AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಮೀಣ ಭಾಗದ ಜನರ ಮನೆಗೆ ವೈದ್ಯಕೀಯ ಸೇವೆ; ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಸೋಂಕಿತರಿಗೆ ನೆರವು

ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಅನ್ನು ಇದೀಗ ಆಕ್ಸಿಜನ್ ಬಸ್ ಆಗಿ ಪರಿವರ್ತನೆ ಮಾಡಲಾಗಿದೆ. ಬಸ್​ನಲ್ಲಿ ಐದು ಬೆಡ್​ಗಳನ್ನು ವ್ಯವಸ್ಥೆ ಮಾಡಲಾಗಿದೆ. ಎರಡು ಜಂಬೂ ಸಿಲಿಂಡರ್ ಇಡಲಾಗಿದೆ. ಬಸ್​ನಲ್ಲಿ ಆಕ್ಸಿಮೀಟರ್, ಬಿಪಿ ನೋಡುವ ಸಾಧನವೂ ಇರಲಿದೆ. ಜತೆಗೆ ಇಬ್ಬರು ಸ್ಟಾಫ್​ ನರ್ಸ್​ಗಳು ಬಸ್​ನಲ್ಲಿ ಇರಲಿದ್ದಾರೆ. ಅಲ್ಲದೆ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಕೂಡಾ ಇದರ ಮೇಲುಸ್ತುವಾರಿಯನ್ನು ವಹಿಸಲಿದ್ದಾರೆ.

ಗ್ರಾಮೀಣ ಭಾಗದ ಜನರ ಮನೆಗೆ ವೈದ್ಯಕೀಯ ಸೇವೆ; ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಸೋಂಕಿತರಿಗೆ ನೆರವು
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವೈದ್ಯಕೀಯ ಸೇವೆ
Follow us
preethi shettigar
|

Updated on: May 29, 2021 | 4:30 PM

ಕಲಬುರಗಿ: ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಮತ್ತೊಂದಡೆ ಗ್ರಾಮೀಣ ಭಾಗದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೇ ಅನೇಕರು ಸಾಯುತ್ತಿದ್ದಾರೆ. ಇದನ್ನು ಮನಗಂಡು, ಇದೀಗ ಗ್ರಾಮೀಣ ಭಾಗದ ಜನರ ಮನೆಬಾಗಿಲಿಗೆ ವೈದ್ಯಕೀಯ ಸೇವೆಯನ್ನು ಕಲ್ಪಿಸಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುಂದಾಗಿದೆ. ಅದಕ್ಕಾಗಿ ಹಳ್ಳಿಗಳಲ್ಲಿನ ಸೋಂಕಿತರ ಮನೆ ಬಾಗಿಲಿಗೆ ಚಿಕಿತ್ಸೆಗಾಗಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ತುರ್ತಾಗಿ ನೀಡಲು ಮತ್ತು ಸೋಂಕಿನಿಂದ ಗುಣಮುಖರಾದವರಿಗೆ ಕೂಡಾ ಕೆಲವರಿಗೆ ಆಕ್ಸಿಜನ್ ವ್ಯವಸ್ಥೆ ಬೇಕಾಗುತ್ತದೆ. ಅಂತವರಿಗೆ ಆಕ್ಸಿಜನ್ ನೀಡಲು ವಿನೂತನವಾದ ಬಸ್​ಗೆ ಮೇ 28 ರಂದು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ, ಶಾಸಕ ಸುಭಾಷ್ ಗುತ್ತೇದಾರ್ ಚಾಲನೆ ನೀಡಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಇದೀಗ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಸೂಕ್ತ ವೈದ್ಯಕೀಯ ವ್ಯವಸ್ಥೆ ಇಲ್ಲದೇ ಅನೇಕರು ಪರದಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ. ನಗರದಿಂದ ಅಥವಾ ಪಟ್ಟಣದಿಂದ ಆಂಬ್ಯುಲೆನ್ಸ್ ಬರುವವರೆಗೆ ಇಲ್ಲಿನ ಜನ ಕಾಯಬೇಕು. ಅಲ್ಲಿವರಗೆ ತೀವ್ರ ಉಸಿರಾಟದ ಸಮಸ್ಯೆ ಕಂಡು ಬಂದರೆ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆಗೆ ಕೂಡಾ ಯಾವುದೇ ಅವಕಾಶವಿಲ್ಲ. ಹೀಗಾಗಿ ಅನೇಕರು ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಸಾಯುತ್ತಿದ್ದಾರೆ. ಈ ಸಮಸ್ಯೆ ದೂರ ಮಾಡಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿರ್ದೇಶಕ ಮಲ್ಲಿಕಾರ್ಜುನ ತಡಕಲ್ ವಿಶೇಷ ಆಸಕ್ತಿ ವಹಿಸಿ, ಆಕ್ಸಿಜನ್ ಬಸ್ ಅನ್ನು ಬಿಡುಗಡೆ ಮಾಡಿದ್ದಾರೆ ಎಂದು ಆಳಂದ ಶಾಸಕ ಸುಭಾಷ್ ಗುತ್ತೇದಾರ್ ಹೇಳಿದ್ದಾರೆ.

ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಅನ್ನು ಇದೀಗ ಆಕ್ಸಿಜನ್ ಬಸ್ ಆಗಿ ಪರಿವರ್ತನೆ ಮಾಡಲಾಗಿದೆ. ಬಸ್​ನಲ್ಲಿ ಐದು ಬೆಡ್​ಗಳನ್ನು ವ್ಯವಸ್ಥೆ ಮಾಡಲಾಗಿದೆ. ಎರಡು ಜಂಬೂ ಸಿಲಿಂಡರ್ ಇಡಲಾಗಿದೆ. ಬಸ್​ನಲ್ಲಿ ಆಕ್ಸಿಮೀಟರ್, ಬಿಪಿ ನೋಡುವ ಸಾಧನವೂ ಇರಲಿದೆ. ಜತೆಗೆ ಇಬ್ಬರು ಸ್ಟಾಫ್​ ನರ್ಸ್​ಗಳು ಬಸ್​ನಲ್ಲಿ ಇರಲಿದ್ದಾರೆ. ಅಲ್ಲದೆ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಕೂಡಾ ಇದರ ಮೇಲುಸ್ತುವಾರಿಯನ್ನು ವಹಿಸಲಿದ್ದಾರೆ.

ಈ ಬಸ್ ಪ್ರತಿನಿತ್ಯ ಹೆಚ್ಚು ಸೋಂಕಿತರು ಇರುವ ಹಳ್ಳಿಗೆ ಹೋಗಿ, ಅವರಿಗೆ ತುರ್ತು ಆಕ್ಸಿಜನ್ ವ್ಯವಸ್ಥೆ ಬೇಕಾದರೆ ಆಕ್ಸಿಜನ್ ವ್ಯವಸ್ಥೆಯನ್ನು ನೀಡುತ್ತದೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಜೊತೆಗೆ ಪೋಸ್ಟ್ ಕೊವಿಡ್ ರೋಗಿಗಳಿಗೆ ಆಕ್ಸಿಜನ್ ವ್ಯವಸ್ಥೆ ಬೇಕಾದರೆ ಅವರಿಗೂ ಕೂಡಾ ಆಕ್ಸಿಜನ್ ವ್ಯವಸ್ಥೆ ನೀಡಲಾಗುತ್ತದೆ. ಐದು ಬೆಡ್​ಗಳಿದ್ದರು ಕೂಡಾ ಹತ್ತು ಜನರಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲು ಅವಕಾಶವಿದೆ. ಪ್ರಾಯೋಗಿಕವಾಗಿ ಒಂದು ಬಸ್ ಅನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಬಿಡುಗಡೆ ಮಾಡಲಾಗಿದ್ದು, ಪ್ರತಿನಿತ್ಯ ಆಳಂದ ತಾಲೂಕಿನ ಅನೇಕ ಹಳ್ಳಿಗಳಿಗೆ ಬಸ್ ಹೋಗಲಿದೆ. ದಿನದ ಇಪ್ಪತ್ನಾಲ್ಕು ಗಂಟೆ ಕೂಡಾ ಬಸ್​ನಲ್ಲಿ ಚಿಕಿತ್ಸೆ ಲಭ್ಯವಿರಲಿದೆ ಎಂದು ವೈದ್ಯ ವಿಶ್ವರಾಜ್ ತಡಕಲ್ ತಿಳಿಸಿದ್ದಾರೆ.

ಇದನ್ನೂ ಓದಿ:

ಪ್ರೌಢಶಾಲೆಯನ್ನೇ ಕೊವಿಡ್ ಕೇರ್ ಸೆಂಟರ್ ಮಾಡಿದ ಆದಿಚುಂಚನಗಿರಿ ಮಠ; ಕೊರೊನಾ ನಿರ್ವಹಣೆಗೆ ಕಾಲೇಜಿನ ಬಸ್ ಬಳಕೆ

ಇಂದಿನಿಂದ ಕೊರೊನಾ ಸೋಂಕಿತರಿಗಾಗಿ ಕೆಎಸ್​ಆರ್​ಟಿಸಿ ವತಿಯಿಂದ ಸಂಚಾರಿ ಐಸಿಯು ಬಸ್