ವುಹಾನ್ ಲ್ಯಾಬ್‌ನಿಂದ ಕೊರೊನಾ ವೈರಸ್ ಸೋರಿಕೆಯಾಗಿದೆ.. ಈಗ ಬ್ರಿಟಿನ್ ಇಂಟಲಿಜೆನ್ಸ್ ಸಹ ಅದನ್ನೇ ಹೇಳುತ್ತಿದೆ
ವೈರಸ್ ಮೂಲದ ಬಗ್ಗೆ ಸಮಗ್ರ, ವಿಸ್ತೃತ ತನಿಖೆಗೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಾಗಿದೆ. ಈಗಾಗಲೇ ಆಮೆರಿಕಾ, ಭಾರತ ಸಮಗ್ರ ತನಿಖೆಗೆ ಒತ್ತಾಯ ಮಾಡಿತ್ತು. ಆದರೆ ಈ ಮೊದಲು ವುಹಾನ್ ಲ್ಯಾಬ್ನಿಂದ ವೈರಸ್ ಸೋರಿಕೆ ವಾದವನ್ನು ಬ್ರಿಟನ್ ಅಷ್ಟಾಗಿ ಒಪ್ಪಿರಲಿಲ್ಲ. ಸದ್ಯ ಈಗ ಈ ಬಗ್ಗೆ ಬ್ರಿಟಿನ್ ಇಂಟಲಿಜೆನ್ಸ್ ವರದಿ ಮಾಡಿದ್ದು ವುಹಾನ್‌ನಿಂದ ಕೊರೊನಾ ಸೋರಿಕೆಯಾಗಿದೆ ಎಂದು ನಿರ್ಧಾರ ಮಾಡಿದೆ.
ಲಂಡನ್: ವುಹಾನ್ ಲ್ಯಾಬ್‌ನಿಂದ ಕೊರೊನಾ ವೈರಸ್ ಸೋರಿಕೆಯಾಗಿದೆ. ವೈರಸ್ ಲ್ಯಾಬ್‌ನಿಂದ ಸೋರಿಕೆ ಸಾಧ್ಯತೆಯೇ ಹೆಚ್ಚು ಎಂದು ಬ್ರಿಟಿನ್ ಇಂಟಲಿಜೆನ್ಸ್ ವರದಿ ಮಾಡಿದೆ. ಹೀಗಾಗಿ ವೈರಸ್ ಸೋರಿಕೆ ಬಗ್ಗೆ WHO ಸಮಗ್ರ ತನಿಖೆ ನಡೆಸಬೇಕು ಎಂದು WHOಗೆ ಬ್ರಿಟನ್‌ನ ಲಸಿಕೆ ಸಚಿವ ನದೀಮ್ ಜಾವಯಿ ಒತ್ತಾಯ ಮಾಡಿದ್ದಾರೆ.
ವೈರಸ್ ಮೂಲದ ಬಗ್ಗೆ ಸಮಗ್ರ, ವಿಸ್ತೃತ ತನಿಖೆಗೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಾಗಿದೆ. ಈಗಾಗಲೇ ಆಮೆರಿಕಾ, ಭಾರತ ಸಮಗ್ರ ತನಿಖೆಗೆ ಒತ್ತಾಯ ಮಾಡಿತ್ತು. ಆದರೆ ಈ ಮೊದಲು ವುಹಾನ್ ಲ್ಯಾಬ್ನಿಂದ ವೈರಸ್ ಸೋರಿಕೆ ವಾದವನ್ನು ಬ್ರಿಟನ್ ಅಷ್ಟಾಗಿ ಒಪ್ಪಿರಲಿಲ್ಲ. ಸದ್ಯ ಈಗ ಈ ಬಗ್ಗೆ ಬ್ರಿಟಿನ್ ಇಂಟಲಿಜೆನ್ಸ್ ವರದಿ ಮಾಡಿದ್ದು ವುಹಾನ್‌ನಿಂದ ಕೊರೊನಾ ಸೋರಿಕೆಯಾಗಿದೆ ಎಂಬ ನಿರ್ಧಾರಕ್ಕೆ ಬಂದಿದೆ.
ಚೀನಾ ಸುಳ್ಳು ಹೇಳುತ್ತಿದೆ. ಅದನ್ನ ನಂಬಲು ಸಾಧ್ಯವಿಲ್ಲ.. ಬ್ರಿಟನ್ ವೈರಸ್ ಮೂಲವನ್ನು ಸರಿಯಾಗಿ ಪತ್ತೆ ಹಚ್ಚದಿದ್ದರೇ ಇದು ಮತ್ತೆ ಪುನರಾವರ್ತನೆ ಆಗಬಹುದು. ಕಳೆದ ವಾರ ಆಮೆರಿಕಾದ ಇಂಟಲಿಜೆನ್ಸ್ ಎರಡು ಪಟ್ಟು ಶ್ರಮವಹಿಸಿ ಕೊರೊನಾ ವೈರಸ್ ಮೂಲ ಪತ್ತೆಗೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಸೂಚಿಸಿದ್ದರು. ಈಗ ಬ್ರಿಟನ್ನಿಂದಲೂ ಸಮಗ್ರ ತನಿಖೆಗೆ ಆಗ್ರಹಿಸಲಾಗಿದೆ. ಚೀನಾ ಸುಳ್ಳು ಹೇಳುತ್ತಿದೆ. ಚೀನಾ ಹೇಳುವುದನ್ನ ನಂಬಲು ಸಾಧ್ಯವಿಲ್ಲ ಎಂದು ಬ್ರಿಟನ್ ತಿಳಿಸಿದೆ. ಬ್ರಿಟನ್ ಇಂಟಲಿಜೆನ್ಸ್ ವೈರಸ್ ಮೂಲದ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ.
ಲ್ಯಾಬ್‌ನಲ್ಲಿ ಏನಾಗ್ತಿತ್ತು ಎಂದು ಹೇಳಲು ಚೀನಾ ನಿರಾಕರಿಸಿದೆ ಚೀನಾದ ವುಹಾನ್ ಲ್ಯಾಬ್‌ನಲ್ಲಿ ಎರಡು ರೀತಿಯ ಚಟುವಟಿಕೆ ನಡೆಯುತ್ತೆ. ಲ್ಯಾಬ್‌ನಲ್ಲಿ ಮಿಲಿಟರಿ ಚಟುವಟಿಕೆ ಜೊತೆಗೆ ನಾಗರಿಕ ಸಂಶೋಧನೆ ಮಾಡಲಾಗುತ್ತೆ ಎಂದು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ದಾರೆ.
ಲ್ಯಾಬ್‌ನಲ್ಲಿ ಏನಾಗ್ತಿತ್ತು ಎಂದು ಹೇಳಲು ಚೀನಾ ನಿರಾಕರಿಸಿದೆ. ಈ ಸಂಶೋಧನೆಗಳ ಸ್ವರೂಪ ಏನೆಂದು ತಿಳಿಸುತ್ತಿಲ್ಲ. WHO ತಂಡಕ್ಕೂ ಲ್ಯಾಬ್ ಪ್ರವೇಶಿಸಲು ಅವಕಾಶ ಕೊಟ್ಟಿಲ್ಲ ಎಂದು ಪಾಂಪಿಯೋ ತಿಳಿಸಿದ್ದಾರೆ.
ಇದನ್ನೂ ಓದಿ: ‘ಸಾಂಕ್ರಾಮಿಕ ರೋಗದಲ್ಲಿ ವುಹಾನ್ನ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಪಾತ್ರವು ಚೀನಾವನ್ನು ಹೊಣೆಯಾಗಿಸುವ ಮೊದಲ ಹೆಜ್ಜೆ’
Published On - 12:41 pm, Mon, 31 May 21