ಕೊವಿಡ್​ ಮತ್ತೆ ಆವರಿಸಿದೆ ಚೀನಾದಲ್ಲಿ… ಲಸಿಕೆ ಪಡೆಯಲು ಜನ ಪರದಾಟ; ಹೊಸ ಕೇಸ್​ ಪತ್ತೆಯಾಗುತ್ತಿದ್ದಂತೆ ವಿಮಾನ ಹಾರಾಟ ರದ್ದು

Fresh Covid-19 in China: COVID-19 ವಿರುದ್ಧ ಚೀನಾ ಜಯ ಸಾಧಿಸಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಹೇಳಿದ್ದರೂ ಅಲ್ಲಿ ಕೊರೊನಾ ಸೋಂಕು ಮತ್ತೆ ತಾಂಡವವಾಡುತ್ತಿರುವುದು ನೋಡಿದರೆ ಚೀನಾ ಇನ್ನೂ ಕೋವಿಡ್​ ವಿರುದ್ಧ ಜಯ ಸಾಧಿಸಿಲ್ಲ ಎನ್ನಬಹುದು.

ಕೊವಿಡ್​ ಮತ್ತೆ ಆವರಿಸಿದೆ ಚೀನಾದಲ್ಲಿ... ಲಸಿಕೆ ಪಡೆಯಲು ಜನ ಪರದಾಟ; ಹೊಸ ಕೇಸ್​ ಪತ್ತೆಯಾಗುತ್ತಿದ್ದಂತೆ ವಿಮಾನ ಹಾರಾಟ ರದ್ದು
ಕೊವಿಡ್​ ಮತ್ತೆ ಆವರಿಸಿದೆ ಚೀನಾದಲ್ಲಿ... ಲಸಿಕೆ ಪಡೆಯಲು ಪರದಾಡುತ್ತಿದ್ದಾರೆ
Follow us
ಸಾಧು ಶ್ರೀನಾಥ್​
|

Updated on:May 31, 2021 | 1:36 PM

ಬೀಜಿಂಗ್: ಕೊರೊನಾ ವೈರಸ್​ ಕೃತಕವಾಗಿ​ ಉದ್ಭವವಾಗಿದ್ದೇ ವುಹಾನ್ ಪ್ರಯೋಗಾಲಾಯದಲ್ಲಿ ಎಂದು ಇಡೀ ಜಗತ್ತೇ ನಂಬಿದೆ. ಆದರೆ ಅದು ಅಲ್ಲಿಂದಲ್ಲ; ಆದು ನಾನಲ್ಲ ನಾನಲ್ಲ ಅನ್ನುತ್ತಿದೆ ಚೀನಾ ಗಣರಾಜ್ಯ ಕಳೆದ ಒಂದೂವರೆ ವರ್ಷದಿಂದ. ಪರಿಸ್ಥಿತಿ ಹೀಗಿರುವಾಗ ಅದೇ ಚೀನಾದಲ್ಲಿ ಮತ್ತೆ ಕೊವಿಡ್ ಮಹಾಮಾರಿ​ ಆವರಿಸಿದೆ… ಇದು ಮತ್ತೊಂದು ಅಲೆ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಜನರು ಲಸಿಕೆ ಪಡೆಯಲು ಸರದಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದಾರೆ; ಹೊಸ ಕೇಸ್​ ಪತ್ತೆಯಾಗುತ್ತಿದ್ದಂತೆ ವಿಮಾನ ಹಾರಾಟಗಳು ರದ್ದಾಗಿವೆ. ಗಾಂಗ್​ಝೋ ಎಂಬ ನಗರದಿಂದ ಹಾರಾಡುವ ಎಲ್ಲ ವಿಮಾನಗಳನ್ನು ಕೆಳಗಿಳಿಸಲಾಗಿದೆ. ಮೇ 21ರಿಂದ ಕೊರೊನಾ ಮರುಕಳಿಸಿದೆ. ಇದು ಇಂದಿನ ಚೀನಾದ ದುಃಸ್ಥಿತಿ.

ಚೀನಾದಲ್ಲಿ ಅಲ್ಲಲ್ಲಿ ಕೊರೊನಾ ವೈರಸ್ ಜೋರಾಗಿಯೇ ಕಾಣಿಸಿಕೊಳ್ಳತೊಡಗಿದೆ. ಅದು ಮತ್ತೆ ಪೆಡಂಭೂತವಾಗಿ ಗೋಚರವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಗಾಂಗ್​ಝೋ ನಗರದಲ್ಲಿ ಲಾಕ್​ಡೌನ್ ಮಾದರಿ ಕಟ್ಟುನಿಟ್ಟಿನ ಕ್ರಮಗಳನ್ನು ಶನಿವಾರದಿಂದ ಜಾರಿಗೆ ತರಲಾಗಿದೆ. ನಗರದಲ್ಲಿ ಐದೈದು ರಸ್ತೆಗಳನ್ನು ಒಂದು ಮಾಡಿ ಜನ ಓಡಾಡದಂತೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ವಸ್ತು ಪೂರೈಕೆಗೆ ಸ್ಥಳೀಯ ಆಡಳಿತವೇ ಕ್ರಮಗಳನ್ನು ಕೈಗೊಂಡಿದೆ. ಕೊರೊನಾ ಜೋರಾಗಿ ಕಾಡತೊಗಿದ್ದು ಲಾಕ್​ಡೌನ್ ಎಷ್ಟು ದಿನಗಳ ಕಾಲ ಜಾರಿಯಲ್ಲಿರಲಿದೆ ಎಂಬುದನ್ನು ಅಧಿಕಾರಿಗಳು ತಿಳಿಸಿಲ್ಲ.

ಶಾಲೆ-ಕಾಲೇಜು ಬಂದ್​ ಆಗಿವೆ. ಒಳಾಂಗಣ ಕ್ರೀಡೆ, ಸಗಟು ಮಾರುಕಟ್ಟೆಗಳು, ಮಾಲ್​ಗಳು, ಹೋಟೆಲ್ಗಳಿಗೆ ಅದಾಗಲೇ ಬೀಗ ಹಾಕಲಾಗಿದೆ. ಗಾಂಗ್​ಝೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Guangzhou Baiyun International Airport) 519 ವಿಮಾನಗಳ ಹರಾಟವನ್ನು ಸ್ಥಗಿತಗೊಳಿಸಲಾಗಿದೆ. ಇಡೀ ವಿಶ್ವವೇ ಕೊರೊನಾದಿಂದ ತತ್ತರಿಸುತ್ತಿದ್ದಾಗ ಕಳೆದ ವರ್ಷ ಕೊರೊನಾ ಸೋಕು ಕಾಣಿಸಿಕೊಂಡ ಬಳಿಕ ಈ ವಿಮಾಣ ನಿಲ್ದಾಣದಿಂದ ಐದು ಕೋಟಿ ಮಂದಿ ವಿಮಾನ ಪ್ರಯಾಣ ಬೆಳೆಸಿದ್ದರು.

ಜನ ಈಗ ರೈಲು, ನಗರ ಸಾರಿಗೆ ಬಸ್ಸುಗಳಲ್ಲಿ ಸಂಚರಿಸಬೇಕೆಂದರೆ ಕೊರೊನಾ ನೆಗೆಟೀವ್ ರಿಪೋರ್ಟ್​ ತೋರಿಸುವುದು ಕಡ್ಡಾಯವಾಗಿದೆ. ಮೇ 21ರಿಂದ ಕೊರೊನಾ ಮರುಕಳಿಸಿದೆ. ಹಾಗಾಗಿ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಿದ್ದು, ಕೊರೊನಾ ನಿಗ್ರಹಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮೇ 30ರ ಅಂಕಿ ಅಂಶಗಳ ಪ್ರಕಾರ ಚೀನಾದಲ್ಲಿ ಸುಮಾರು 1 ಲಕ್ಷ ಸೋಕು ಪ್ರಕರಣಗಳು ಪತ್ತೆಯಾಗಿವೆ. ಸಾವಿನ ಸಂಖ್ಯೆ ಒಟ್ಟು 4,636 ಮಾತ್ರವೇ ಇದೆ.

COVID-19 ವಿರುದ್ಧ ಚೀನಾ ಜಯ ಸಾಧಿಸಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಹೇಳಿದ್ದರೂ ಅಲ್ಲಿ ಕೊರೊನಾ ಸೋಂಕು ಮತ್ತೆ ತಾಂಡವವಾಡುತ್ತಿರುವುದು ನೋಡಿದರೆ ಚೀನಾ ಇನ್ನೂ ಕೋವಿಡ್​ ವಿರುದ್ಧ ಜಯ ಸಾಧಿಸಿಲ್ಲ ಎನ್ನಬಹುದು.

(Fresh Covid-19 outbreak in Guangzhou China China not yet defeated the virus entirely)

ವುಹಾನ್ ಲ್ಯಾಬ್‌ನಿಂದ ಕೊರೊನಾ ವೈರಸ್ ಸೋರಿಕೆಯಾಗಿದೆ.. ಈಗ ಬ್ರಿಟಿನ್ ಇಂಟಲಿಜೆನ್ಸ್‌ ಸಹ ಅದನ್ನೇ ಹೇಳುತ್ತಿದೆ

Published On - 1:35 pm, Mon, 31 May 21