗಿ ಆಂಧ್ರದ ಜನರು ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಹೀಗಾಗಿ ಇಲ್ಲಿನ ಸರ್ಕಾರಿ ವೈದ್ಯರು ನಿಯಮಕ್ಕಿಂತ ಮಾನವೀಯತೆ ಮುಖ್ಯ ಎಂದು ಎಲ್ಲರಿಗೂ ಚಿಕಿತ್ಸೆ ನೀಡುತ್ತಿದ್ದಾರೆ.
ಆಂಧ್ರದ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ಅಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಗಡಿನಾಡು ಆಂಧ್ರದ ಕೊರೊನಾ ಸೋಂಕಿತರು ಹಾಗೂ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಅಲ್ಲಿಯ ಜನ ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಗುಡಿಬಂಡೆ ಗೌರಿಬಿದನೂರು ಆಸ್ಪತ್ರೆಗಳಿಗೆ ವಲಸೆ ಬರ್ತಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ರಾಜ್ಯದ ಜನರಿಗೆ ಮಾತ್ರ ಉಚಿತ ಚಿಕಿತ್ಸೆ ನೀಡಲು ಅವಕಾಶ ಇದೆ. ಆದರೂ ಆಸ್ಪತ್ರೆಗೆ ಬಂದ ಆಂಧ್ರದ ರೋಗಿಗಳನ್ನು ಹಾಗೆ ವಾಪಸ್ ಕಳುಹಿಸದೆ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ವಾಪಸ್ ಕಳುಹಿಸುತ್ತಿದ್ದಾರೆ.
ಕೊರೊನಾ ಸೋಂಕಿತರು ಹಾಗೂ ಸಾಮಾನ್ಯ ಕಾಯಿಲೆಗಳಿಗೆ ಎಂದು ಆಸ್ಪತ್ರೆಗೆ ಬರುವ ಸ್ಥಳಿಯ ರೋಗಿಗಳನ್ನು ನೋಡಲು ತಜ್ಞ ವೈದ್ಯರ ಕೊರತೆಯಿದೆ. ಇಂಥದರಲ್ಲಿ ಅನ್ಯ ರಾಜ್ಯದ ರೋಗಿಗಳ ಸಂಖ್ಯೆ ಇತ್ತಿಚೇಗೆ ಹೆಚ್ಚಾಗುತ್ತಿದೆ. ಇದರಿಂದ ಆಸ್ಪತ್ರೆಗಳಲ್ಲಿ ಮತ್ತೊಂದು ಸಮಸ್ಯೆ ತಲೆದೊರಿದೆ. ಇನ್ನೂ ಕೆಲವು ಅತಿ ಬುದ್ಧಿವಂತರು ಕರ್ನಾಟಕದ ತಮ್ಮ ಸಂಬಂಧಿಗಳ ಗುರುತಿನ ಚೀಟಿ ತಂದು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಪಿ.ವಿ.ರಮೇಶ ತಿಳಿಸಿದ್ದಾರೆ.
ನಮ್ಮಲ್ಲೆ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ಇನ್ನೂ ಇಂಥದರಲ್ಲಿ ನೆರೆ ರಾಜ್ಯದ ಸೋಂಕಿತರಿಗೆ ಅಲ್ಲಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಕರ್ನಾಟಕದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ಹೀಗೆ ಆಂಧ್ರದ ರೋಗಿಗಳು ಗಡಿನಾಡು ಚಿಕ್ಕಬಳ್ಳಾಪುರ ಜಿಲ್ಲೆಯತ್ತ ಮುಖ ಮಾಡುತ್ತಿರುವುದು ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಸದ್ಯ ಮತ್ತೊಂದು ಸಮಸ್ಯೆಯಾಗಿದೆ.
ಇದನ್ನೂ ಓದಿ:
ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಶಸ್ತ್ರಚಿಕಿತ್ಸೆ ಯಶಸ್ವಿ; ಸೋಂಕಿತ ಅಪಾಯದಿಂದ ಪಾರು
ಗ್ರಾಮೀಣ ಭಾಗದ ಜನರ ಮನೆಗೆ ವೈದ್ಯಕೀಯ ಸೇವೆ; ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಸೋಂಕಿತರಿಗೆ ನೆರವು