ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ತಂದೆ ಜೊತೆ ಸದ್ಯಕ್ಕೆ ಮಾತನಾಡುವುದಿಲ್ಲ ಎಂದು ಕೋರ್ಟ್​ಗೆ ತಿಳಿಸಿದ ಯುವತಿ

ramesh jarkiholi cd case:

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ತಂದೆ ಜೊತೆ ಸದ್ಯಕ್ಕೆ ಮಾತನಾಡುವುದಿಲ್ಲ ಎಂದು ಕೋರ್ಟ್​ಗೆ ತಿಳಿಸಿದ ಯುವತಿ
ಕರ್ನಾಟಕ ಹೈಕೋರ್ಟ್
Follow us
ಸಾಧು ಶ್ರೀನಾಥ್​
|

Updated on:May 31, 2021 | 4:03 PM

ಧಾರವಾಡ: ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದಲ್ಲಿ ಸಂತ್ರಸ್ತ ಯುವತಿಯ ತಂದೆ ಧಾರವಾಡ ಹೈಕೋರ್ಟ್ ಪೀಠಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ತಮ್ಮ ಮಗಳನ್ನು ಮಾತನಾಡುವುದಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದರು. ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ಪೀಠವು ಯುವತಿ ಇರುವ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಲು ರಿಜಿಸ್ಟ್ರಾರ್ ಜನರಲ್‌ಗೆ ಸೂಚಿಸಿತ್ತು. ಅದರಂತೆ ರಿಜಿಸ್ಟ್ರಾರ್ ಜನರಲ್ ಶಿವಶಂಕರೇಗೌಡ ಅವರು ಜಂಟಿ ರಿಜಿಸ್ಟ್ರಾರ್ ವರಲಕ್ಷ್ಮೀ ಅವರೊಂದಿಗೆ ಯುವತಿ ನಿವಾಸಕ್ಕೆ ಭೇಟಿ ನೀಡಿದ್ದರು. ಆ ವೇಳೆ ತಂದೆಯ ಆಪೇಕ್ಷೆಯಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಂದೆಯೊಂದಿಗೆ ಸಮಾಲೋಚಿಸಲು ಯುವತಿಗೆ ಅವಕಾಶ ನೀಡಲಾಯಿತು. ಆದರೆ ಯುವತಿ ಅದಕ್ಕೆ ನಕಾರ ಸೂಚಿಸಿದರು. ಇದೇ ವೇಳೆ ಅಕ್ರಮ ಬಂಧನದ ಆರೋಪವನ್ನು ಸಹ ಯುವತಿ ನಿರಾಕರಿಸಿದರು.

ಎಲ್ಲವೂ ಸರಿ ಹೋದಾಗ ತಂದೆ ಜೊತೆ ಮಾತನಾಡುತ್ತೇನೆ. ತಂದೆಯೊಂದಿಗೆ ಸದ್ಯ ಮಾತನಾಡುವುದಿಲ್ಲವೆಂದು ಸಂತ್ರಸ್ತ ಯುವತಿ ಕೋರ್ಟ್​ಗೆ ಮನವರಿಕೆ ಮಾಡಿದರು. ಜೊತೆಗೆ ಅಕ್ರಮ ಬಂಧನದ ಆರೋಪ ನಿರಾಕರಿಸಿದ ಹಿನ್ನೆಲೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ಪೀಠವು ಇತ್ಯರ್ಥಪಡಿಸಿತು.

ವಿಡಿಯೋ ಕಾನ್ಫರೆನ್ಸ್ ಮೂಲಕ ಯುವತಿಯ ಹೇಳಿಕೆ ಪಡೆದ ಧಾರವಾಡ ಹೈಕೋರ್ಟ್ ಪೀಠದ ನ್ಯಾ. ಎಸ್. ಕೃಷ್ಣ ದೀಕ್ಷಿತ್ ಮತ್ತು ನ್ಯಾ. ಪ್ರದೀಪ್‌ ಸಿಂಗ್ ಯೆರೂರ್‌ ಅವರಿದ್ದ ಹೈಕೋರ್ಟ್ ಪೀಠವು ಯುವತಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿತು.

(ramesh jarkiholi cd case woman refuses to talk with her father high court clears habeas corpus application)

ಇದನ್ನು ಓದಿ:

ಕೊವಿಡ್​ ಮತ್ತೆ ಆವರಿಸಿದೆ ಚೀನಾದಲ್ಲಿ… ಲಸಿಕೆ ಪಡೆಯಲು ಜನ ಪರದಾಟ; ಹೊಸ ಕೇಸ್​ ಪತ್ತೆಯಾಗುತ್ತಿದ್ದಂತೆ ವಿಮಾನ ಹಾರಾಟ ರದ್ದು

Published On - 3:56 pm, Mon, 31 May 21