Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದಲ್ಲಿ ಮೂರನೇ ಮಗು ಪಡೆಯಲು ಅನುಮತಿ; ಈಗ ಜನಸಂಖ್ಯಾ ಕುಸಿತ ತಡೆಗಟ್ಟುವ ಚಿಂತೆಯಲ್ಲಿ ಚೀನಾ

ತಜ್ಞರ ಲೆಕ್ಕಾಚಾರದ ಪ್ರಕಾರ ಚೀನಾದಲ್ಲಿ 2022 ರಿಂದ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚಾಗಲಿದೆ. ಜತೆಗೆ, 2027 ರಿಂದ ಚೀನಾದ ಜನಸಂಖ್ಯೆ ಕುಸಿತದ ಟ್ರೆಂಡ್ ಆರಂಭವಾಗಲಿದೆ. ಈ ಬಗ್ಗೆ ಎಚ್ಚರಿಕೆ ನೀಡಿದ ತಜ್ಞರು, ಜನನ ಪ್ರಮಾಣದಲ್ಲಿ ಇದೇ ರೀತಿಯ ಕುಸಿತ ಮುಂದುವರೆದರೆ ದೇಶ ದೊಡ್ಡ ಮಟ್ಟದ ಸಂಕಷ್ಟಕ್ಕೆ ಸಾಕ್ಷಿಯಾಗಬೇಕಾಗುತ್ತದೆ ಎಂದಿದ್ದಾರೆ.

ಚೀನಾದಲ್ಲಿ ಮೂರನೇ ಮಗು ಪಡೆಯಲು ಅನುಮತಿ; ಈಗ ಜನಸಂಖ್ಯಾ ಕುಸಿತ ತಡೆಗಟ್ಟುವ ಚಿಂತೆಯಲ್ಲಿ ಚೀನಾ
ಪ್ರಾತಿನಿಧಿಕ ಚಿತ್ರ
Follow us
Skanda
|

Updated on: May 31, 2021 | 3:13 PM

ಬೀಜಿಂಗ್: ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿರುವ ಚೀನಾ ತನ್ನ ಕುಟುಂಬ ಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ ಈ ಹಿಂದೆ ಇದ್ದ ನಿಯಮದಲ್ಲಿ ಮಹತ್ತರ ಬದಲಾವಣೆ ತರಲು ಸಿದ್ಧವಾಗಿದೆ. ಇದುವರೆಗೆ ಚೀನಾದಲ್ಲಿ ದಂಪತಿ 2 ಮಕ್ಕಳನಷ್ಟೇ ಹೊಂದಬಹುದು ಎಂದು ಜಾರಿಯಲ್ಲಿದ್ದ ನಿಯಮವನ್ನು ಸಡಿಲಿಸಿ, 3 ಮಕ್ಕಳನ್ನು ಹೊಂದಲು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಇತ್ತೀಚಿನ ಅಧ್ಯಯನಗಳಲ್ಲಿ ಚೀನಾ ದೇಶದ ಜನಸಂಖ್ಯೆ ಕಳೆದ ಐದು ದಶಕದಲ್ಲಿ ಇದೇ ಮೊದಲ ಬಾರಿಗೆ ಅತಿ ನಿಧಾನಗತಿಯಲ್ಲಿ ಬೆಳವಣಿಗೆ ಕಂಡಿರುವ ಸಂಗತಿ ಬಯಲಾಗಿದ್ದು, ಭವಿಷ್ಯದಲ್ಲಿ ಇದು ದೇಶದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರಬಹುದು ಎಂದು ತಜ್ಞರು ಅಂದಾಜಿಸಿದ ಕಾರಣ ಈ ಬದಲಾವಣೆ ತರಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಕಳೆದ ವರ್ಷ ಅಂದರೆ 2020 ರಲ್ಲಿ ಬೀಜಿಂಗ್​ ಪೂರ್ವ ಭಾಗದ ಜೀಜಿಯಾಂಗ್, ದಕ್ಷಿಣ ಭಾಗದ ಗೌಂಗ್​ಡಾಂಗ್​ನಲ್ಲಿ ಜನನ ಪ್ರಮಾಣ ಕುಸಿತ ಕಂಡಿದೆ. ಕಳೆದ 5 ದಶಕಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದಲ್ಲಿ ಜನನ ಪ್ರಮಾಣ ಕುಸಿತ ಕಂಡಿದ್ದು, 2019ರಲ್ಲಿ ಚೀನಾ 5.9 ಲಕ್ಷದಷ್ಟು ಕಡಿಮೆ ಮಕ್ಕಳು ಜನಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಜನಸಂಖ್ಯೆಯ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈಗಿರುವ ನಿಯಮವನ್ನು ಬದಲಿಸಲು ತಜ್ಞರು ಸಲಹೆ ನೀಡಿದ್ದಾರೆ.

ತಜ್ಞರ ಲೆಕ್ಕಾಚಾರದ ಪ್ರಕಾರ ಚೀನಾದಲ್ಲಿ 2022 ರಿಂದ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚಾಗಲಿದೆ. ಜತೆಗೆ, 2027 ರಿಂದ ಚೀನಾದ ಜನಸಂಖ್ಯೆ ಕುಸಿತದ ಟ್ರೆಂಡ್ ಆರಂಭವಾಗಲಿದೆ. ಈ ಬಗ್ಗೆ ಎಚ್ಚರಿಕೆ ನೀಡಿದ ತಜ್ಞರು, ಜನನ ಪ್ರಮಾಣದಲ್ಲಿ ಇದೇ ರೀತಿಯ ಕುಸಿತ ಮುಂದುವರೆದರೆ ದೇಶ ದೊಡ್ಡ ಮಟ್ಟದ ಸಂಕಷ್ಟಕ್ಕೆ ಸಾಕ್ಷಿಯಾಗಬೇಕಾಗುತ್ತದೆ. ಜನನ ಮತ್ತು ಮರಣ ಪ್ರಮಾಣದ ತೀವ್ರ ಅಸಮತೋಲನ ಒಳ್ಳೆಯದಲ್ಲ ಎಂದಿದ್ದಾರೆ.

ಚೀನಾದಲ್ಲಿ 19ರಿಂದ 59 ವರ್ಷ ನಡುವಿನ ವಯಸ್ಸಿನವರ ಸಂಖ್ಯೆ 2010ರ ಜನಗಣತಿಗೆ ಹೋಲಿಸಿದರೆ ಪ್ರಸ್ತುತ ಶೇ.6.79ರಷ್ಟು ಕಡಿಮೆಯಾಗಿದೆ. ಜನಸಂಖ್ಯಾ ಏರಿಕೆ ಪ್ರಮಾಣವು 2000ನೇ ಇಸವಿಯಲ್ಲಿ ಶೇ.1.07ರಷ್ಟಿದ್ದು, 2010ರಲ್ಲಿ ಶೇ.0.57ಆಗಿತ್ತು. ಇದೀಗ 2020ರಲ್ಲಿ ಶೇ.0.53ರಷ್ಟು ಜನಸಂಖ್ಯಾ ಏರಿಕೆ ದಾಖಲಾಗಿದ್ದು ಈ ಪ್ರಮಾಣದ ಬದಲಾವಣೆಯು ತಜ್ಞರಲ್ಲಿ ಚಿಂತೆ ಮೂಡಿಸಿದೆ. ತೀರಾ ಕಡಿಮೆ ಪ್ರಮಾಣದಲ್ಲಿ ಜನಸಂಖ್ಯೆ ವೃದ್ಧಿಯಾಗುವುದನ್ನು ಸುಧಾರಿಸುವ ಸಲುವಾಗಿ ಕುಟುಂಬ ಯೋಜನೆ ನಿಯಮ ಬದಲಾವಣೆ ಮಾಡಲು ನಿರ್ಧರಿಸಿರುವ ಚೀನಾ ಸರ್ಕಾರ ತನ್ನ ಪ್ರಜೆಗಳಿಗೆ ಇನ್ನು ಮುಂದೆ ಮೂರು ಮಕ್ಕಳನ್ನು ಹೊಂದಲು ಅವಕಾಶ ಕಲ್ಪಿಸಿದೆ.

ಇದನ್ನೂ ಓದಿ: ತಜ್ಞರ ಬರಹ: ಸಂತಾನದ ಕನಸಿಗೆ ಧಕ್ಕೆಯಾಗುವ ಪುರುಷರ ಬಂಜೆತನಕ್ಕೆ ಇದೆ ಪರಿಹಾರ 

ಇನ್ನಿಲ್ಲ ಜನಸಂಖ್ಯಾ ಸ್ಫೋಟ; ಶುರುವಾಗಲಿದೆ ಜನಸಂಖ್ಯಾ ಕುಸಿತ? ಜಾಗತಿಕ ಮಟ್ಟದಲ್ಲಿ ಏನೇನು ಬದಲಾವಣೆ? ಇಲ್ಲಿದೆ ಸಂಪೂರ್ಣ ವಿವರ