AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಕೆಲ ತಿಂಗಳಿಂದ ಆಸ್ಪತ್ರೆಗೆ ಗೈರಾಗುತ್ತಿರುವ ವೈದ್ಯರು, ಸಿಬ್ಬಂದಿ; ಆಸ್ಪತ್ರೆಯ ಮುಂದೆ ಗ್ರಾಮಸ್ಥರ ಪ್ರತಿಭಟನೆ

ಕಳೆದ ಕೆಲ ತಿಂಗಳಿಂದ ಇಲ್ಲಿನ ಸಿಬ್ಬಂದಿಗಳು ಸೇವೆಗೆ ಗೈರು ಹಾಜರಾಗುತ್ತಿದ್ದಾರೆ. ಮುಸ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳ ಗ್ರಾಮಸ್ಥರು ವೈದ್ಯರಿಗಾಗಿ ಕಾಯ್ದು ಕುಳಿತುಕೊಳ್ಳುವುದು ಅನಿವಾರ್ಯವಾಗಿದೆ. ನಿತ್ಯ ಆಶಾ ಕಾರ್ಯಕರ್ತೆಯರು ಆಸ್ಪತ್ರೆಯ ಬಾಗಿಲು ತೆರೆಯುತ್ತಿದ್ದಾರೆ.

ದಾವಣಗೆರೆ: ಕೆಲ ತಿಂಗಳಿಂದ ಆಸ್ಪತ್ರೆಗೆ ಗೈರಾಗುತ್ತಿರುವ ವೈದ್ಯರು, ಸಿಬ್ಬಂದಿ; ಆಸ್ಪತ್ರೆಯ ಮುಂದೆ ಗ್ರಾಮಸ್ಥರ ಪ್ರತಿಭಟನೆ
ವೈದ್ಯರಿಲ್ಲದೆ ಆಸ್ಪತ್ರೆ ಹೊರಗಡೆ ನಿಂತಿರುವ ಜನ
sandhya thejappa
|

Updated on: May 19, 2021 | 9:44 AM

Share

ದಾವಣಗೆರೆ: ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಆದರೆ ಈ ಸಂದಿಗ್ಧ ಕಾಲದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಗೆ ಬರುತ್ತಿಲ್ಲ ಅಂತ ಗ್ರಾಮಸ್ಥರು ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮುಸ್ಟೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಬರುತ್ತಿಲ್ಲವೆಂದು ಆರೋಗ್ಯ ಕೇಂದ್ರದ ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲ ತಿಂಗಳಿಂದ ಇಲ್ಲಿನ ಸಿಬ್ಬಂದಿಗಳು ಸೇವೆಗೆ ಗೈರು ಹಾಜರಾಗುತ್ತಿದ್ದಾರೆ. ಮುಸ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳ ಗ್ರಾಮಸ್ಥರು ವೈದ್ಯರಿಗಾಗಿ ಕಾಯ್ದು ಕುಳಿತುಕೊಳ್ಳುವುದು ಅನಿವಾರ್ಯವಾಗಿದೆ. ನಿತ್ಯ ಆಶಾ ಕಾರ್ಯಕರ್ತೆಯರು ಆಸ್ಪತ್ರೆಯ ಬಾಗಿಲು ತೆರೆಯುತ್ತಿದ್ದಾರೆ. ಹೀಗಾಗಿ ಆಸ್ಪತ್ರೆ ಮುಂದೆ ಪ್ರತಿಭಟಿಸಿದ ಗ್ರಾಮಸ್ಥರು ವೈದ್ಯರು ಹಾಗೂ ಸಿಬ್ಬಂದಿ ಸೇವೆಗೆ ಹಾಜರಾಗುವಂತೆ ಆಗ್ರಹಿಸಿದ್ದಾರೆ. ಜೊತೆಗೆ ತಾಲೂಕು ವೈದ್ಯಾಧಿಕಾರಿ ಹಾಗೂ ಜಿಲ್ಲಾ ವೈದ್ಯಾಧಿಕಾರಿಗೆ ಗ್ರಾಮಸ್ಥರು ಮನವಿ ಕಳುಹಿಸಿದ್ದಾರೆ.

ಸ್ವಯಂ ನಿಯಂತ್ರಣಕ್ಕೆ ಮುಂದಾದ ಗ್ರಾಮಸ್ಥರು ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ದಾವಣಗೆರೆ ತಾಲೂಕಿನ ಎಲೆಬೇತೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಲ್ಕು ಗ್ರಾಮದ ಜನರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಇಡಿ ಗ್ರಾಮಗಳನ್ನು ಸ್ಯಾನಿಟೈಜ್ ಮಾಡುವ ಮೂಲಕ ತಮ್ಮ ತಮ್ಮ ಗ್ರಾಮಕ್ಕೆ ಪರಸ್ಥಳದವರು ಬಾರದಂತೆ ಕ್ರಮ ಕೈಗೊಂಡಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜಣ್ಣ ನೇತ್ರತ್ವದಲ್ಲಿ ಗ್ರಾಮಗಳಲ್ಲಿ ಅರಿವು ಕಾರ್ಯಕ್ರಮ ನಡೆಯುತ್ತಿದೆ. ಗ್ರಾಮಗಳಲ್ಲಿ ಸೋಂಕಿತರು ಕಂಡು ಬಂದರೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ ಸೂಕ್ತ ಚಿಕಿತ್ಸೆ ನೀಡುವುದಕ್ಕೆ ನಿರ್ಧಾರ ಮಾಡಿದ್ದಾರೆ.

ಆ್ಯಂಬುಲೆನ್ಸ್ ನೀಡಿದ ಶಾಸಕ ಎಸ್ ರಾಮಪ್ಪ ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಸಾರ್ವಜನಿಕರ ಸೇವೆಗಾಗಿ ಎರಡು ಆಕ್ಸಿಜನ್ ಸೌಲಭ್ಯ ಇರುವ ಆ್ಯಂಬುಲೆನ್ಸ್ನ ನೀಡಿದ್ದಾರೆ. ಆ್ಯಂಬುಲೆನ್ಸ್ಗಳು ಕೊವಿಡ್ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ಬಳಕೆಯಾಗುತ್ತದೆ. ಹರಿಹರ ತಾಲೂಕಿನ ಮಲೇಬೆನ್ನೂರು ಹಾಗೂ ಹರಿಹರ ನಗರದಲ್ಲಿ ತಲಾ ಒಂದು ಅಂಬುಲೆನ್ಸ್ ನೀಡಿದ್ದಾರೆ.

ಟೀಕೆ ಬಿಟ್ಟು ಸಂಕಷ್ಟದಲ್ಲಿನ ಜನಕ್ಕೆ ಸ್ಪಂದಿಸಿ. ಇದು ಸಂಕಷ್ಟದ ಕಾಲ. ಜನ ಸಾವನ್ನಪ್ಪುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಬೇಡ. ಜನರ ಸಂಕಷ್ಟಕ್ಕೆ ಸ್ಪಂದಿಸಿ. ಹರಿಹರ ತಾಲೂಕಿನಲ್ಲಿ ದಾವಣಗೆರೆ ಬಿಟ್ಟರೇ ಅತಿ ಹೆಚ್ಚು ಸೋಂಕಿತರು ಇದ್ದಾರೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಕಡಿಮೆ ಇದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಇದನ್ನು ಬಿಟ್ಟು ನಮ್ಮ ರಾಜಕೀಯ ಎದುರಾಳಿಗಳು ಟೀಕೆ ಮಾಡುತ್ತ ಸುತ್ತಾಡುವುದು ಸರಿಯಲ್ಲ ಎಂದು ಶಾಸಕ ಎಸ್.ರಾಮಪ್ಪ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ

ಕೊವಿಡ್ ಕೇರ್ ಸೆಂಟರ್​ನಲ್ಲಿ ಸುಗಮ ಸಂಗೀತ ಕಾರ್ಯಕ್ರಮ.. ಹಾಡು ಕೇಳಿ ನೋವು ಮರೆತ ಸೋಂಕಿತರು

ಇಂದಿನಿಂದ ಐದು ದಿನ ಸಂಪೂರ್ಣ ಲಾಕ್​ಡೌನ್; ಕೊರೊನಾ ತಡೆಯಲು ಬಳ್ಳಾರಿ ಜಿಲ್ಲಾಡಳಿತದಿಂದ ಮಹತ್ವದ ನಿರ್ಧಾರ

(villagers have protested in front of hospital for not coming doctors to hospital from several month at davanagere)