ಮೆಹುಲ್ ಚೋಕ್ಸಿ ಅಕ್ಷರಶಃ ಪ್ರಾಯದ ಯುವಕರಂತೆ ಜಾಲಿ ಬೀಚಿನಿಂದ ತನ್ನ ಪ್ರೇಯಸಿಯೊಂದಿಗೆ ಪರಾರಿಯಾಗಿದ್ದ

Mehul Choksi romantic trip: ಡೊಮಿನಿಕಾದಲ್ಲಿ ಪ್ರೇಯಸಿಯೊಂದಿಗೆ ಸಿಕ್ಕಿಬಿದ್ದ ಮೆಹುಲ್ ಚೋಕ್ಸಿನನ್ನು ಅಲ್ಲಿನ ಪೊಲೀಸರು ಸರಿಯಾಗಿ ವಿಚಾರಿಸಿಕೊಂಡಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಅದಕ್ಕೂ ಮುನ್ನ ಕೊರೊನಾ ಸೋಂಕು ಟೆಸ್ಟ್​ ಮಾಡಿಸಿದಾಗ ಆತನಿಗೆ ಸೋಂಕು ಇಲ್ಲ ಎಂಬುದು ಪತ್ತೆಯಾಗಿದೆ.

ಮೆಹುಲ್ ಚೋಕ್ಸಿ ಅಕ್ಷರಶಃ ಪ್ರಾಯದ ಯುವಕರಂತೆ ಜಾಲಿ ಬೀಚಿನಿಂದ ತನ್ನ ಪ್ರೇಯಸಿಯೊಂದಿಗೆ ಪರಾರಿಯಾಗಿದ್ದ
ಮೆಹುಲ್ ಚೋಕ್ಸಿ
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on:May 31, 2021 | 12:26 PM

ಆಂಟಿಗುವಾ ದೇಶದಿಂದ ಕಳೇದ ವಾರ ಪರಾರಿಯಾಗಿ ಡೊಮಿನಿಕಾದಲ್ಲಿ ಸಿಕ್ಕಿಬಿದ್ದ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅಷ್ಟಕ್ಕೂ ಅಲ್ಲಿಗೆ ತೆರಳಿದ್ದಾದರೂ ಯಾಕೆ ಗೊತ್ತಾ? ಅಂತಾ ಆಂಟಿಗುವಾ ಪ್ರಧಾನಿ ಗಾಸ್ಟನ್​ ಬ್ರೌನ್​ ಕುತೂಹಲಕಾರಿ ಅಂಶವೊಂದನ್ನು ಬಹಿರಂಗಪಡಿಸಿದ್ದಾರೆ. 61 ವರ್ಷ ಪ್ರಾಯದ ವಜ್ರದ ವ್ಯಾಪಾರಿ ಮೆಹುಲ್ ಚೋಸ್ಕಿ ಆಂಟಿಗುವಾದ ಜಾಲಿ ಬೀಚಿನಿಂದ ಓಡಿಹೋಗಿದ್ದು ಅಕ್ಷರಶಃ ಪ್ರಾಯದ ಯುವಕರಂತೆ ತನ್ನ ಪ್ರೇಯಸಿಯೊಂದಿಗೆ (romantic trip) ಎಂಬ ವಿಷಯ ತಿಳಿದುಬಂದಿದೆ.

ಡೊಮಿನಿಕಾದಲ್ಲಿ ಪ್ರಿಯತಮೆಯೊಂದಿಗೆ ಸಿಕ್ಕಿಬಿದ್ದ ಮೆಹುಲ್ ಚೋಕ್ಸಿಯನ್ನು ಅಲ್ಲಿನ ಪೊಲೀಸರು ಸರಿಯಾಗಿ ವಿಚಾರಿಸಿಕೊಂಡಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಅದಕ್ಕೂ ಮುನ್ನ ಕೊರೊನಾ ಸೋಂಕು ಟೆಸ್ಟ್​ ಮಾಡಿಸಿದಾಗ ಆತನಿಗೆ ಸೋಂಕು ಇಲ್ಲ ಎಂಬುದು ಪತ್ತೆಯಾಗಿದೆ. ಇದೀಗ ಡೊಮಿನಿಕಾದಲ್ಲಿ ವೈದ್ಯರು ಆತನಿಗೆ ಆರೈಕೆ ಮಾಡುತ್ತಿದ್ದಾರೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್​ ಒಂದರ ಹಗರಣದಲ್ಲಿ ಆರೋಪಿಯಾಗಿರುವ ದೇಶಭ್ರಷ್ಟ ಉದ್ಯಮಿ ಮೆಹುಲ್ ಚೋಕ್ಸಿ ಸದ್ಯ ಡೊಮಿನಿಕಾ ಪೊಲೀಸರ ವಶದಲ್ಲಿದ್ದಾರೆ. ಡೊಮಿನಿಕಾದಿಂದ ಆಂಟಿಗುವಾಕ್ಕೆ ಚೋಕ್ಸಿಯನ್ನು ಕಳಿಸಲು ಅವಕಾಶ ನೀಡುವುದಿಲ್ಲ ಎಂದು ಅಲ್ಲಿನ ಪ್ರಧಾನಿ ಗಸ್ಟನ್ ಬ್ರೌನ್​​​ ಈಗಾಗಲೇ ಹೇಳಿದ್ದಾರೆ. ಇದೀಗ ಚೋಕ್ಸಿಯನ್ನು ಭಾರತಕ್ಕೆ ಕಳಿಸುವ ಸಿದ್ಧತೆ ನಡೆದಿದೆ, ಅವರನ್ನು ಕರೆದೊಯ್ಯಲು ಖಾಸಗಿ ವಿಮಾನವೊಂದು ಡೊಮಿನಿಕಾದ ಡೌಗ್ಲಾಸ್-ಚಾರ್ಲ್ಸ್ ಏರ್​ಪೋರ್ಟ್ ತಲುಪಿದೆ ಎಂದು ಗಸ್ಟನ್​ ಬ್ರೌನ್​ ಹೇಳಿದ್ದಾರೆ.

ವಜ್ರದ ವ್ಯಾಪಾರಿ ಮೆಹುಲ್ ಚೋಸ್ಕಿ ಮತ್ತು ಅವನ ಸಂಬಂಧೀ ನೀರವ್​ ಮೋದಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್​​ಗೆ (Punjab National Bank -PNB) 13,500 ಕೋಟಿ ರೂಪಾಯಿ ವಂಚನೆ ಎಸಗಿ ಪರಾರಿಯಾಗಿದ್ದಾರೆ. ಇಬ್ಬರು ವಿರುದ್ಧವೂ ಸಿಬಿಐ (CBI) ಮತ್ತು ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸುತ್ತಿದ್ದು, ಇಬ್ಬರೂ ಭಾರತಕ್ಕೆ ವಾಪಸಾಗಬೇಕಾಗಿದ್ದಾರೆ.

(Mehul Choksi went on romantic trip with girlfriend to Dominica says Antigua PM Gaston Browne)

ವಂಚಕ ಮೆಹೂಲ್ ಚೋಸ್ಕಿ ಆಂಟಿಗುವಾದಲ್ಲಿ ನಾಪತ್ತೆ? ವಾಹನ ಜಾಲಿ ಬಂದರು ಪ್ರದೇಶದಲ್ಲಿ ಪತ್ತೆ! ಆತಂಕದಲ್ಲಿ ಕುಟುಂಬಸ್ಥರು

Published On - 10:57 am, Mon, 31 May 21

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ