AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌದಿ ಅರೇಬಿಯಾದ ಹಳೇ ಸಾಲ ತೀರಿಸಲು ಚೀನಾದಿಂದ ದೊಡ್ಡ ಮೊತ್ತದ ಹೊಸ ಸಾಲ ಪಡೆದ ಪಾಕಿಸ್ತಾನ

ಪಾಕಿಸ್ತಾನಕ್ಕೆ ಈ ಬೃಹತ್ ಮೊತ್ತವನ್ನು ಚೀನಾ ತನ್ನ ವಿದೇಶಾಂಗ ವ್ಯವಹಾರಗಳ ಇಲಾಖೆಯ ಮೂಲಕ ನೀಡುತ್ತಿಲ್ಲ. ಇದನ್ನು ವಾಣಿಜ್ಯ ಸಾಲ ಎಂದೂ ಪರಿಗಣಿಸಿಲ್ಲ.

ಸೌದಿ ಅರೇಬಿಯಾದ ಹಳೇ ಸಾಲ ತೀರಿಸಲು ಚೀನಾದಿಂದ ದೊಡ್ಡ ಮೊತ್ತದ ಹೊಸ ಸಾಲ ಪಡೆದ ಪಾಕಿಸ್ತಾನ
ಪ್ರಾತಿನಿಧಿಕ ಚಿತ್ರ
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Dec 14, 2020 | 3:27 PM

Share

ಇಸ್ಲಾಮಾಬಾದ್: ಸೌದಿ ಅರೇಬಿಯಾಕ್ಕೆ ತುರ್ತಾಗಿ ಪಾವತಿಸಬೇಕಿರುವ 2 ಶತಕೋಟಿ ಡಾಲರ್ ಹಳೇ ಸಾಲ ತೀರಿಸಲು ಪಾಕಿಸ್ತಾನವು ಅಷ್ಟೇ ಮೊತ್ತದ ಹೊಸ ಸಾಲವನ್ನು ಚೀನಾದಿಂದ ಪಡೆದುಕೊಳ್ಳುತ್ತಿದೆ. ಇಂದು (ಡಿ.14) ಸಾಲದ ಮೊದಲ ಕಂತಾಗಿ 1 ಶತಕೋಟಿ ಡಾಲರ್ ಮೊತ್ತವನ್ನು ಚೀನಾಗೆ ಪಾಕಿಸ್ತಾನ ಪಾವತಿಸಲಿದೆ. ಬಾಕಿ ಮೊತ್ತವನ್ನು ಜನವರಿ ತಿಂಗಳಲ್ಲಿ ಪಾವತಿಸುವುದಾಗಿ ಹೇಳಿದೆ.

ಪಾಕಿಸ್ತಾನಕ್ಕೆ ಈ ಬೃಹತ್ ಮೊತ್ತವನ್ನು ಚೀನಾ ತನ್ನ ವಿದೇಶಾಂಗ ವ್ಯವಹಾರಗಳ ಇಲಾಖೆಯ ಮೂಲಕ ನೀಡುತ್ತಿಲ್ಲ. ಇದನ್ನು ವಾಣಿಜ್ಯ ಸಾಲ ಎಂದೂ ಪರಿಗಣಿಸಿಲ್ಲ. ಅದರ ಬದಲು 2011ರ ದ್ವಿಪಕ್ಷೀಯ ಕರೆನ್ಸಿ ಸ್ವಾಪ್​ ಒಪ್ಪಂದದ (CSA) ಒಪ್ಪಂದದ ವ್ಯಾಪ್ತಿಯನ್ನು ಸ್ವಲ್ಪ ಹೆಚ್ಚಿಸಿ, ಈ ಸಾಲ ನೀಡುತ್ತಿದೆ.

ಏನಿದು CSA? ಕರೆನ್ಸಿ ಸ್ವಾಪ್​ ಅಗ್ರಿಮೆಂಟ್ ಎಂದರೆ ಕರೆನ್ಸಿ ವಿನಿಮಯ ಒಪ್ಪಂದ. 2011ರಲ್ಲಿ ಪಾಕಿಸ್ತಾನದ ಸ್ಟೇಟ್ ಬ್ಯಾಂಕ್​ ಮತ್ತು ಚೀನಾದ ಪೀಪಲ್ಸ್​ ಬ್ಯಾಂಕ್​ ನಡುವೆ ಈ ಒಪ್ಪಂದ ಆಗಿದೆ. ದ್ವಿಪಕ್ಷೀಯ ವ್ಯಾಪಾರ ಮತ್ತು ಹಣಕಾಸು ನೇರ ಹೂಡಿಕೆ ಉತ್ತೇಜಿಸಲು ಹಾಗೂ ಅಲ್ಪಾವಧಿ ಲಿಕ್ವಿಡಿಟಿ (ದ್ರವ್ಯತೆ) ಬೆಂಬಲ ನೀಡಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೂಲ ಒಪ್ಪಂದವನ್ನು 2014ರಲ್ಲಿ ನವೀಕರಿಸಲಾಗಿದ್ದು, ಅದರ ಅನ್ವಯ ಮೌಲ್ಯ 10 ಶತಕೋಟಿ ಚೀನಾ ಯುವಾನ್​ ಅಥವಾ 1.5 ಶತಕೋಟಿ ಅಮೆರಿಕ ಡಾಲರ್​ನಷ್ಟು ಮೊತ್ತವನ್ನು ಎರಡೂ ದೇಶಗಳು ಪರಸ್ಪರ ನಗದು ವಿನಿಮಯ ಮಾಡಿಕೊಳ್ಳಬಹುದಾಗಿತ್ತು.

2018ರಲ್ಲಿ ಈ ಒಪ್ಪಂದದ ವ್ಯಾಪ್ತಿಯನ್ನು ಮೂರು ವರ್ಷಗಳ ಅವಧಿಗೆ ಹೆಚ್ಚಿಸಲಾಗಿದ್ದು. ಇದರ ಅನ್ವಯ 20ಶತಕೋಟಿ ಯುವಾನ್ ಅಥವಾ 3 ಶತಕೋಟಿ ಡಾಲರ್​ಗೆ ಮೌಲ್ಯವನ್ನು ಏರಿಸಲಾಗಿದೆ. ಈ ಒಪ್ಪಂದದ ಪ್ರಕಾರ ಈಗ ಚೀನಾ ಕೊಟ್ಟಿರುವ 2 ಶತಕೋಟಿ ಡಾಲರ್ ಸಾಲವು ಪಾಕಿಸ್ತಾನವು ಹೊರದೇಶದಿಂದ ಪಡೆದುಕೊಂಡ ಸಾರ್ವಜನಿಕ ಸಾಲ ಎನಿಸಿಕೊಳ್ಳುವುದಿಲ್ಲ.

ಸಾಲದ ಷರತ್ತುಗಳ ಬಗ್ಗೆ ಎರಡೂ ದೇಶಗಳೂ ಮೌನವಾಗಿದ್ದು, ದ್ವಿಪಕ್ಷೀಯ ಗೌಪ್ಯ ವಿಚಾರ ಎಂದು ಹೇಳಿವೆ.

ಸದ್ಯಕ್ಕೆ ಪಾಕಿಸ್ತಾನಕ್ಕೆ ವೀಸಾ ವಿತರಣೆ ಸ್ಥಗಿತಗೊಳಿಸಿದ UAE

Published On - 3:26 pm, Mon, 14 December 20

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು