ಇಂದಿನಿಂದ ಕೊರೊನಾ ಸೋಂಕಿತರಿಗಾಗಿ ಕೆಎಸ್ಆರ್ಟಿಸಿ ವತಿಯಿಂದ ಸಂಚಾರಿ ಐಸಿಯು ಬಸ್
ರೋಗಿಗಳ ಬಿಪಿ, ಆಕ್ಸಿಜನ್ ಪ್ರಮಾಣ, ಇಸಿಜಿ, ತಾಪಮಾನ ಇತ್ಯಾದಿಗಳನ್ನು ಪರಿಶೀಲಿಸಲು ವ್ಯವಸ್ಥೆ ಮಾಡಲಾಗಿದ್ದು, ಐ.ವಿ ವ್ಯವಸ್ಥೆಯನ್ನೊಳಗೊಂಡ ಬಸ್ನಲ್ಲಿ ವೆಂಟಿಲೇಟರ್ ಸೌಲಭ್ಯ ಅಳವಡಿಸಲಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಸೋಂಕಿತರ ಸಹಾಯಕ್ಕಾಗಿ ಕೆಎಸ್ಆರ್ಟಿಸಿ ವತಿಯಿಂದ ಸಂಚಾರಿ ಐಸಿಯುಗೆ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಚಾಲನೆ ನೀಡಿದ್ದಾರೆ. ನಗರದ ಪ್ರದೇಶಗಳಲ್ಲಿ ಐಸಿಯು ಬೆಡ್ಗಳಿಗೆ ಅಭಾವ ಸೃಷ್ಟಿಯಾಗಿರುವ ಕಾರಣದಿಂದ ಕೆಎಸ್ಆರ್ಟಿಸಿ ಬಸ್ಗಳನ್ನೇ ಸಂಚಾರಿ ಐಸಿಯುಗಳನ್ನಾಗಿ ಪರಿವರ್ತನೆ ಮಾಡಲಾಗಿದೆ. ಸುಮಾರು 5 ಐಸಿಯು ಬೆಡ್ಗಳಿರುವ ಬಸ್ಗಳು ಇಂದಿನಿಂದ ಕಾರ್ಯ ನಿರ್ವಹಿಸಲಿವೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ರೋಗಿಗಳ ಬಿಪಿ, ಆಕ್ಸಿಜನ್ ಪ್ರಮಾಣ, ಇಸಿಜಿ, ತಾಪಮಾನ ಇತ್ಯಾದಿಗಳನ್ನು ಪರಿಶೀಲಿಸಲು ವ್ಯವಸ್ಥೆ ಮಾಡಲಾಗಿದ್ದು, ಐ.ವಿ ವ್ಯವಸ್ಥೆಯನ್ನೊಳಗೊಂಡ ಬಸ್ನಲ್ಲಿ ವೆಂಟಿಲೇಟರ್ ಸೌಲಭ್ಯ ಅಳವಡಿಸಲಾಗುವುದು. ಪ್ರತಿಯೊಂದು ಬೆಡ್ಗೂ ಆಕ್ಸಿಜನ್ ವ್ಯವಸ್ಥೆ ಇರುವುದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ತುರ್ತು ಔಷಧಿ ವ್ಯವಸ್ಥೆ ಹಾಗೂ ಬಸ್ನಲ್ಲೇ ಜನರೇಟರ್ ವ್ಯವಸ್ಥೆ ಇರುವ ಐಸಿಯು ಬಸ್ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಚಾಲನೆ ಸಂದರ್ಭದಲ್ಲಿ ಲಕ್ಷ್ಮಣ ಸವದಿಗೆ ಸಚಿವ ಎಸ್.ಟಿ ಸೋಮಶೇಖರ್ ಸಾಥ್ ನೀಡಿದ್ದಾರೆ.
ಗ್ರೀನ್ ಕೋ ಸಂಸ್ಥೆಯಿಂದ ಉಚಿತವಾಗಿ ಆಕ್ಸಿಜನ್ ಸಾಂದ್ರಕ ಕರ್ನಾಟಕದಲ್ಲಿ ಆಕ್ಸಿಜನ್ ಕೊರತೆ ಹಿನ್ನೆಲೆ ಆಕ್ಸಿಜನ್ ಸಾಂದ್ರಕ ಹಸ್ತಾಂತರಿಸುವಂತೆ ಆರೋಗ್ಯ ಸಚಿವ ಡಾ.ಸುಧಾಕರ್ ಮಾಡಿದ್ದ ಮನವಿಗೆ ಸ್ಪಂದಿಸಿದ ಗ್ರೀನ್ ಕೋ ಸಂಸ್ಥೆ ರಾಜ್ಯಕ್ಕೆ ಆಕ್ಸಿಜನ್ ಸಾಂದ್ರಕಗಳನ್ನು ಹಸ್ತಾಂತರ ಮಾಡಲು ಒಪ್ಪಿದೆ. ಆ ಪ್ರಕಾರವಾಗಿ ಇಂದು (ಮೇ 19) 200 ಸಾಂದ್ರಕಗಳು ಸರ್ಕಾರದ ಕೈ ಸೇರಲಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಡಾ.ಕೆ.ಸುಧಾಕರ್ ಆಮ್ಲಜನಕದ ಸಾಂದ್ರಕಗಳನ್ನು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: Lockdown Relief Fund: ಅಸಂಘಟಿತ ಕಾರ್ಮಿಕರು, ರಿಕ್ಷಾ ಡ್ರೈವರ್ಸ್, ಹೂ ಬೆಳೆಗಾರರಿಗೆ ಆರ್ಥಿಕ ಸಹಾಯ ಘೋಷಿಸಿದ ಸಿಎಂ ಯಡಿಯೂರಪ್ಪ
‘ಹೆಲ್ತ್ ಆ್ಯಂಡ್ ವೆಲ್‌ನೆಸ್ ಕೇಂದ್ರಗಳಲ್ಲಿ ನಾವೇ ನಂ.1; ಟ್ವಿಟರ್ನಲ್ಲಿ ಸಮಾಧಾನ ವ್ಯಕ್ತಪಡಿಸಿದ ಡಾ. ಕೆ.ಸುಧಾಕರ್