ಅಂಕಣಕಾರ ಖಶೋಗ್ಗಿ ಹತ್ಯೆಯಲ್ಲಿ ಸೌದಿ ರಾಜಕುಮಾರನ ಪಾತ್ರ; ವ್ಯಾಪಕ ಖಂಡನೆ

ಬ್ರಿಟನ್​ನ ವಿದೇಶಾಂಗ ಸಚಿವಾಲಯ, ‘ಜಮಾಲ್ ಖಶೋಗ್ಗಿ ಅವರ ಹತ್ಯೆಯು ಭಯಾನಕವಾದ ಅಪರಾಧವೆಂದು ಈ ಹಿಂದೆಯೂ ಹೇಳಿದ್ದೇವೆ. ಈ ಹತ್ಯೆಯ ಹಿಂದೆ ಸೌದಿ ಅರೇಬಿಯಾದ 20 ನಾಗರಿಕರು ಇರುವ ಕುರಿತು ವಿಶ್ವಾಸಾರ್ಹ, ಪಾರದರ್ಶಕ ತನಿಖೆಯನ್ನು ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ ಎಂದು ಪ್ರತಿಕ್ರಿಯಿಸಿದೆ. ಇಷ್ಟಕ್ಕೇ ನಿಲ್ಲದ ಬ್ರಿಟನ್ ವಿದೇಶಾಂಗ ಸಚಿವಾಲಯ ಸೌದಿ ಅರೇಬಿಯಾದ ಜತೆಗಿನ ಮುಂದಿನ ಸಮಾಲೋಚನೆಗಳಲ್ಲಿ ಪಾರದರ್ಶಕ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದೆ.

ಅಂಕಣಕಾರ ಖಶೋಗ್ಗಿ ಹತ್ಯೆಯಲ್ಲಿ ಸೌದಿ ರಾಜಕುಮಾರನ ಪಾತ್ರ; ವ್ಯಾಪಕ ಖಂಡನೆ
ಸೌದಿ ಅರೇಬಿಯಾದ ರಾಜಕುಮಾರ ಬಿನ್ ಸಲ್ಮಾನ್ (ಎಡ) ಅಂಕಣಕಾರ ಜಮಾಲ್ ಖಶೋಗ್ಗಿ (ಬಲ)
Follow us
| Edited By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 28, 2021 | 7:23 PM

ವಾಷಿಂಗ್ಟನ್: ಅಂಕಣಕಾರ ಜಮಾಲ್ ಖಶೋಗ್ಗಿ ಅವರ ಹತ್ಯೆಗೆ ಅನುಮತಿ ನೀಡಿರುವ ವಿಚಾರದಲ್ಲಿ ಸೌದಿ ಅರೇಬಿಯಾದ ರಾಜಕುಮಾರ ಬಿನ್ ಸಲ್ಮಾನ್ ಬಗ್ಗೆ ಜಗತ್ತಿನಾದ್ಯಂತ ವಿವಿಧ ದೇಶಗಳು ಪ್ರತಿಕ್ರಿಯಿಸಿವೆ. ಸೌದಿ ಅರೇಬಿಯಾದ ವಿದೇಶಾಂಗ ಇಲಾಖೆ ಅಮೆರಿಕಾ ಗುಪ್ತಚರ ವರದಿಯನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದು, ವರದಿ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಆರೋಪಿಸಿದೆ.

‘ಜಮಾಲ್ ಖಶೋಗ್ಗಿ ಅವರ ಹತ್ಯೆಯು ಭಯಾನಕವಾದ ಅಪರಾಧವೆಂದು ಈ ಹಿಂದೆಯೂ ಹೇಳಿದ್ದೇವೆ. ಈ ಹತ್ಯೆಯ ಹಿಂದೆ ಸೌದಿ ಅರೇಬಿಯಾದ 20 ನಾಗರಿಕರು ಇರುವ ಕುರಿತು ವಿಶ್ವಾಸಾರ್ಹ, ಪಾರದರ್ಶಕ ತನಿಖೆಯನ್ನು ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ’ ಎಂದು ಬ್ರಿಟನ್​ನ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ. ಇಷ್ಟಕ್ಕೇ ನಿಲ್ಲದ ಬ್ರಿಟನ್ ವಿದೇಶಾಂಗ ಸಚಿವಾಲಯ ಸೌದಿ ಅರೇಬಿಯಾದ ಜತೆಗಿನ ಮುಂದಿನ ಸಮಾಲೋಚನೆಗಳಲ್ಲಿ ಪಾರದರ್ಶಕ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತನಿಖಾ ಸಂಸ್ಥೆ, ತನ್ನ ಫೇಸ್​ಬುಕ್ ಖಾತೆಯಲ್ಲಿ, ‘ಅಮೆರಿಕ ಬಿಡುಗಡೆಗೊಳಿಸಿರುವ ವರದಿಯಲ್ಲಿ ಸೌದಿ ಅರೇಬಿಯದ ಉನ್ನತ ಅಧಿಕಾರಿಗಳ ಪಾತ್ರವಿರುವುದು ಖಚಿತಗೊಂಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ತಡೆಯಲು ಅಮೆರಿಕ ಪ್ರಯತ್ನಿಸಬೇಕಿದೆ’ ಎಂದು ಅಭಿಪ್ರಾಯಪಟ್ಟಿದೆ.

2018ರ ಅಕ್ಟೋಬರ್​ನಲ್ಲಿ ಇಸ್ತಾಂಬುಲ್​ನ ಸೌದಿ ಕಾನ್ಸುಲೇಟ್​ನೊಳಗೆ ಖಶೋಗ್ಗಿ ಹತ್ಯೆ ನಡೆದಿತ್ತು. ನಂತರ ಸಿಐಎ ಮತ್ತು ಇತರ ಗುಪ್ತಚರ ಸಂಸ್ಥೆಗಳಿಂದ ಗುಪ್ತಚರ ವರದಿಯನ್ನು ಸಿದ್ಧಪಡಿಸಲಾಗಿದೆ. ಗುಪ್ತಚರ ಸಂಸ್ಥೆಗಳಿಂದ ಸಿದ್ಧವಾಗಿರುವ ವರದಿ ಬಹಿರಂಗವಾದ ಬಳಿಕವೇ ಖಶೋಗ್ಗಿ ಹತ್ಯೆಯಲ್ಲಿ ಪ್ರಿನ್ಸ್ ಮೊಹಮ್ಮದ್ ಪಾತ್ರದ ಬಗ್ಗೆ ಹೆಚ್ಚಿನ ವಿವರಗಳು ತಿಳಿಯಲಿದೆ.

ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿಯಿಂದ ಸಂಗ್ರಹಿಸಲ್ಪಟ್ಟ ವರದಿಯನ್ನು ಬಿಡುಗಡೆ ಮಾಡುವ ನಿರ್ಧಾರವು, ಸೌದಿ ಅರೇಬಿಯಾದೊಂದಿಗಿನ ಸಂಬಂಧವನ್ನು ಮರುಸ್ಥಾಪಿಸುವ ಅಮೆರಿಕಾದ ಬೈಡೆನ್ ಆಡಳಿತದ ನಿರ್ಧಾರದ ಮೇಲೆ ಆಧರಿಸಿದೆ ಎನ್ನಲಾಗುತ್ತಿದೆ. ವರದಿಯ ಪ್ರಕಟಣೆಗೂ ಮುನ್ನವೇ, ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಸೌದಿ ಅರೇಬಿಯಾದ ರಾಜ ಸಲ್ಮಾನ್ ಅವರೊಂದಿಗೆ ಗುರುವಾರ (ಫೆ.25) ದೂರವಾಣಿ ಕರೆ ಮೂಲಕ ಮಾತನಾಡಿದ್ದಾರೆ. ಬೈಡೆನ್ ಪ್ರಾದೇಶಿಕ ಭದ್ರತೆ ಹಾಗೂ ಯೆಮನ್​ನಲ್ಲಿನ ಆಂತರಿಕ ಯುದ್ಧವನ್ನು ಕೊನೆಗೊಳಿಸುವ ಕುರಿತು ಒಲವು ತೋರಿದ್ದಾರೆ. ಈ ವಿಚಾರದಲ್ಲಿ ಅಮೆರಿಕ ಮತ್ತು ವಿಶ್ವಸಂಸ್ಥೆಯ ಹೊಸ ಪ್ರಯತ್ನಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಜಾಗತಿಕ ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮಗಳ ಮೇಲೆ ಅಮೆರಿಕಾ ಮಹತ್ವವನನ್ನು ದೃಢೀಕರಿಸಿದೆ ಎಂದು ಶ್ವೇತಭವನ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಖಶೋಗ್ಗಿ ಹತ್ಯೆ ವಿಚಾರವನ್ನು ಮತ್ತೆ ಕೆದಕಿದ ದೊಡ್ಡಣ್ಣ

ಇದನ್ನೂ ಓದಿ: ಸೌದಿ ಅರೇಬಿಯಾದ ಸಾಲ ತೀರಿಸಲು ಚೀನಾದಿಂದ ಸಾಲ ಪಡೆದ ಪಾಕಿಸ್ತಾನ

Published On - 7:22 pm, Sun, 28 February 21

ತಾಜಾ ಸುದ್ದಿ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ