AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಯುವುದಕ್ಕೂ ಮೊದಲು 3 ಲಕ್ಷಕ್ಕೆ ಜೀವವಿಮೆ ಖರೀದಿಸಿದ್ದ ತಾಲಿಬಾನ್​ ಮುಖ್ಯಸ್ಥ!

2016 ಮೇ 21ರಂದು ಮನ್ಸೂರ್​​ನನ್ನು ಪಾಕಿಸ್ತಾನ-ಇರಾನ್​ ಗಡಿಯಲ್ಲಿ ಹೊಡೆದುರುಳಿಸಲಾಗಿತ್ತು. ಈತ 2015ರ ಜುಲೈ ತಿಂಗಳಿಂದ ತಾಲಿಬಾನ್​ ಅನ್ನು ಮುನ್ನಡೆಸುತ್ತಿದ್ದ.

ಸಾಯುವುದಕ್ಕೂ ಮೊದಲು 3 ಲಕ್ಷಕ್ಕೆ ಜೀವವಿಮೆ ಖರೀದಿಸಿದ್ದ ತಾಲಿಬಾನ್​ ಮುಖ್ಯಸ್ಥ!
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
|

Updated on:Dec 13, 2020 | 9:35 PM

Share

ಇಸ್ಲಾಮಾಬಾದ್: ಅಫ್ಗಾನಿಸ್ತಾನದ ಮುಖ್ಯಸ್ಥ ಮುಲ್ಲಾ ಅಖ್ತರ್​ ಮನ್ಸೂರ್ ಅಮೆರಿಕದ ಡ್ರೋನ್​ ದಾಳಿಯಲ್ಲಿ ಸಾಯುವುದಕ್ಕೂ ಮೊದಲು 3 ಲಕ್ಷ ರೂಪಾಯಿಗೆ ಜೀವವಿಮೆ ಖರೀದಿಸಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

2016 ಮೇ 21ರಂದು ಮನ್ಸೂರ್​​ನನ್ನು ಪಾಕಿಸ್ತಾನ-ಇರಾನ್​ ಗಡಿಯಲ್ಲಿ ಹೊಡೆದುರುಳಿಸಲಾಗಿತ್ತು. ಈತ 2015ರ ಜುಲೈ ತಿಂಗಳಿಂದ ತಾಲಿಬಾನ್​ ಅನ್ನು ಮುನ್ನಡೆಸುತ್ತಿದ್ದ. ಈತ ನಕಲಿ ಐಡಿ ನೀಡಿ ಪಾಕಿಸ್ತಾನದಲ್ಲಿ 3 ಲಕ್ಷ ರೂಪಾಯಿ ಜೀವ ವಿಮೆ ಖರೀದಿ ಮಾಡಿದ್ದ. ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ ಪ್ರಕರಣದ ತನಿಖೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.

ಮನ್ಸೂರ್​ ಜೀವ ವಿಮೆ ಖರೀದಿಸಿದ ವಿಚಾರಕ್ಕೆ ಸಂಬಂಧಿಸಿ ತನಿಖಾ ತಂಡ ವಿಮೆ ಕಂಪೆನಿಯವರನ್ನು ಸಂಪರ್ಕ ಮಾಡಿತ್ತು. ಆಮೂಲಾಗ್ರವಾಗಿ ತನಿಖೆ ಮಾಡಿದಾಗ ನಕಲಿ ಗುರುತಿನ ಚೀಟಿ ನೀಡಿ ವಿಮೆ ಪಡೆದಿದ್ದ ಎಂದು ಗೊತ್ತಾಗಿದೆ. ಈ ಹಣವನ್ನು ವಿಮಾ ಕಂಪನಿ ಸರ್ಕಾರಕ್ಕೆ ನೀಡಿದೆ.

ಘೋಷಣೆ ಮಾಡಿದ್ದ ಒಬಾಮ ಅಮೆರಿಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಬರಾಕ್​ ಒಬಾಮ 2016ರಲ್ಲಿ ಮನ್ಸೂರ್​ ಸತ್ತಿದ್ದನ್ನು ಖಚಿತಪಡಿಸಿದ್ದರು. ಮನ್ಸೂರ್​ ಬಲೂಚಿಸ್ತಾನದಲ್ಲಿ ಅಡಗಿದ್ದ. ಅಮೆರಿಕ ಆತನನ್ನು ಸಾಯಿಸಲು ಯಶಸ್ವಿಯಾಗಿದೆ ಎಂದು ಒಬಾಮ ಹೇಳಿದ್ದರು. ಪಾಕಿಸ್ತಾನ 2005ರಲ್ಲಿ ಈತನಿಗೆ ರಾಷ್ಟ್ರೀಯ ಗುರುತಿನ ಚೀಟಿ ನೀಡಿತ್ತು ಎನ್ನಲಾಗಿದೆ.

ಮಹಾರಾಷ್ಟ್ರವನ್ನು ‘ತಾಲಿಬಾನ್’​ಗೆ ಹೋಲಿಸಿದ ಕ್ವೀನಾ ಕಂಗನಾ

Published On - 9:22 pm, Sun, 13 December 20

ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ