ಹೊಸ ಡ್ರೆಸ್​ ಹಾಕಿ ಖುಷಿಯಿಂದ ಶಾಲೆಗೆ ಹೋದ ಬಾಲಕಿಯನ್ನು ಬೈದು ಮನೆಗೆ ಕಳಿಸಿದ ಶಿಕ್ಷಕಿ; ನೈತಿಕ ಪೊಲೀಸ್​ಗಿರಿಯ ವಿರುದ್ಧ ನೆಟ್ಟಿಗರು ಗರಂ

ನನ್ನ ಮಗಳು ಧರಿಸಿದ ಉಡುಪು ಸರಿಯಾಗಿಯೇ ಇದೆ. ಕಪ್ಪು ಬಣ್ಣದ ಡ್ರೆಸ್ ಅನುಚಿತವಾಗಿಲ್ಲ. ಶಿಕ್ಷಕಿಯ ಈ ನಡೆ ಅಸಂಬದ್ಧವಾಗಿದೆ ಎಂದು ವಿದ್ಯಾರ್ಥಿನಿಯ ಅಪ್ಪ ಕ್ರಿಸ್ಟೋಫರ್ ಕಿಡಿಕಾರಿದ್ದಾರೆ.

ಹೊಸ ಡ್ರೆಸ್​ ಹಾಕಿ ಖುಷಿಯಿಂದ ಶಾಲೆಗೆ ಹೋದ ಬಾಲಕಿಯನ್ನು ಬೈದು ಮನೆಗೆ ಕಳಿಸಿದ ಶಿಕ್ಷಕಿ; ನೈತಿಕ ಪೊಲೀಸ್​ಗಿರಿಯ ವಿರುದ್ಧ ನೆಟ್ಟಿಗರು ಗರಂ
ಕ್ಯಾರಿಸ್ ವಿಲ್ಸನ್
Follow us
Lakshmi Hegde
|

Updated on: Mar 01, 2021 | 4:31 PM

ಆಕೆ 17ವರ್ಷದ ಬಾಲಕಿ..ಸೀನಿಯರ್ ಸೆಕೆಂಡರಿ ಸ್ಕೂಲ್​ನಲ್ಲಿ ಓದುತ್ತಿದ್ದ ಆಕೆ ಕಳೆದ ಮಂಗಳವಾರವೂ ಎಂದಿನಂತೆ ಖುಷಿಯಿಂದ ಶಾಲೆಗೆ ಹೋದಳು. ಆದರೆ ಕೆಲವೇ ಹೊತ್ತಲ್ಲಿ ಶಿಕ್ಷಕಿ ಆಕೆಗೆ ಬೈದು, ಮನೆಗೆ ಕಳಿಸಿದ್ದಾರೆ. ಈ ಘಟನೆ ನಡೆದಿದ್ದು, ಬ್ರಿಟಿಷ್​ ಕೊಲಂಬಿಯಾದ ನೋರ್​ಕಾಮ್​ ಸೀನಿಯರ್​ ಸೆಕೆಂಡರಿ ಸ್ಕೂಲ್​​ನಲ್ಲಿ. ಅಷ್ಟಕ್ಕೂ ಆ ವಿದ್ಯಾರ್ಥಿನಿ ಮಾಡಬಾರದ್ದೇನೂ ಮಾಡಿರಲಿಲ್ಲ..ಮೊಣಕಾಲುದ್ದ ಬಟ್ಟೆ ಧರಿಸಿ, ಚೆಂದವಾಗಿ ರೆಡಿಯಾಗಿ ಹೋಗಿದ್ದಳಷ್ಟೇ !

12ನೇ ಕ್ಲಾಸ್​ನಲ್ಲಿ ಓದುತ್ತಿರುವ ಕ್ಯಾರಿಸ್ ವಿಲ್ಸನ್​ಗೆ ಈ ಕೆಟ್ಟ ಅನುಭವ ಆಗಿದೆ. ಆಕೆ ಮೊಣಕಾಲವರೆಗಷ್ಟೇ ಉದ್ದವಿರುವ ಕಪ್ಪು ಬಣ್ಣದ, ಬಿಗಿಯಾದ ಡ್ರೆಸ್​ ಧರಿಸಿ ಶಾಲೆಗೆ ಹೋಗಿದ್ದಳು. ಬಿಳಿ ಬಣ್ಣದ, ಪೂರ್ತಿ ಕುತ್ತಿಗೆಯವರೆಗೆ ಮುಚ್ಚುವ ಟಿ ಶರ್ಟ್​ ಕೂಡ ಹಾಕಿದ್ದಳು. ಆದರೆ ಈ ಉಡುಪು ಶಾಲೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಶಿಕ್ಷಕಿ ಹೇಳಿದ್ದಾರೆ. ಅಲ್ಲದೆ, ಇಂಥ ಡ್ರೆಸ್​ಗಳನ್ನು ಹಾಕಿಬಂದರೆ ಪುರುಷ ಶಿಕ್ಷಕರು, ವಿದ್ಯಾರ್ಥಿಗಳು ಮುಜುಗರಕ್ಕೀಡಾಗಬಹುದು. ಅವರಿಗೆ ಇರಿಸುಮುರಿಸಾಗಬಹುದು ಎಂದೂ ಆ ಶಿಕ್ಷಕಿ ಸಮಜಾಯಿಷಿ ನೀಡಿದ್ದಾರೆ. ಇನ್ನು ಬಾಲಕಿಯಂತೂ ಅಳುತ್ತ ವಾಪಸ್​ ಮನೆಗೆ ಬಂದಿದ್ದಾಳೆ.

ಕ್ಯಾರಿಸ್​ ಅಪ್ಪ ಹೇಳಿದ್ದೇನು? ಮಗಳನ್ನು ಶಿಕ್ಷಕಿ ಮನೆಗೆ ಕಳಿಸಿದ್ದಕ್ಕೆ ಆಕೆಯ ತಂದೆ ಕ್ರಿಸ್ಟೋಫರ್​ ವಿಲ್ಸನ್​ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಫೇಸ್​ಬುಕ್​ನಲ್ಲಿ ವಿಸ್ತಾರವಾಗಿ ಪೋಸ್ಟ್ ಹಾಕಿದ್ದಾರೆ. ಇಂದು ನನ್ನ ಸುಂದರವಾದ ಮಗಳು, ಒಳ್ಳೆಯ ಉಡುಪು ಧರಿಸಿಕೊಂಡು ಕಲಿಕೆಯ ಉತ್ಸಾಹದಿಂದ ಶಾಲೆಗೆ ಹೋದಳು. ಆದರೆ ಶಿಕ್ಷಕಿ ಆಕೆಯ ಉತ್ಸಾಹವನ್ನೇ ಕುಗ್ಗಿಸಿದರು. ಕೆಲವೇ ಹೊತ್ತಲ್ಲಿ ಮನೆಗೆ ಕಳಿಸಲಾಯಿತು. ಕಾರಣ ಕೇಳಿದ್ದಕ್ಕೆ, ಉಡುಪು ಅನುಚಿತವಾಗಿದೆ ಎಂದೂ ಹೇಳಿದರು. ಈ ವಿಷಯ ಕೇಳಿ ನನಗೆ ತುಂಬ ನೋವು, ಹತಾಶೆ, ನಿರಾಸೆಯಾಯಿತು. ಇದೆಂತಾ ವ್ಯವಸ್ಥೆ ಎಂದೂ ಅನ್ನಿಸಿತು ಎಂದಿದ್ದಾರೆ.

ನನ್ನ ಮಗಳು ಧರಿಸಿದ ಉಡುಪು ಸರಿಯಾಗಿಯೇ ಇದೆ. ಕಪ್ಪು ಬಣ್ಣದ ಡ್ರೆಸ್ ಅನುಚಿತವಾಗಿಲ್ಲ. ಶಿಕ್ಷಕಿಯ ಈ ನಡೆ ಅಸಂಬದ್ಧವಾಗಿದೆ ಎಂದು ವಿದ್ಯಾರ್ಥಿನಿಯ ಅಪ್ಪ ಕ್ರಿಸ್ಟೋಫರ್ ಕಿಡಿಕಾರಿದ್ದಾರೆ. ​ಇನ್ನು ಕ್ಯಾರಿಸ್​ರನ್ನು ಹೊರಗೆ ಕಳಿಸುತ್ತಿದ್ದಂತೆ ಆಕೆಯ ಕ್ಲಾಸ್​ಮೇಟ್​​ಗಳು ಕೂಡ ಹೊರನಡೆದಿದ್ದಾರೆ. ಈ ಮೂಲಕ ಕ್ಯಾರಿಸ್​ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಘಟನೆಯ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಜಗತ್ತಿನಾದ್ಯಂತ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ನೈತಿಕ ಪೊಲೀಸ್​ಗಿರಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮೂರು ಮದುವೆಯಾಚೆಗೂ ನನಗೆ ಹಲವರೊಂದಿಗೆ ಅಫೇರ್ ಇತ್ತು..ಹುಟ್ಟಿದ ಮಕ್ಕಳೂ ಲೆಕ್ಕವಿಲ್ಲ: ಫುಟ್ಬಾಲ್​ ದಂತಕತೆ ಪೀಲೆ ಬಿಚ್ಚಿಟ್ಟ ಸತ್ಯ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ