ಗದಗ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ಎಡವಟ್ಟಿಗೆ ಮಹಿಳೆ ಬಲಿ; ಸಂಬಂಧಿಕರ ಆರೋಪ
ಅಲ್ಟರ್ನೇಟಿವ್ ಆಕ್ಸಿಜನ್ ವ್ಯವಸ್ಥೆ ಮಾಡಿ ಅಂತ ಕುಟುಂಬಸ್ಥರು ಸಿಬ್ಬಂದಿ ಬಳಿ ಕೇಳಿಕೊಂಡರು ಸಿಬ್ಬಂದಿ ಮಾತ್ರ ಕ್ಯಾರೆ ಅನ್ನಲಿಲ್ಲ. ಇದೇ ವೇಳೆ ಉಸಿರಾಟದ ಸಮಸ್ಯೆ ಆಗಿ ಮಹಿಳೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ಗದಗ ಜೀಮ್ಸ್ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಗದಗ: ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಆಸ್ಪತ್ರೆ ಸಿಬ್ಬಂದಿ ಎಡವಟ್ಟಿಗೆ ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಉಸಿರಾಟ ಸಮಸ್ಯೆಯಿಂದ ಒದ್ದಾಡುತ್ತಿದ್ದ ಸುಮಿತ್ರಾ ಮನ್ನೂರ ಎಂಬ ಮಹಿಳೆ ಆಕ್ಸಿಜನ್ ಸಿಗದೆ ಮಹಿಳೆ ನರಳಿ ನರಳಿ ಮೃತಪಟ್ಟಿದ್ದಾರೆ ಎಂದು ಮಹಿಳೆ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಮಹಿಳೆ ಆಕ್ಸಿಜನ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದರು. ಆಕ್ಸಿಜನ್ ತೆಗೆದು ಬೇರೆ ಮಷಿನ್ನನ್ನು ಅಳವಡಿಸಲು ಆಸ್ಪತ್ರೆ ಸಿಬ್ಬಂದಿ ಬಂದಿದ್ದರು. ಅಲ್ಟ್ರನೇಟಿವ್ ಆಕ್ಸಿಜನ್ ವ್ಯವಸ್ಥೆ ಮಾಡಿ ಅಂತ ಕುಟುಂಬಸ್ಥರು ಗೋಗರೆದರೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ.
ಅಲ್ಟರ್ನೇಟಿವ್ ಆಕ್ಸಿಜನ್ ವ್ಯವಸ್ಥೆ ಮಾಡಿ ಅಂತ ಕುಟುಂಬಸ್ಥರು ಸಿಬ್ಬಂದಿ ಬಳಿ ಕೇಳಿಕೊಂಡರು ಸಿಬ್ಬಂದಿ ಮಾತ್ರ ಕ್ಯಾರೆ ಅನ್ನಲಿಲ್ಲ. ಇದೇ ವೇಳೆ ಉಸಿರಾಟದ ಸಮಸ್ಯೆ ಆಗಿ ಮಹಿಳೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ಗದಗ ಜೀಮ್ಸ್ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಗದಗ ಜಿಮ್ಸ್ ಆಸ್ಪತ್ರೆ ಅವ್ಯವಸ್ಥೆಗೆ ನಸುಕಿನ ಜಾವ 4.30 ಗಂಟೆ ಸುಮಾರಿಗೆ ಮಹಿಳೆ ಸಾವನ್ನಪ್ಪಿದ್ದಾರೆ. ತನ್ನ ಕಣ್ಣು ಮುಂದೆಯೇ ಅಕ್ಕನ ಜೀವ ಹೋಗಿದ್ದನ್ನು ಕಂಡು ಸಹೋದರಿ ಕಣ್ಣೀರು ಹಾಕಿದ್ದಾರೆ. ಧಾರವಾಡ ಪಾಲಿಕೆ ಬಿಲ್ ಕಲೆಕ್ಟರ್ ಕೊರೊನಾಗೆ ಬಲಿ ಧಾರವಾಡ: ಪಾಲಿಕೆಯ ಬಿಲ್ ಕಲೆಕ್ಟರ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಮಹಾನಗರ ಪಾಲಿಕೆಯ 3ನೇ ವಲಯದ ಸಿಬ್ಬಂದಿಯಾದ ರಾಜು ಅಷ್ಟೇಕರ್ ಮಹಾಮಾರಿ ಕೊರೊನಾದಿಂದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 40 ವರ್ಷದ ರಾಜುಗೆ 10 ದಿನಗಳ ಹಿಂದೆ ಕೊರೊನಾ ದೃಢಪಟ್ಟಿತ್ತು. ಹೀಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಲಸಿಕೆ ಹಾಕಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದರು ರಾಜು ನಿರ್ಲಕ್ಷ್ಯ ತೋರಿದ್ದರು.
ಇದನ್ನೂ ಓದಿ
ಹೆಣದ ಮೇಲೆ ಹಣ ಮಾಡಬೇಡಿ, ನಿಮಗೆ ಒಳ್ಳೆಯದಾಗಲ್ಲ; ಸರ್ಕಾರದ ವಿರುದ್ಧ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಆಕ್ರೋಶ
ಹಾಸನದಲ್ಲಿ ರೈಲಿಗೆ ಸಿಲುಕಿ ಕಾಡಾನೆ ಸಾವು; ರಾತ್ರೋ ರಾತ್ರಿ ತೆರವು ಕಾರ್ಯಾಚರಣೆ ನಡೆಸಿದ ರೈಲ್ವೆ ಇಲಾಖೆ
(relatives of deceased woman have expressed outrage against staff of Gadag GIMS Hospital)
Published On - 12:06 pm, Wed, 19 May 21