AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಫೋಟಕ ಸುದ್ದಿ! ಇದನ್ನು ನೀವು ನಂಬಲೇಬೇಕು.. 2ನೇ ಮಹಾಯುದ್ಧದ ಗ್ರೆನೇಡ್ ನಿನ್ನೆ ಸ್ಫೋಟಗೊಂಡಿತು!

ಜೋಡಿ ಕ್ರೀಸ್ ಅದರ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಳು. ಈ ವಸ್ತು ಏನಿರಬಹುದು ಎಂದು ಸ್ನೇಹಿತರಲ್ಲಿ ಅಭಿಪ್ರಾಯ ಕೇಳಿದ್ದಳು. ಅದನ್ನು ನೋಡಿದವರೆಲ್ಲರೂ ಮನಸ್ಸಿಗೆ ತೋಚಿದಂತೆ ಒಂದೊಂದು ಉತ್ತರ ಕೊಟ್ಟಿದ್ದರು. ಅದು ತಿಮಿಂಗಿಲದ ವಾಂತಿ ಇರಬಹುದು ಎಂಬ ಉತ್ತರವೂ ಸಿಕ್ಕಿತ್ತು.

ಸ್ಫೋಟಕ ಸುದ್ದಿ! ಇದನ್ನು ನೀವು ನಂಬಲೇಬೇಕು.. 2ನೇ ಮಹಾಯುದ್ಧದ ಗ್ರೆನೇಡ್ ನಿನ್ನೆ ಸ್ಫೋಟಗೊಂಡಿತು!
ಗ್ರೆನೇಡ್​ ಸ್ಫೋಟದಿಂದ ಆದ ಅವ್ಯವಸ್ಥೆ
Skanda
| Edited By: |

Updated on: Dec 14, 2020 | 7:10 PM

Share

ಲಂಡನ್: ಎರಡನೇ ಮಹಾಯುದ್ಧದ ಗ್ರೆನೇಡ್ ಒಂದು ಇತ್ತೀಚೆಗೆ ಬ್ರಿಟನ್​ನ ಮನೆಯೊಂದರ ಅಡುಗೆ ಕೋಣೆಯಲ್ಲಿ ಸಿಡಿದಿದೆ. ಈ ಸುದ್ದಿ ಸೋಶಿಯಲ್​ ಮೀಡಿಯಾಗಳಲ್ಲೂ ಸೌಂಡ್​ ಮಾಡಿದೆ. ಆದರೆ, ಎರಡನೇ ಮಹಾಯುದ್ಧಕ್ಕೂ, ಈಗ ಗ್ರೆನೇಡ್ ಸಿಡಿದ ಅಡುಗೆ ಕೋಣೆಗೂ ಏನು ಸಂಬಂಧ? ಎಂದು ಬಹುತೇಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ‘ಸ್ಫೋಟಕ’ ಸ್ಟೋರಿಯ ವಿವರ ಇಲ್ಲಿದೆ ನೋಡಿ.

ಬ್ರಿಟನ್​ ದೇಶದ ಮಹಿಳೆ ಜೋಡಿ ಕ್ರೀಸ್ ಎಂಬಾಕೆ ತನ್ನ ಫೇಸ್​ಬುಕ್​ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾಳೆ. 2ನೇ ಮಹಾಯುದ್ಧದ ಗ್ರೆನೇಡ್​ ನನ್ನ ಮನೆಯ ಅಡುಗೆ ಕೋಣೆಯಲ್ಲಿ ಸಿಡಿದಿದೆ. ಅದರಿಂದ ಹೊಗೆ ಬರುವಾಗ 8 ವರ್ಷದ ಮಗಳು ಇಸಾಬೆಲ್ಲಾ ಅದನ್ನು ನೋಡಿ ಚೀರಿಕೊಂಡು ಹೊರಗೆ ಓಡಿದಳು. ಅದೃಷ್ಟವಷಾತ್ ಯಾವುದೇ ಅಪಾಯವಾಗಿಲ್ಲ ಎಂದು ಬರೆದುಕೊಂಡಿದ್ದಾಳೆ.

ಅಸಲಿಗೆ 2ನೇ ಮಹಾಯುದ್ಧ ಕಾಲದ 75 ವರ್ಷದಷ್ಟು ಹಳೆಯ ಗ್ರೆನೇಡ್ ಜೋಡಿಯ ಅಡುಗೆ ಮನೆ ಹೊಕ್ಕಿದ್ದೇ ಒಂದು ಇಂಟರೆಸ್ಟಿಂಗ್ ಸಂಗತಿ. ಜೋಡಿ ಮತ್ತು ಆಕೆಯ ಮಗಳು ಇಸಾಬೆಲ್ಲಾ ಮನೆಯ ಸಮೀಪದ ಬೀಚ್​ನಲ್ಲಿ ಅಡ್ಡಾಡುತ್ತಿರುವಾಗ ವಸ್ತುವೊಂದು ಕಣ್ಣಿಗೆ ಬಿದ್ದಿದೆ. ಅತ್ಯಂತ ಹಳೆಯದಾಗಿದ್ದ ವಸ್ತುವನ್ನು ಮನೆಯಲ್ಲಿಟ್ಟರೆ ಚೆನ್ನ ಎಂದು ಜೋಡಿ ಅದನ್ನು ಎತ್ತಿಕೊಂಡು ಬಂದಿದ್ದಾಳೆ.

ಇದು ಯಾವುದೋ ಹಳೆಯ ವಸ್ತು ಅಥವಾ ಪ್ರಾಣಿಯ ಮೂಳೆ ಎಂದುಕೊಂಡ ಜೋಡಿ ಕ್ರೀಸ್ ಅದರ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಳು. ಈ ವಸ್ತು ಏನಿರಬಹುದು ಎಂದು ಸ್ನೇಹಿತರಲ್ಲಿ ಅಭಿಪ್ರಾಯ ಕೇಳಿದ್ದಳು. ಅದನ್ನು ನೋಡಿದವರೆಲ್ಲರೂ ಮನಸ್ಸಿಗೆ ತೋಚಿದಂತೆ ಒಂದೊಂದು ಉತ್ತರ ಕೊಟ್ಟಿದ್ದರು. ಅದು ತಿಮಿಂಗಿಲದ ವಾಂತಿ ಇರಬಹುದು ಎಂಬ ಉತ್ತರವೂ ಸಿಕ್ಕಿತ್ತು. ಆದರೆ, ಯಾರಿಗೂ ಅದು ಎರಡನೆಯ ಮಹಾಯುದ್ಧದ ಗ್ರೆನೇಡ್ ಎಂಬ ಅನುಮಾನ ಹುಟ್ಟಿರಲಿಲ್ಲ.

Wasn’t going to put this on here but it’s a warning as well as a WTF!! Last wkend I picked something off the beach,…

Posted by Jodie Crews on Friday, December 11, 2020

ಪ್ರಾಚೀನ ವಸ್ತು ಸಿಕ್ಕಿತೆಂಬ ಖುಷಿಯಲ್ಲಿ ಅದನ್ನು ಅಡುಗೆ ಕೋಣೆಯಲ್ಲಿಟ್ಟ ಜೋಡಿ ಕ್ರೀಸ್​ಗೆ ಆಘಾತವಾಗಿದ್ದು ಇಸಾಬೆಲ್ಲಾ ಕೂಗುತ್ತಾ ಓಡಿಹೋದಾಗ! ಇದ್ದಕ್ಕಿದ್ದಂತೆ ಅದರಿಂದ ಹೊಗೆಯಾಡಿದಾಗ ಇಸಾಬೆಲ್ಲಾ ಗಾಬರಿಯಿಂದ ಅಮ್ಮನನ್ನು ಕೂಗುತ್ತಾ ಹೊರಗೆ ಓಡಿದ್ದಾಳೆ. ಏನಾಯಿತೆಂದು ಜೋಡಿ ಬಂದು ನೋಡುವಷ್ಟರಲ್ಲಿ ವಸ್ತು ಸಿಡಿಯುವ ಹಂತದಲ್ಲಿತ್ತು.

ತಕ್ಷಣ ಎಚ್ಚೆತ್ತ ಜೋಡಿ ಒದ್ದೆ ಟವೆಲ್​ ಒಂದನ್ನು ವಸ್ತುವಿನ ಮೇಲೆ ಹಾಕಿ ಅನಾಹುತ ತಡೆಯಲು ಯತ್ನಿಸಿದ್ದಾಳೆ. ಅನಾಹುತದ ಸೂಚನೆ ಸಿಕ್ಕ ಕೂಡಲೇ ನೆರೆಹೊರೆಯವರು ಓಡಿ ಬಂದು ತುರ್ತು ಸೇವೆಗೆ ಕರೆ ಮಾಡಿದ್ದಾರೆ. ಒಂದೆಡೆ ಮಗಳ ಚಿಂತೆ ಹಾಗೂ ಇನ್ನೊಂದೆಡೆ ತಾನು ಸಾಕಿದ ಬೆಕ್ಕು, ನಾಯಿಗಳ ಚಿಂತೆಯಿಂದ ಜೋಡಿ ಕಂಗಾಲಾಗಿದ್ದಾಳೆ.

ಅದೃಷ್ಟವಶಾತ್ ಕೆಲಕಾಲ ಹೊಗೆಯಾಡಿದ ನಂತರ ಆದ ಸ್ಟೋಟದಿಂದ ಹೆಚ್ಚೇನೂ ಅನಾಹುತವಾಗಿಲ್ಲ. ಆದರೆ, ಅದು ಏನಿರಬಹುದೆಂದು ನಂತರ ತನಿಖೆ ನಡೆಸಿದಾಗ ಎರಡನೇ ಯುದ್ಧದ ಅವಧಿಯಲ್ಲಿ ಬಳಕೆಯಾಗಿದ್ದ ಗ್ರೆನೇಡ್ ಎಂದು ಗೊತ್ತಾಗಿದೆ. ಈ ‘ಸ್ಫೋಟಕ’ ವಿಷಯ ಗೊತ್ತಾದಾಗ ಬೆಚ್ಚಿಬಿದ್ದ ಜೋಡಿ ಇನ್ನು ಮುಂದೆ ಬೀಚ್​ನಲ್ಲಿ ಏನು ಸಿಕ್ಕರೂ ತರುವುದಿಲ್ಲವೆಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾಳೆ.

2ನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ವೃದ್ಧೆ ಕೊರೊನಾದಿಂದ ಗುಣಮುಖ