ಆ್ಯಪಲ್ ತಂದ ಆಪತ್ತು.. ಮೊಬೈಲ್ ಚಾರ್ಜ್ ಹಾಕಿ ಜಳಕ ಮಾಡಿದ ಮಹಿಳೆ ಸಾವು!
ಒಲೆಸ್ಯಾ ಸೆಮೆನೋವಾ ಎಂಬಾಕೆ ಮೃತ ಮಹಿಳೆ. ಬಾತ್ ಟಬ್ನಲ್ಲಿ ನೀರು ತುಂಬಿಸಿ, ಅದರಲ್ಲಿ ಕೂತು ಮೊಬೈಲ್ ನೋಡೋದು ಆಕೆಯ ದಿನಚರಿಗಳಲ್ಲೊಂದಾಗಿತ್ತು. ಇದೇ ಅವಳ ಪ್ರಾಣಕ್ಕೆ ಕುತ್ತಾಗಿದೆ.
ಚಾರ್ಜ್ಗೆ ಹಾಕಿ ಮೊಬೈಲ್ ಬಳಕೆ ಮಾಡಬೇಡಿ ಎಂದು ತಜ್ಞರು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಆದರೆ, ಇದನ್ನು ಅನೇಕರು ನಿರ್ಲಕ್ಷಿಸುತ್ತಾರೆ. ಅದೇ ರೀತಿ ಈಗ ಮೊಬೈಲ್ ಚಾರ್ಜ್ ಹಾಕಿ ಬಳಕೆ ಮಾಡಿದ ಮಹಿಳೆ ಸಾವಿನ ಮನೆ ಸೇರಿದ್ದಾಳೆ.
ಈ ಘಟನೆ ನಡೆದಿದ್ದು ರಷ್ಯಾದಲ್ಲಿ. ಒಲೆಸ್ಯಾ ಸೆಮೆನೋವಾ ಎಂಬಾಕೆ ಮೃತ ಮಹಿಳೆ. ಬಾತ್ ಟಬ್ನಲ್ಲಿ ನೀರು ತುಂಬಿಸಿ, ಅದರಲ್ಲಿ ಕೂತು ಮೊಬೈಲ್ ನೋಡೋದು ಆಕೆಯ ದಿನಚರಿಗಳಲ್ಲೊಂದಾಗಿತ್ತು. ಮೊಬೈಲ್ಗೆ ಚಾರ್ಜ್ ಹಾಕೋಕೆ ಬಾತ್ ಟಬ್ ಪಕ್ಕ ಚಾರ್ಜಿಂಗ್ ಪಾಯಿಂಟ್ ಕೂಡ ಮಾಡಿಸಿಕೊಂಡಿದ್ದಳು ಒಲೆಸ್ಯಾ!
ಅಂದು ಕೂಡ ಹಾಗೇ ಆಗಿದೆ. ಒಲೆಸ್ಯಾ ಆ್ಯಪಲ್-8ನಲ್ಲಿ ಚಾರ್ಜ್ ಇರಲಿಲ್ಲ. ಹೀಗಾಗಿ, ಆಕೆ ಚಾರ್ಜ್ ಹಾಕಿಕೊಂಡೇ ಬಾತ್ ಟಬ್ನಲ್ಲಿ ಕೂತಿದ್ದಾಳೆ. ಚಾರ್ಜ್ ಹಾಕಿರುವಾಗಲೇ ಅವರ ಮೊಬೈಲ್ ಕೈತಪ್ಪಿ ನೀರಿಗೆ ಬಿದ್ದಿದೆ. ಈ ವೇಳೆ ಆಕೆ ಊಹಿಸುವುದರಳೊಗಾಗಿಯೇ ಕರೆಂಟ್ ಷಾಕ್ ಹೊಡೆದು, ಪ್ರಾಣ ಹೋಗಿ ಬಿಟ್ಟಿದೆ.
ಹೌದು, ಮೊಬೈಲ್ ಚಾರ್ಜ್ ಹಾಕಿದ್ದರಿಂದ ನೀರಿನಲ್ಲಿ ವಿದ್ಯುತ್ ಪ್ರವಹಿಸಿದೆ. ಭಾರೀ ಪ್ರಮಾಣದಲ್ಲಿ ವಿದ್ಯುತ್ ಹರಿದಿದ್ದರಿಂದ ಒಲೆಸ್ಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಒಲೆಸ್ಯಾ ಗೆಳತಿ ಕೂಡ ಅದೇ ಮನೆಯಲ್ಲಿದ್ದಳು. ಒಲೆಸ್ಯಾ ಸ್ನಾನದ ಕೊಠಡಿಯಿಂದ ಹೊರ ಬರದ್ದನ್ನು ನೋಡಿ ಬಾಗಿಲು ತಟ್ಟಿದ್ದಾಳೆ. ಆದರೆ, ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ಬಾಗಿಲು ಒಡೆದು ನೋಡಿದಾಗ ಒಲೆಸ್ಯಾ ನೀರಿನಲ್ಲೇ ಬಿದ್ದಿದ್ದಳು. ವೈದ್ಯರು ಬಂದು ಪರೀಕ್ಷೆ ನಡೆಸಿದಾಗ ಆಕೆ ಮೃತಪಟ್ಟಿರುವ ವಿಚಾರ ಅಧಿಕೃತವಾಗಿದೆ.
ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಶಾಕ್ನಿಂದಲೇ ಮೃತಪಟ್ಟಿರುವ ವಿಚಾರ ಬಹಿರಂಗವಾಗಿದೆ. ಈ ವಿಚಾರ ರಷ್ಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದೆ. ಅಷ್ಟೇ ಅಲ್ಲ, ಚಾರ್ಜ್ ಹಾಕಿ ಮೊಬೈಲ್ ಬಳಕೆ ಮಾಡಬೇಡಿ ಎನ್ನುವ ಬಗ್ಗೆ ಆಂದೋಲನ ಕೂಡ ಆರಂಭವಾಗಿದೆ.
ಹೊಸ ಸಂಶೋಧನೆ: ನಿಮ್ಮ ಮೊಬೈಲ್ ಮೂಲಕ ಐದೇ ನಿಮಿಷದಲ್ಲಿ ಕೊರೊನಾ ಸೋಂಕು ಪತ್ತೆ ಸಾಧ್ಯ