ಅಮೆರಿಕ- ಸೌದಿ ಸಂಬಂಧ ಮತ್ತೊಂದು ಮಗ್ಗುಲಿಗೆ; ಖಶೋಗ್ಗಿ ಹತ್ಯೆ ವಿಚಾರವನ್ನು ಮತ್ತೆ ಕೆದಕಿದ ದೊಡ್ಡಣ್ಣ
2018ರ ಅಕ್ಟೋಬರ್ನಲ್ಲಿ ಇಸ್ತಾಂಬುಲ್ನ ಸೌದಿ ಕಾನ್ಸುಲೇಟ್ನೊಳಗೆ ಖಶೋಗ್ಗಿ ಹತ್ಯೆ ನಡೆದಿತ್ತು. ನಂತರ ಸಿಐಎ ಮತ್ತು ಇತರ ಗುಪ್ತಚರ ಸಂಸ್ಥೆಗಳಿಂದ ಗುಪ್ತಚರ ವರದಿಯನ್ನು ಸಿದ್ಧಪಡಿಸಲಾಗಿದೆ. ಗುಪ್ತಚರ ಸಂಸ್ಥೆಗಳಿಂದ ಸಿದ್ಧವಾಗಿರುವ ವರದಿ ಬಹಿರಂಗವಾದ ಬಳಿಕವೇ ಖಶೋಗ್ಗಿ ಹತ್ಯೆಯಲ್ಲಿ ಪ್ರಿನ್ಸ್ ಮೊಹಮ್ಮದ್ ಪಾತ್ರದ ಬಗ್ಗೆ ಹೆಚ್ಚಿನ ವಿವರಗಳು ತಿಳಿಯಲಿದೆ.
ವಾಷಿಂಗ್ಟನ್: ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಅಂಕಣಕಾರ ಜಮಾಲ್ ಖಶೋಗ್ಗಿ ಅವರ ಹತ್ಯೆಗೆ ಅನುಮತಿ ನೀಡಿರುವ ವಿಚಾರದಲ್ಲಿ ಸೌದಿ ಅರೇಬಿಯಾದ ರಾಜಕುಮಾರ ಬಿನ್ ಸಲ್ಮಾನ್ ಪಾತ್ರವಿರುವ ಬಗ್ಗೆ ಅಮೆರಿಕಾ ಗುಪ್ತಚರ ವರದಿ ಇಂದು ಬಹಿರಂಗಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
2018ರ ಅಕ್ಟೋಬರ್ನಲ್ಲಿ ಇಸ್ತಾಂಬುಲ್ನ ಸೌದಿ ಕಾನ್ಸುಲೇಟ್ನೊಳಗೆ ಖಶೋಗ್ಗಿ ಹತ್ಯೆ ನಡೆದಿತ್ತು. ನಂತರ ಸಿಐಎ ಮತ್ತು ಇತರ ಗುಪ್ತಚರ ಸಂಸ್ಥೆಗಳಿಂದ ಗುಪ್ತಚರ ವರದಿಯನ್ನು ಸಿದ್ಧಪಡಿಸಲಾಗಿದೆ. ಗುಪ್ತಚರ ಸಂಸ್ಥೆಗಳಿಂದ ಸಿದ್ಧವಾಗಿರುವ ವರದಿ ಬಹಿರಂಗವಾದ ಬಳಿಕವೇ ಖಶೋಗ್ಗಿ ಹತ್ಯೆಯಲ್ಲಿ ಪ್ರಿನ್ಸ್ ಮೊಹಮ್ಮದ್ ಪಾತ್ರದ ಬಗ್ಗೆ ಹೆಚ್ಚಿನ ವಿವರಗಳು ತಿಳಿಯಲಿದೆ. ಈ ಬಗ್ಗೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ವ್ಯಕ್ತಿಯು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿಯಿಂದ ಸಂಗ್ರಹಿಸಲ್ಪಟ್ಟ ವರದಿಯನ್ನು ಬಿಡುಗಡೆ ಮಾಡುವ ನಿರ್ಧಾರವು, ಸೌದಿ ಅರೇಬಿಯಾದೊಂದಿಗಿನ ಸಂಬಂಧವನ್ನು ಮರುಸ್ಥಾಪಿಸುವ ಅಮೆರಿಕಾದ ಬೈಡೆನ್ ಆಡಳಿತದ ನಿರ್ಧಾರದ ಮೇಲೆ ಆಧರಿಸಿದೆ ಎನ್ನಲಾಗುತ್ತಿದೆ.
ವರದಿಯ ಪ್ರಕಟಣೆಗೂ ಮುನ್ನವೇ, ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಸೌದಿ ಅರೇಬಿಯಾದ ರಾಜ ಸಲ್ಮಾನ್ ಅವರೊಂದಿಗೆ ಗುರುವಾರ (ಫೆ.25) ದೂರವಾಣಿ ಕರೆ ಮೂಲಕ ಮಾತನಾಡಿದ್ದಾರೆ. ಬೈಡೆನ್ ಪ್ರಾದೇಶಿಕ ಭದ್ರತೆ ಹಾಗೂ ಯೆಮನ್ನಲ್ಲಿನ ಆಂತರಿಕ ಯುದ್ಧವನ್ನು ಕೊನೆಗೊಳಿಸುವ ಕುರಿತು ಒಲವು ತೋರಿದ್ದಾರೆ. ಈ ವಿಚಾರದಲ್ಲಿ ಅಮೆರಿಕ ಮತ್ತು ವಿಶ್ವಸಂಸ್ಥೆಯ ಹೊಸ ಪ್ರಯತ್ನಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಜಾಗತಿಕ ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮಗಳ ಮೇಲೆ ಅಮೆರಿಕಾ ಮಹತ್ವವನನ್ನು ದೃಢೀಕರಿಸಿದೆ ಎಂದು ಶ್ವೇತಭವನ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಅಮೆರಿಕಾ, ಬ್ರಿಟನ್ ಲಸಿಕೆ ಮೇಲೆ ನಮಗೆ ನಂಬಿಕೆಯಿಲ್ಲ.. ಆ ಲಸಿಕೆ ಬೇಡ: ಸೆಡ್ಡು ಹೊಡೆದ ಇರಾನ್
ಸೌದಿ ಅರೇಬಿಯಾದ ಹಳೇ ಸಾಲ ತೀರಿಸಲು ಚೀನಾದಿಂದ ದೊಡ್ಡ ಮೊತ್ತದ ಹೊಸ ಸಾಲ ಪಡೆದ ಪಾಕಿಸ್ತಾನ
Published On - 8:19 pm, Fri, 26 February 21