ವಂಚಕ ಮೆಹೂಲ್ ಚೋಸ್ಕಿ ಆಂಟಿಗುವಾದಲ್ಲಿ ನಾಪತ್ತೆ? ವಾಹನ ಜಾಲಿ ಬಂದರು ಪ್ರದೇಶದಲ್ಲಿ ಪತ್ತೆ! ಆತಂಕದಲ್ಲಿ ಕುಟುಂಬಸ್ಥರು

Mehul Choksi Missing: ವರದಿಗಳ ಪ್ರಕಾರ ಸೋಮವಾರ ಸಂಜೆ ಮೆಹುಲ್ ಚೋಸ್ಕಿ ಆಂಟಿಗುವಾದಲ್ಲಿ ಖ್ಯಾತ ರೆಸ್ಟೋರೆಂಟ್​​ಗೆ ರಾತ್ರಿ ಭೋಜನಕ್ಕೆ ಎಂದು ಹೋದವ ಅದಾದ ಬಳಿಕ ಕಾಣೆಯಾಗಿದ್ದಾನೆ. ಆತನ ವಾಹನ ಜಾಲಿ ಬಂದರಿನಲ್ಲಿ ಪತ್ತೆಯಾಗಿದೆ. ಉನ್ನತ ಪೊಲೀಸ್​ ಅಧಿಕಾರಿಗಳು ಆತನ ಬೇಟೆಯಲ್ಲಿದ್ದಾರೆ ಎಂದು ಆಂಟಿಗುವಾದ ಟಿವಿ ಮಾಧ್ಯಮಗಳು ವರದಿ ಮಾಡಿವೆ.

ವಂಚಕ ಮೆಹೂಲ್ ಚೋಸ್ಕಿ ಆಂಟಿಗುವಾದಲ್ಲಿ ನಾಪತ್ತೆ? ವಾಹನ ಜಾಲಿ ಬಂದರು ಪ್ರದೇಶದಲ್ಲಿ ಪತ್ತೆ! ಆತಂಕದಲ್ಲಿ ಕುಟುಂಬಸ್ಥರು
Mehul Choksi
Follow us
ಸಾಧು ಶ್ರೀನಾಥ್​
|

Updated on:May 25, 2021 | 10:25 AM

ದೇಶ ಬಿಟ್ಟು ಪರಾರಿಯಾಗಿರುವ ದೊಡ್ಡ ಉದ್ಯಮಿ, ಬ್ಯಾಂಕ್​ ವಂಚಕ ಆರೋಪಿ ಮೆಹುಲ್ ಚೋಸ್ಕಿ ಆಂಟಿಗುವಾದಲ್ಲಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ವಂಚನೆ ಪ್ರಕರಣದ (PNB Scam) ಪ್ರಮುಖ ಆರೋಪಿ ಚೋಸ್ಕಿ ಆಂಟಿಗುವಾದ ಬಂದರು ಪ್ರದೇಶದಲ್ಲಿ ಭಾನುವಾರದಿಂದ ಕಣ್ಮರೆಯಾಗಿದ್ದು, ಸ್ಥಳೀಯ ಪೊಲೀಸರು ಆತನ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಮೆಹುಲ್ ಚೋಸ್ಕಿ ನಾಪತ್ತೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಆತನ ಸುರಕ್ಷತೆ ಬಗ್ಗೆ ಕುಟುಂಬಸ್ಥರು ಆತಂಕಗೊಂಡಿದ್ದಾರೆ.

ವಜ್ರ ವ್ಯಾಪಾರಿ ಮೆಹುಲ್ ಚೋಸ್ಕಿ ಪರ ವಕೀಲರ ಪ್ರಕಾರ ಮೆಹುಲ್ ಚೋಸ್ಕಿ ನಾಪತ್ತೆಯಾಗಿದ್ದಾನೆ. ಆತನ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ನನ್ನೊಂದಿಗೆ ಮಾತನಾಡಲು ಕುಟುಂಬಸ್ಥರು ಕರೆ ಮಾಡಿದ್ದಾರೆ. ಆಂಟಿಗುವಾ ಶೋಧ ಕಾರ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

61 ವರ್ಷ ಪ್ರಾಯದ ವಜ್ರದ ವ್ಯಾಪಾರಿ ಮೆಹುಲ್ ಚೋಸ್ಕಿ ಮತ್ತು ಅವನ ಸಂಬಂಧೀ ನೀರವ್​ ಮೋದಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್​​ಗೆ (Punjab National Bank -PNB) 13,500 ಕೋಟಿ ರೂಪಾಯಿ ವಂಚನೆ ಎಸಗಿ ಪರಾರಿಯಾಗಿದ್ದಾರೆ ಎಂದು ಸಿಬಿಐ ತನ್ನ ತನಿಖೆಯಲ್ಲಿ ತಿಳಿಸಿದೆ. ಸದ್ಯ ನೀರವ್​ ಮೋದಿ ಲಂಡನ್​ ಜೈಲಿನಲ್ಲಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಲ್ಲಿನ ನ್ಯಾಯಾಲಯ ಆದೇಶ ನೀಡಿದೆ.

2018ರ ಜನವರಿಯಲ್ಲಿ ಮೆಹುಲ್ ಚೋಸ್ಕಿ ಭಾರತ ಬಿಟ್ಟು ಪರಾರಿಯಾಗುದ್ದಾನೆ. ಅದಕ್ಕೂ ಮುನ್ನ ತಾನು ಹೂಡಿಕೆ ಮಾಡುತ್ತೇನೆ ಎಂದು ಹೇಳಿ 2017ರಲ್ಲಿ ವೆಸ್ಟ್​​ ಇಂಡೀಸ್ ದ್ವೀಪ ರಾಷ್ಟ್ರ್ಗಗಳಾದ ಆಂಟಿಗುವಾ ಮತ್ತು ಬರ್ಬುಡಾದ ಪೌರತ್ವ ಪಡೆದಿದ್ದಾನೆ. ಆತ ಪರಾರಿಯಾದ ಬಳಿಕ ಪಿಎನ್​ಬಿ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು.

ವರದಿಗಳ ಪ್ರಕಾರ ಸೋಮವಾರ ಸಂಜೆ ಮೆಹುಲ್ ಚೋಸ್ಕಿ ಆಂಟಿಗುವಾದಲ್ಲಿ ಖ್ಯಾತ ರೆಸ್ಟೋರೆಂಟ್​​ಗೆ ರಾತ್ರಿ ಭೋಜನಕ್ಕೆ ಎಂದು ಹೋದವ ಅದಾದ ಬಳಿಕ ಕಾಣೆಯಾಗಿದ್ದಾನೆ. ಆತನ ವಾಹನ ಜಾಲಿ ಬಂದರಿನಲ್ಲಿ ಪತ್ತೆಯಾಗಿದೆ. ಉನ್ನತ ಪೊಲೀಸ್​ ಅಧಿಕಾರಿಗಳು ಆತನ ಬೇಟೆಯಲ್ಲಿದ್ದಾರೆ ಎಂದು ಆಂಟಿಗುವಾದ ಟಿವಿ ಮಾಧ್ಯಮಗಳು ವರದಿ ಮಾಡಿವೆ.

( Mehul Choksi Missing: Fugitive Businessman Mehul Choksi Wanted in PNB Scam facing a CBI probe Goes Missing in Antigua)

Mehul Choksi: 2027ಕ್ಕೆ ಮೊದಲು ಮೆಹುಲ್ ಚೋಕ್ಸಿ ಭಾರತಕ್ಕೆ ಬರುವುದು ಅನುಮಾನ

Published On - 10:22 am, Tue, 25 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ