Sign In

By signing in or creating an account, you agree with Associated Broadcasting Company's Terms & Conditions and Privacy Policy.

Mehul Choksi: 2027ಕ್ಕೆ ಮೊದಲು ಮೆಹುಲ್ ಚೋಕ್ಸಿ ಭಾರತಕ್ಕೆ ಬರುವುದು ಅನುಮಾನ

ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿರುವ ಪ್ರಕರಣದ ಪ್ರಮುಖ ಆರೋಪಿ ಮತ್ತು ನೀರವ್ ಮೋದಿ ಸಂಬಂಧಿ ಮೆಹುಲ್ ಚೋಕ್ಸಿಯನ್ನು ಭಾರತ ಸರ್ಕಾರ ವಶಕ್ಕೆ ಪಡೆದುಕೊಳ್ಳಲು ಇನ್ನೂ 7 ವರ್ಷ ಆಗಬಹುದು ಎಂದು ಆಂಟಿಗುವ ಮತ್ತು ಬಾರ್ಬುಡ ಪ್ರಧಾನಿ ಕಚೇರಿ ಹೇಳಿದೆ.

Mehul Choksi: 2027ಕ್ಕೆ ಮೊದಲು ಮೆಹುಲ್ ಚೋಕ್ಸಿ ಭಾರತಕ್ಕೆ ಬರುವುದು ಅನುಮಾನ
ಮೆಹುಲ್ ಚೋಕ್ಸಿ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Mar 01, 2021 | 10:59 PM

ದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿರುವ ಪ್ರಕರಣದ ಪ್ರಮುಖ ಆರೋಪಿ ಮತ್ತು ನೀರವ್ ಮೋದಿ ಸಂಬಂಧಿ ಮೆಹುಲ್ ಚೋಕ್ಸಿಯನ್ನು ಭಾರತ ಸರ್ಕಾರ ವಶಕ್ಕೆ ಪಡೆದುಕೊಳ್ಳಲು ಇನ್ನೂ 7 ವರ್ಷ ಆಗಬಹುದು ಎಂದು ಆಂಟಿಗುವ ಮತ್ತು ಬಾರ್ಬುಡ ಪ್ರಧಾನಿ ಕಚೇರಿ ಹೇಳಿದೆ. ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಬಹುದು. ಭಾರತ ನ್ಯಾಯಾಲಯಗಳಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆ ನಡೆಯುವುದಿಲ್ಲ ಎನ್ನಲು ಯಾವುದೇ ಪುರಾವೆಗಳಿಲ್ಲ ಎಂದು ಲಂಡನ್ ನ್ಯಾಯಾಲಯ ಹೇಳಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿರುವುದು ಎಲ್ಲರ ಗಮನ ಸೆಳೆದಿದೆ.

ಮೆಹುಲ್ ಚೋಕ್ಸಿಗೆ ನೀಡಿದ್ದ ಪೌರತ್ವವನ್ನು ಆಂಟಿಗುವ ಮತ್ತು ಬಾರ್ಬುಡ ಸರ್ಕಾರ ರದ್ದುಪಡಿಸಿವೆ. ಸರ್ಕಾರದ ನಿರ್ಧಾರ ಪ್ರಶ್ನಿಸಿ ಚೋಸ್ಕಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಪ್ರಕ್ರಿಯೆ ಮುಗಿಯಲು ಕನಿಷ್ಠ 7 ವರ್ಷ ಬೇಕಾಗಬಹುದು ಎಂದು ಆಂಟಿಗುವ ಮತ್ತು ಬಾರ್ಬುಡ ಪ್ರಧಾನಿ ಕಚೇರಿಯ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿವೆ.

‘ಅಂಟಿಗುವಾ ಮತ್ತು ಬಾರ್ಬುಡ ಸರ್ಕಾರಗಳು ಮೆಹುಲ್ ಚೋಕ್ಸಿ ಪೌರತ್ವ ಹಿಂಪಡೆಯಲು ಅಥವಾ ರದ್ದುಪಡಿಸಲು ಯತ್ನಿಸಿದವು. ಆದರೆ ಆತ ಆಂಟಿಗುವಾ ಮತ್ತು ಬಾರ್ಬುಡದ ಹೈಕೋರ್ಟ್​ನಲ್ಲಿ ದಾವೆ ಹೂಡಿದ್ದಾನೆ. ಈ ವಿಷಯ ಇತ್ಯರ್ಥವಾಗಲು ಸುಮಾರು 7 ವರ್ಷ ಬೇಕಾಗಬಹುದು. ಹೈಕೋರ್ಟ್​ ನಂತರ ಲಂಡನ್​ನ ಪ್ರೈವಿ ಕೌನ್ಸಿಲ್​ಗೆ ಮನವಿ ಸಲ್ಲಿಸಬಹುದು ಎಂದು ವಕ್ತಾರರು ಹೇಳಿದ್ದಾರೆ.

‘ಅವರಿಗೆ (ಮೆಹುಲ್ ಚೋಕ್ಸಿಗೆ) ಈಗಾಗಲೇ ಆಂಟಿಗುವಾ ಮತ್ತು ಬಾರ್ಬುಡಾ ದೇಶದ ಪೌರತ್ವ ಸಿಕ್ಕಿದೆ. ಅದರೊಂದಿಗೆ ನಮ್ಮ ದೇಶದ ಪ್ರಜೆಗಳಿಗೆ ಸಿಗುವ ಎಲ್ಲ ಹಕ್ಕುಗಳೂ ಬಂದಿರುತ್ತವೆ. ಅವರನ್ನು ತಕ್ಷಣಕ್ಕೆ ಭಾರತಕ್ಕೆ ಕಳಿಸಲು ಆಗುವುದಿಲ್ಲ. ಅವರನ್ನು ವಾಪಸ್ ಕಳಿಸಲು ಹಲವು ವರ್ಷಗಳೇ ಬೇಕಾಗಬಹುದು’ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ ₹ 13,500 ಕೋಟಿ ವಂಚಿಸಿರುವ ಪ್ರಕರಣದ ಪ್ರಮುಖ ಆರೋಪಿ ನೀರವ್ ಮೋದಿಯ ಸಂಬಂಧಿ ಮೆಹುಲ್ ಚೋಕ್ಸಿ ಸಹ ಆರೋಪಿಯಾಗಿದ್ದಾರೆ. ಕೆರೀಬಿಯನ್ ನೇಷನ್ಸ್​ ಸಿಟಿಜನ್​ಷಿಪ್ ಬೈ ಇನ್​ವೆಸ್ಟ್​ಮೆಂಟ್ ಪ್ರೋಗ್ರಾಂ (ಸಿಐಪಿ) ಮೂಲಕ 2017ರ ನವೆಂಬರ್​ ತಿಂಗಳಲ್ಲಿ ಮೆಹುಲ್ ಚೋಸ್ಕಿಗೆ ಅಂಟಿಗುವಾ ಮತ್ತು ಬಾರ್ಬುಡ ದೇಶದ ಪೌರತ್ವ ಸಿಕ್ಕಿತ್ತು.

ಕಳೆದ ತಿಂಗಳು ಜಾರಿ ನಿರ್ದೇಶನಾಲಯವು (ಇಡಿ) ಗೀತಾಂಜಲಿ ಗ್ರೂಪ್​ ಮತ್ತು ಮೆಹುಲ್ ಚೋಸ್ಕಿ ಅವರಿಗೆ ಸೇರಿದ್ದ ₹ 14.45 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಹಿಂದೆಯೂ ಜಾರಿ ನಿರ್ದೇಶನಾಲಯವು ಚೋಸ್ಕಿಗೆ ಸೇರಿದ್ದ ₹ 2,550 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಬ್ರಿಟನ್​ನ ನ್ಯಾಯಾಲಯವೊಂದು ಭಾರತ ಸರ್ಕಾರದ ಪರವಾಗಿ ತೀರ್ಪು ನೀಡಿ, ನೀರವ್ ಮೋದಿ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿದ ಕೆಲವೇ ದಿನಗಳ ನಂತರ ಮೆಹುಲ್ ಚೋಕ್ಸಿ ಹಸ್ತಾಂತರ ತಡವಾಗಲಿದೆ ಎಂಬ ಮಾಹಿತಿ ಬಂದಿದೆ. ನೀರವ್ ಮೋದಿ ಪ್ರಕರಣದಲ್ಲಿ ಬ್ರಿಟನ್ ನ್ಯಾಯಾಧೀಶರು ‘ಭಾರತದ ನ್ಯಾಯಾಲಯಗಳಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಗಳು ನಡೆಯುವುದಿಲ್ಲ ಎನ್ನಲು ಯಾವುದೇ ಪುರಾವೆ ಇಲ್ಲ’ ಎಂದು ನೀರವ್ ಮೋದಿ ವಾದವನ್ನು ತಳ್ಳಿ ಹಾಕಿದ್ದರು.

ಇದನ್ನೂ ಓದಿ: Nirav Modi | ಭಾರತ ನ್ಯಾಯಾಂಗದ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ ಕಾಟ್ಜು, ಸಮರ್ಥಿಸಿದ ಲಂಡನ್ ಕೋರ್ಟ್

ಇದನ್ನೂ ಓದಿ: ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಆದೇಶಿಸಿದ ಲಂಡನ್ ನ್ಯಾಯಾಲಯ

Published On - 10:39 pm, Mon, 1 March 21

IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ