AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದಲ್ಲಿ ರೈಲಿಗೆ ಸಿಲುಕಿ ಕಾಡಾನೆ ಸಾವು; ರಾತ್ರೋ ರಾತ್ರಿ ತೆರವು ಕಾರ್ಯಾಚರಣೆ ನಡೆಸಿದ ರೈಲ್ವೆ ಇಲಾಖೆ

ರೈಲಿಗೆ ಸಿಕ್ಕ ಪರಿಣಾಮ ಕಾಡಾನೆ ಸ್ಥಳದಲ್ಲೇ ಕೊನೆಯುಸಿರೆಳೆದಿದೆ. ಈ ಅಪಘಾತದಲ್ಲಿ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಎಲ್ಲರೂ ಜೀವಾಪಾಯದಿಂದ ಪಾರಾಗಿದ್ದಾರೆ. ರೈಲು ಅಪಘಾತದಲ್ಲಿ ಸಾವನ್ನಪ್ಪಿರುವ ಕಾಡಾನೆ ಮೃತದೇಹವನ್ನು ರೈಲ್ವೆ ಇಲಾಖೆ ರಾತ್ರೋ ರಾತ್ರಿ ತೆರವು ಕಾರ್ಯಾಚರಣೆ ನಡೆಸಿದೆ.

ಹಾಸನದಲ್ಲಿ ರೈಲಿಗೆ ಸಿಲುಕಿ ಕಾಡಾನೆ ಸಾವು; ರಾತ್ರೋ ರಾತ್ರಿ ತೆರವು ಕಾರ್ಯಾಚರಣೆ ನಡೆಸಿದ ರೈಲ್ವೆ ಇಲಾಖೆ
ರೈಲಿಗೆ ಸಿಕ್ಕಿ ಸಾವನ್ನಪ್ಪಿದ ಆನೆ
sandhya thejappa
|

Updated on: May 19, 2021 | 10:51 AM

Share

ಹಾಸನ: ಮಲೆನಾಡು ಭಾಗದಲ್ಲಿ ಕಾಡಾನೆ ಸಂತತಿ ಹೆಚ್ಚುತ್ತಿದೆ. ಗುಂಪಿನಿಂದ ಬೇರ್ಪಟ್ಟಿದ್ದ ಒಂಟಿ ಸಲಗವೊಂದು ಧಾರುಣವಾಗಿ ಮೃತಪಟ್ಟಿದೆ. ರೈಲಿಗೆ ಕಾಡಾನೆ ಸಿಲುಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಹಸಿಡೆ ಬಳಿ ಸಂಭವಿಸಿದೆ. ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದ ಒಂಟಿ ಸಲಗ ಕೆಲ ದಿನಗಳಿಂದ ರೈಲ್ವೆ ಹಳಿ ಮೇಲೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಳ್ಳುತ್ತಿತ್ತು.

ರೈಲಿಗೆ ಸಿಕ್ಕ ಪರಿಣಾಮ ಕಾಡಾನೆ ಸ್ಥಳದಲ್ಲೇ ಕೊನೆಯುಸಿರೆಳೆದಿದೆ. ಈ ಅಪಘಾತದಲ್ಲಿ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಎಲ್ಲರೂ ಜೀವಾಪಾಯದಿಂದ ಪಾರಾಗಿದ್ದಾರೆ. ರೈಲು ಅಪಘಾತದಲ್ಲಿ ಸಾವನ್ನಪ್ಪಿರುವ ಕಾಡಾನೆ ಮೃತದೇಹವನ್ನು ರೈಲ್ವೆ ಇಲಾಖೆ ರಾತ್ರೋ ರಾತ್ರಿ ತೆರವು ಕಾರ್ಯಾಚರಣೆ ನಡೆಸಿದೆ. ಸದ್ಯ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂದಕಕ್ಕೆ ಬಿದ್ದಿದ್ದ ಕಾಡಾನೆಯ ರಕ್ಷಣೆ ಮಡಿಕೇರಿ: ಕರಡಿಗೋಡಿನಲ್ಲಿ ಕಂದಕಕ್ಕೆ ಬಿದ್ದಿದ್ದ ಕಾಡಾನೆಯನ್ನು ರಕ್ಷಣೆ ಮಾಡಲಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗ್ರಾಮ ಕರಡಿಗೋಡಿನಲ್ಲಿ ಈ ಘಟನೆ ನಡೆದಿದೆ. ಮಾಲ್ದಾರೆ ಮೀಸಲು ಅರಣ್ಯದಿಂದ ಬಂದಿದ್ದ ಕಾಡಾನೆ ಕಾಫಿ ತೋಟ ಪ್ರವೇಶಿಸುವ ಯತ್ನದಲ್ಲಿ ಕಂದಕಕ್ಕೆ ಜಾರಿ ಬಿದ್ದಿದೆ. ಕಂದದಲ್ಲಿ ಕೆಸರಿದ್ದ ಕಾರಣ ಆನೆಗೆ ಮೇಲೇಳಲಾಗದೆ ಪರದಾಟ ಪಡುತ್ತಿತ್ತು. ಕಂದಕ್ಕೆ ಬಿದ್ದು ಮೇಲಕ್ಕೆ ಬರಲು ಒದ್ದಾಡುತ್ತಿದ್ದ ಆನೆಯನ್ನು ಮೇಲೆತ್ತಲು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ತಂದು ಆನೆಯನ್ನು ರಕ್ಷಿಸಿದೆ.

ಕಂದಕ್ಕೆ ಬಿದ್ದ ಆನೆಯನ್ನು ಜೆಸಿಬಿ ಮೂಲಕ ಮೇಲಕ್ಕೆ ಎತ್ತಲಾಗಿದೆ

ಇದನ್ನೂ ಓದಿ

ದಾವಣಗೆರೆ: ಕೆಲ ತಿಂಗಳಿಂದ ಆಸ್ಪತ್ರೆಗೆ ಗೈರಾಗುತ್ತಿರುವ ವೈದ್ಯರು, ಸಿಬ್ಬಂದಿ; ಆಸ್ಪತ್ರೆಯ ಮುಂದೆ ಗ್ರಾಮಸ್ಥರ ಪ್ರತಿಭಟನೆ

ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ ಅರ್ಚಕರ ಸಮುದಾಯ, ಸರ್ಕಾರದಿಂದ ಪರಿಹಾರಕ್ಕಾಗಿ ಮನವಿ

(elephant was killed when a train collided at hassan)