AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NTPCL ಸೇರಿ ಭಾರತದ ಪ್ರಮುಖ ಸಂಸ್ಥೆಗಳ ಮೇಲೆ ಚೀನಾ ಹ್ಯಾಕರ್​ಗಳ ಕಣ್ಣು

ಭಾರತದ ವಿವಿಧ ಸಂಸ್ಥೆಗಳ ಮೇಲೆ ಚೀನಾ ಮೂಲದ ಹ್ಯಾಕರ್​ಗಳ ಕಣ್ಣು ಬಿದ್ದಿದೆ. 2020ರ ಮಧ್ಯಭಾಗದಿಂದಲೂ ಭಾರತದ ಸಂಸ್ಥೆಗಳ ಸಾಫ್ಟ್​​ವೇರ್​ಗಳಲ್ಲಿ ಮಾಲ್​ವೇರ್​ಗಳನ್ನು ಅಂಟಿಸಲು ಚೈನಾ ಪ್ರಾಯೋಜಕತ್ವದ ಹ್ಯಾಕರ್​ಗಳು ಪ್ರಯತ್ನಿಸುತ್ತಿದ್ದಾರೆ ಎಂದು ಅಮೆರಿಕಾ ಮೂಲದ ರೆಕಾರ್ಡೆಡ್ ಫ್ಯೂಚರ್ ಸಂಸ್ಥೆ ವರದಿ ಮಾಡಿದೆ.

NTPCL ಸೇರಿ ಭಾರತದ ಪ್ರಮುಖ ಸಂಸ್ಥೆಗಳ ಮೇಲೆ ಚೀನಾ ಹ್ಯಾಕರ್​ಗಳ ಕಣ್ಣು
ಸೈಬರ್ ಕ್ರೈಂ
guruganesh bhat
|

Updated on:Mar 01, 2021 | 7:07 PM

Share

ಬಾಯಿಯಲ್ಲಿ ಶಾಂತಿ ಮಂತ್ರ, ಆದರೆ ಮಾಡುವುದು ಮಾತ್ರ ಉಡಾಳ ಕೆಲಸ. ಪಕ್ಕದ ಚೀನಾ ದೇಶಕ್ಕೆ ಈ ಮಾತು ನೂರಕ್ಕೆ ನೂರು ಪ್ರತಿಶತ ಅನ್ವಯವಾಗುತ್ತದೆ. ಸುಮ್ಮನಿರಲಾರದೇ ಭಾರತದ ಜತೆ ಬಹಳ ಸಲ ಗಡಿಯಲ್ಲಿ ಕಿರಿಕಿರಿ ಮಾಡುತ್ತಲೇ ಇರುವ ಚೀನಾದ ಜತೆ ಇತ್ತೀಚಿಗಷ್ಟೇ ಪಾಂಗಾಂಗ್ ತ್ಸೋ ಸರೋವರದ ಆಸುಪಾಸಲ್ಲಿ ಶಾಂತಿಯ ಒಪ್ಪಂದ ಜಾರಿಗೊಳಿಸಲಾಗಿದೆ. ಆದರೆ ಭಾರತದ ಆಂತರಿಕ ಭದ್ರತೆ ಮತ್ತು ಸುರಕ್ಷತೆಯಲ್ಲಿ ಚೀನಾ ಮೂಗು ತೂರಿಸಿದ ಘಟನೆ ಬೆಳಕಿಗೆ ಬಂದಿದೆ.

ಭಾರತದ ವಿವಿಧ ಸಂಸ್ಥೆಗಳ ಮೇಲೆ ಚೀನಾ ಮೂಲದ ಹ್ಯಾಕರ್​ಗಳ ಕಣ್ಣು ಬಿದ್ದಿದೆ. 2020ರ ಮಧ್ಯಭಾಗದಿಂದಲೂ ಭಾರತದ ಸಂಸ್ಥೆಗಳ ಸಾಫ್ಟ್​​ವೇರ್​ಗಳಲ್ಲಿ ಮಾಲ್​ವೇರ್​ಗಳನ್ನು ಅಂಟಿಸಲು ಚೈನಾ ಸರ್ಕಾರಿ ಪ್ರಾಯೋಜಕತ್ವದ ಹ್ಯಾಕರ್​ಗಳು ಪ್ರಯತ್ನಿಸುತ್ತಿದ್ದಾರೆ ಎಂದು ಅಮೆರಿಕಾ ಮೂಲದ ರೆಕಾರ್ಡೆಡ್ ಫ್ಯೂಚರ್ ಸಂಸ್ಥೆ ವರದಿ ಮಾಡಿದೆ.

ಅದರಲ್ಲೂ ಪ್ರಮುಖವಾಗಿ ಭಾರತದ ವಿದ್ಯುಚ್ಛಕ್ತಿ ಉತ್ಪಾದನೆ ಮತ್ತು ವಿತರಣಾ ಸಂಸ್ಥೆಗಳನ್ನು ಗುರಿಯಾಗಿರಿಸಿ ಚೈನಾ ಪ್ರಾಯೋಜಕತ್ವದ ಹ್ಯಾಕರ್​ಗಳು ಮಾಲ್​ವೇರ್ ಕಾರ್ಯಾಚರಣೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಭಾರತದ ವಿದ್ಯುಚ್ಛಕ್ತಿ ಉತ್ಪಾದನೆ ಮತ್ತು ವಿತರಣೆಯ ದೃಷ್ಟಿಯಿಂದ ಅತಿ ಪ್ರಮುಖವಾದ ಸಂಸ್ಥೆ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್ ಲಿಮಿಟೆಡ್ (ಎನ್​ಟಿಪಿಸಿಎಲ್​) ಮೇಲೂ ಹ್ಯಾಕರ್​ಗಳು ಕಣ್ಣುಹಾಯಿಸಿದ್ದಾರೆ. 1975ರಲ್ಲಿ ಸ್ಥಾಪನೆಯಾದ ಎನ್​ಟಿಪಿಸಿಎಲ್​ನ 5 ವಿದ್ಯುಚ್ಛಕ್ತಿ ಸರಬರಾಜು ಕೇಂದ್ರಗಳ ಸಾಫ್ಟ್​ವೇರ್​ಗಳ ಮೇಲೆ ಮಾಲ್​ವೇರ್ ದಾಳಿ ನಡೆಸಲು ಹ್ಯಾಕರ್​ಗಳು ಪ್ರಯತ್ನಿಸಿದ್ದಾರೆ.

ದೇಶಾದ್ಯಂತ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ಎನ್​ಟಿಪಿಸಿಎಲ್​ನ ಪಾತ್ರ ಅತಿ ಮಹತ್ವವಾದುದು. ಹೀಗಾಗಿಯೇ ಭಾರತದ ಆಂತರಿಕ ವ್ಯವಸ್ಥೆಯನ್ನು ಹದಗೆಡಿಸುವ ಕುಟಿಲ ತಂತ್ರವನ್ನು ಚೀನಾ ಹೆಣೆದಿದೆ ಎನ್ನಲಾಗಿದೆ. ಇತ್ತೀಚಿಗಷ್ಟೇ ಪಾಂಗಾಂಗ್ ತ್ಸೋ ಸರೋವರದ ಶಾಂತಿ ಒಪ್ಪಂದ ಮಾಡಿಕೊಂಡಿರುವ ಭಾರತ ಚೀನಾದ ನಡುವೆ ಶಾಂತಿ ನೆಲೆಸಲಿದೆ ಎನ್ನಲಾಗಿತ್ತು.

ಏನಿದು ಪಾಂಗಾಂಗ್ ತ್ಸೋ ಘಟನೆ? 2020ರ ಜೂನ್ 15ರಂದು ಎರಡೂ ದೇಶಗಳ ಸೈನಿಕರ ನಡುವೆ ನಡೆದ ಕಾದಾಟದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಅನಂತರ ಪಾಂಗಾಂಗ್ ಸರೋವರದ ದಡಗಳಲ್ಲಿ ಭಾರತ-ಚೀನಾ ಎರಡೂ ದೇಶಗಳು ಯುದ್ಧಟ್ಯಾಂಕ್​ ಸೇರಿ ಸೈನಿಕರ ಜಮಾವಣೆ ಮಾಡಿದ್ದವು. ಹೀಗಾಗಿ ಪಾಂಗಾಂಗ್ ಸರೋವರದ ಸುತ್ತಮುತ್ತ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಹಲವು ಹಂತಗಳ ಮಾತುಕತೆಯ ನಂತರ ಕದನವಿರಾಮ ಘೋಷಿಸಿ, ಶಾಂತಿ ಒಪ್ಪಂದಕ್ಕೆ ಬರಲಾಗಿತ್ತು.

ಒಪ್ಪಂದದ ಪ್ರಮುಖ ಅಂಶಗಳು 1) ಎರಡೂ ದೇಶಗಳು ಶಾಂತಿ ಕಾಪಾಡಲು ಸೇನೆಯನ್ನು ಹಿಂಪಡೆಯಬೇಕು. 2) ಎರಡೂ ದೇಶಗಳು ಪರಸ್ಪರ ಒಪ್ಪಂದಗಳನ್ನು ಗೌರವಿಸಬೇಕು. 3) ಒಪ್ಪಂದದ ಎಲ್ಲ ನಿಯಮಗಳನ್ನೂ ಎರಡೂ ದೇಶಗಳು ಚಾಚೂತಪ್ಪದೇ  ಪಾಲಿಸಬೇಕು.

ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಒಪ್ಪಂದಗಳನ್ನು ಹೊಂದಲು ಭಾರತ ಸಿದ್ಧವಾಗಿದೆ. ಈ ಮೂಲಕ ಶಾಂತಿ ಕಾಪಾಡಲು ಭಾರತ ಬದ್ಧವಾಗಿದೆ. ಗಡಿ ವಿವಾದವನ್ನ ಮಾತುಕತೆ ಮೂಲಕ ಮಾತ್ರ ಬಗೆಹರಿಸಿಕೊಳ್ಳಬಹುದು. ಗಡಿಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವುದರಿಂದ ಬಾಂಧವ್ಯ ವೃದ್ದಿಯಾಗಲಿದೆ ಎಂದು ಅವರು ಚೀನಾದ ಆಕ್ರಮಣಶೀಲ ನಡೆಗಳ ಕುರಿತು ದೇಶದ ನಿಲುವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಯಲ್ಲಿ ತಿಳಿಸಿದ್ದರು.

ಚೀನಾದ ಸೇನೆ ಫಿಂಗರ್ 8 ರವರೆಗೆ ಹಿಂದೆ ಸರಿದ ನಂತರ ಭಾರತದ ಸೇನೆ ಫಿಂಗರ್ 3ರ ಧನಸಿಂಗ್ ಪೋಸ್ಟ್​ಗೆ ಹಿಂದಿರುಗಲಿದೆ. ಪಾಂಗಾಂಗ್ ತ್ಸೋ ಸರೋವರದ ಉತ್ತರ ಭಾಗದ ಫಿಂಗರ್ ವಲಯದಲ್ಲಿ ಭಾರತ-ಚೀನಾ ಪೆಟ್ರೋಲಿಂಗ್ ಸ್ಥಗಿತವಾಗಲಿದೆ. ಫಿಂಗರ್ 8ರ ವಿಷಯಗಳ ಬಗ್ಗೆ ಚೀನಾದ ಜೊತೆಗೆ ಮಾತುಕತೆ ಬಾಕಿ ಇದ್ದು, ಒಪ್ಪಂದದ ಪ್ರಕಾರ 48 ಗಂಟೆಯಲ್ಲಿ ಚೀನಾ ಸೇನೆ ಹಿಂತೆಗೆದುಕೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದರು.

ಭಾರತೀಯ ಸೇನೆ ಲಡಾಕ್​ನ ಫಿಂಗರ್​ 4 ಬಳಿ ಬೀಡುಬಿಡಬೇಕಿತ್ತು. ಆದರೆ,  ಕೇಂದ್ರ ರಕ್ಷಣಾ ಸಚಿವರ ಹೇಳಿಕೆಯ ಪ್ರಕಾರ ಫಿಂಗರ್ 4ರಿಂದ ಫಿಂಗರ್ 3 ಗೆ ಭಾರತೀಯ ಸೇನೆ ಮರಳಿದೆ. ಫಿಂಗರ್ 4ರ ಪ್ರದೇಶದಿಂದ ಸೇನೆಯನ್ನು ಹಿಂಪಡೆದದ್ದು ಚೀನಾಕ್ಕೆ ಆ ಪ್ರದೇಶವನ್ನು ಬಿಟ್ಟುಕೊಟ್ಟಂತಾಗಿದೆ.  ಇದು ಹುತಾತ್ಮ ಸೈನಿಕರಿಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅಪಚಾರ ಎಸಗಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಚೀನಾಗೆ ತಿರುಗೇಟು ನೀಡಲು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಆಗುತ್ತಿಲ್ಲ. ಫಿಂಗರ್ 4 ಪ್ರದೇಶವನ್ನು ಆಕ್ರಮಿಸಲು ಚೀನಾಕ್ಕೆ ಅವಕಾಶ ಮಾಡಿಕೊಟ್ಟಂತಾಗಿದ್ದು, ಈ ಬಗ್ಗೆ ಕೇಂದ್ರ ಉತ್ತರ ನೀಡಲಿ ಎಂದು ಅವರು ಕೇಂದ್ರ ಸರ್ಕಾರಕ್ಕೆ ಸವಾಲೆಸೆದಿದ್ದರು. ಆದರೆ ಭಾರತೀಯ ರಕ್ಷಣಾ ಇಲಾಖೆ ಈ ಆರೋಪವನ್ನು ಅಲ್ಲಗಳೆದು ಸ್ಪಷ್ಟನೆ ನೀಡಿತ್ತು.

ಇದನ್ನೂ ಓದಿ: India China Border Conflict: 16 ಗಂಟೆಗಳ ಕಾಲ ನಡೆದ ಭಾರತ-ಚೀನಾ ಸೇನಾ ಅಧಿಕಾರಿಗಳ ಉನ್ನತ ಮಟ್ಟದ ಸಭೆ

Ladakh standoff: ಭಾರತ-ಚೀನಾ ಶೀತಲ ಸಮರ; ಪ್ಯಾಂಗಾಂಗ್ ಸರೋವರದಿಂದ ಮರಳುತ್ತಿರುವ ಯುದ್ಧ ಟ್ಯಾಂಕ್​ಗಳು

Published On - 5:12 pm, Mon, 1 March 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ