ಭಾರತ ಪಾಕ್ ಒಳ್ಳೆಯ ಗೆಳೆಯರಾಗಬೇಕು; ಕನಸು ಬಿಚ್ಚಿಟ್ಟ ಮಲಾಲಾ ಯೂಸುಫ್

ಭಾರತದಲ್ಲಿ ಅಂತರ್ಜಾಲ ಸ್ಥಗಿತಗೊಳಿಸಿದ ಘಟನೆಗಳ ಕುರಿತು ಕಳವಳ ವ್ಯಕ್ತಪಡಿಸಿದ ಮಲಾಲಾ ಯೂಸುಫ್, ಅಂತರ್ಜಾಲ ಸ್ಥಗಿತ ಮತ್ತು ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವವರನ್ನು ಬಂಧಿಸುವುದು ಆತಂಕದ ಘಟನೆಯಾಗಿದೆ. ಶಾಂತಿಯುವ ಪ್ರತಿಭಟನೆ ನಡೆಸಲು ಭಾರತದ ಸರ್ಕಾರ ಅನುಮತಿ ನೀಡಬೇಕು ಎಂದು ಮಲಾಲಾ ಯೂಸುಫ್ ಆಗ್ರಹಿಸಿದರು.

ಭಾರತ ಪಾಕ್ ಒಳ್ಳೆಯ ಗೆಳೆಯರಾಗಬೇಕು; ಕನಸು ಬಿಚ್ಚಿಟ್ಟ ಮಲಾಲಾ ಯೂಸುಫ್
ಮಲಾಲಾ ಯೂಸುಫ್ ಬಿಚ್ಚಿಟ್ಟ ಕನಸೇನು?
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 28, 2021 | 7:52 PM

ಜೈಪುರ: ಭಾರತ ಮತ್ತು ಪಾಕಿಸ್ತಾನಗಳೆರಡನ್ನೂ ಒಳ್ಳೆಯ ಗೆಳೆಯರಂತೆ ನೋಡುವುದು ನನ್ನ ಕನಸು ಎಂದು ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡುತ್ತಿರುವ ಮಲಾಲಾ ಯೂಸುಫ್ ತಮ್ಮ ಭವಿಷ್ಯದ ಕನಸನ್ನು ಬಿಚ್ಚಿಟ್ಟರು. ಜೈಪುರದಲ್ಲಿ ನಡೆದ ‘14ನೇ ಜೈಪುರ ಸಾಹಿತ್ಯ ಉತ್ಸವದ ಕೊನೆಯ ದಿನವಾದ ಇಂದು ತಮ್ಮ I Am Malala:  The Story of the Girl Who Stood Up for Education and was Shot by the Taliban ಪುಸ್ತಕದ ಕುರಿತು ಮಾತನಾಡಿದ ಅವರು, ‘ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿ ಹೊಂದಿರುವುದು ಮತ್ತು ಎರಡೂ ದೇಶಗಳನ್ನು ವಿಭಜನೆಯ ದೃಷ್ಟಿಯಿಂದ ನೋಡುವುದು ಹಳಸಲು ಕಲ್ಙನೆಯಾಗಿದೆ. ಎರಡೂ ದೇಶಗಳ ಜನತೆ ಶಾಂತಿಯಿಂದ ಜತೆಜತೆಗೆ ಬದುಕಲು ಇಚ್ಛಿಸುತ್ತಾರೆ ಎಂದು ಹೇಳಿದ ಅವರು, ಪರಸ್ಪರ ನೈಜ ಸ್ನೇಹಿತರಂತೆ ಎರಡೂ ದೇಶಗಳನ್ನು ನೋಡುವುದು ನನ್ನ ಕನಸು ಎಂದು ವಿವರಿಸಿದರು.

ಅಲ್ಪಸಂಖ್ಯಾತರಿಗೆ ಭದ್ರತೆ ಒದಗಿಸುವ ಕುರಿತು ಮಾತನಾಡಿದ ಅವರು, ಧರ್ಮದ ಬೇಧವಿಲ್ಲದೇ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವುದು ಪ್ರತಿಯೊಂದು ದೇಶದ ಜವಾಬ್ದಾರಿಯಾಗಿದೆ. ಅಂತರ್ಜಾಲ ಸ್ಥಗಿತ ಮತ್ತು ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವವರನ್ನು ಬಂಧಿಸುವುದು ಆತಂಕದ ಘಟನೆಯಾಗಿದೆ. ಶಾಂತಿಯುವ ಪ್ರತಿಭಟನೆ ನಡೆಸಲು ಭಾರತದ ಸರ್ಕಾರ ಅನುಮತಿ ನೀಡಬೇಕು ಎಂದು ಮಲಾಲಾ ಯೂಸುಫ್ ಆಗ್ರಹಿಸಿದರು.

ಭಾರತದ ಬಾಲಿವುಡ್ ಸಿನಿಮಾಗಳನ್ನು ಪಾಕಿಸ್ತಾನದ ಜನರು ವೀಕ್ಷಿಸುತ್ತೇವೆ. ಪಾಕಿಸ್ತಾನದ ನಾಟಕಗಳನ್ನು ಭಾರತೀಯರು ವೀಕ್ಷಿಸಿ. ಈ ಒಡನಾಟ ಎಂದಿಂದಿಗೂ ಜೀವಂತವಾಗಿರಲಿ ಎಂದು ಕಿರಿ ವಯಸ್ಸಿನ ನೊಬೆಲ್ ಪುರಸ್ಕೃತೆ ಮಲಾಲಾ ಯೂಸುಫ್ ಆಶಯ ವ್ಯಕ್ತಪಡಿಸಿದರು. ಭಾರತ ಮತ್ತು ಪಾಕಿಸ್ತಾನಗಳೆರಡನ್ನೂ ಒಳ್ಳೆಯ ಗೆಳೆಯರಂತೆ ನೋಡುವ ತಮ್ಮ ಕನಸು ಆದಷ್ಟು ಬೇಗ ನನಸಾಗಲಿ ಎಂದು ಅವರು ಹಾರೈಸಿದರು.

ಫೆಬ್ರವರಿ 19ರಿಂದ ಆರಂಭಗೊಂಡಿದ್ದ ವಿಶ್ವ ಪ್ರಸಿದ್ಧ ಜೈಪುರ ಸಾಹಿತ್ಯ ಉತ್ಸವ ಇಂದು ಮುಕ್ತಾಯವಾಗಿದೆ. ವರ್ಚುವಲ್ ಮೂಲಕವೇ ನಡೆದ ಯಶಸ್ವಿ ಸಮ್ಮೇಳನ ಎಂಬ ಹಿರಿಮೆಗೂ ಈ ಬಾರಿಯ ಜೈಪುರ ಸಾಹಿತ್ಯ ಉತ್ಸವ ಪ್ರಾಪ್ತವಾಗಿದೆ.

ಭಾರತ- ಪಾಕಿಸ್ತಾನ ಸೇನಾ ಒಪ್ಪಂದ ಇತ್ತೀಚಿಗಷ್ಟೇ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣಾ ರೇಖೆ (LOC) ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಗಡಿದಾಟಿ ಗುಂಡಿನ ಚಕಮಕಿ ನಡೆಸುವುದಿಲ್ಲ ಎಂದು ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಒಪ್ಪಿಕೊಂಡಿವೆ. ಈ ನಿರ್ಧಾರವು ಫೆಬ್ರವರಿ 24-25 ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿರುವುದಾಗಿ ಉಭಯ ಸೇನಾಪಡೆಗಳು ಹೇಳಿವೆ.

ಈ ಬಗ್ಗೆ ಜಂಟಿ ಪ್ರಕಟಣೆ ಹೊರಡಿಸಿದ ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರು, ಎರಡೂ ದೇಶದ ಅಧಿಕಾರಿಗಳು ದೂರವಾಣಿ ಹಾಟ್‌ಲೈನ್‌ನಲ್ಲಿ ಸಂಪರ್ಕಿಸಿದ್ದಾರೆ. ಯಾವುದೇ ಅನಿರೀಕ್ಷಿತ ಪರಿಸ್ಥಿತಿ ಎದುರಾದಾಗ ಈಗಾಗಲೇ ಚಾಲ್ತಿಯಲ್ಲಿರುವ ಹಾಟ್‌ಲೈನ್ ಸಂಪರ್ಕ ಮತ್ತು ಗಡಿ ಧ್ವಜ ಸಭೆಗಳ ಕಾರ್ಯವಿಧಾನಗಳನ್ನು ಬಳಸಿಕೊಳ್ಳಲಾಗುವುದು ಎಂದಿದ್ದಾರೆ.

ಹಾಟ್‌ಲೈನ್‌ ಸಂಪರ್ಕ ಬಳಸಿ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಯ ಮಹಾನ ನಿರ್ದೇಶಕರು ಚರ್ಚೆ ನಡೆಸಿದ್ದಾರೆ. ಎರಡೂ ರಾಷ್ಟ್ರಗಳು ಗಡಿ ನಿಯಂತ್ರಣಾ ರೇಖೆ ಮತ್ತು ಇನ್ನಿತರ ವಲಯಗಳಲ್ಲಿ ಮುಕ್ತ, ಸರಳ ಹಾಗೂ ಸೌಹಾರ್ದಯುತ ವಾತಾವರಣ ನೆಲೆಸುವಂತೆ ಮಾಡಲು ಪರಿಸ್ಥಿತಿಯ ಅವಲೋಕನ ನಡೆಸಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಎರಡೂ ರಾಷ್ಟ್ರಗಳು ಗಡಿ ನಿಯಂತ್ರಣ ರೇಖೆ ಮತ್ತು ಇತರ ವಲಯಗಳಲ್ಲಿ ಕದನ ವಿರಾಮವನ್ನು ಪಾಲಿಸಲು ಒಪ್ಪಿಕೊಂಡಿವೆ. ಈ ನಿಯಮ ಫೆಬ್ರವರಿ 24-25 ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ ಎಂದು ಸೇನಾಪಡೆಯ ಜಂಟಿ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ನಾವು ಎಂದಿಗೂ ಶಾಂತಿಯ ಪರ; ಭಾರತ-ಪಾಕಿಸ್ತಾನ ಕದನವಿರಾಮ ಒಪ್ಪಂದ ಸ್ವಾಗತಿಸಿ ಇಮ್ರಾನ್ ಖಾನ್ ಟ್ವೀಟ್

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಭಾರತ ಮೂಲದ ಅರೋರಾ ಆಕಾಂಕ್ಷಾ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ