10 ಸೆಕೆಂಡ್​ಗಳ ವಿಡಿಯೊ ಬರೋಬ್ಬರಿ 48.4 ಕೋಟಿಗೆ ಮಾರಾಟ: ಏನಿದರ ವೈಶಿಷ್ಟ್ಯ

ವಿಡಿಯೊದಲ್ಲಿ ಅಮೆರಿಕಾದ ಮಾಜಿ ಪ್ರಧಾನಿ ಡೊನಾಲ್ಡ್ ಟ್ರಂಪ್ ನೆಲದಲ್ಲಿ ಮಲಗಿಕೊಂಡಿರುವುದು ಹಾಗೂ ಅವರ ದೇಹದ ತುಂಬೆಲ್ಲಾ ಘೋಷಣೆಗಳು ತುಂಬಿಕೊಂಡಿರುವುದನ್ನು ಚಿತ್ರಿಸಲಾಗಿದೆ.

10 ಸೆಕೆಂಡ್​ಗಳ ವಿಡಿಯೊ ಬರೋಬ್ಬರಿ 48.4 ಕೋಟಿಗೆ ಮಾರಾಟ: ಏನಿದರ ವೈಶಿಷ್ಟ್ಯ
ಡಿಜಿಟಲ್ ಆರ್ಟ್
Follow us
TV9 Web
| Updated By: ganapathi bhat

Updated on:Apr 06, 2022 | 7:30 PM

ತಂತ್ರಜ್ಞಾನ ಮತ್ತು ಡಿಜಿಟಲ್ ಕ್ರಾಂತಿಯಿಂದ ಏನು ಬೇಕಾದರೂ ಮಾಡಬಹುದು ಎಂದು ಮತ್ತೊಮ್ಮೆ ಸಾಬೀತಾಗಿದೆ. ಹತ್ತು ಸೆಕೆಂಡ್​ಗಳ ವಿಡಿಯೊ ಕ್ಲಿಪ್ ಒಂದು ಲಂಡನ್​ನಲ್ಲಿ ಬರೋಬ್ಬರಿ 48.4 ಕೋಟಿ ರೂಪಾಯಿಗೆ (6.6 ಮಿಲಿಯನ್ ಡಾಲರ್) ಮಾರಾಟವಾಗಿದೆ. ಮೂಲಗಳ ವರದಿಯ ಪ್ರಕಾರ, ಬೀಪಲ್ ಎಂಬ ಅಮೆರಿಕ ಮೂಲದ ಡಿಜಿಟಲ್ ಕಲಾವಿದ ತಯಾರಿಸಿದ ಈ ವಿಡಿಯೊವನ್ನು ಮಿಯಾಮಿ ಮೂಲದ ವ್ಯಕ್ತಿ, ರಾಡ್ರಿಗಸ್ ಪ್ರೈಲ್ ಎಂಬಾತ ಸುಮಾರು ₹ 48.23 ಲಕ್ಷ ವ್ಯಯಿಸಿ ನಿರ್ಮಾಣ ಮಾಡಿದ್ದ. ಕಳೆದ ವಾರ ಇದೇ ವಿಡಿಯೊ ಬಂಡವಾಳದ ನೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದೆ.

ವಿಡಿಯೊ ಅಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದ್ದೇಕೆ? ಈ ವಿಡಿಯೊ ಹೊಸ ರೀತಿಯ ಡಿಜಿಟಲ್ ವಿಡಿಯೊ ಆಗಿದೆ. Non-fungible token (NFT) ಎಂಬ ಹೊಸ ವಿಧಾನದ ಈ ವಿಡಿಯೊವನ್ನು ಬ್ಲಾಕ್ ಚೈನ್ ಮೂಲಕ ತಯಾರಿಸಲಾಗಿದೆ. ವಿಡಿಯೊದಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೆಲದಲ್ಲಿ ಮಲಗಿಕೊಂಡಿರುವುದು ಹಾಗೂ ಅವರ ದೇಹದ ಮೇಲೆಲ್ಲಾ ಘೋಷಣೆಗಳು ತುಂಬಿಕೊಂಡಿರುವುದನ್ನು ಚಿತ್ರಿಸಲಾಗಿದೆ. ಜನರು ಅದನ್ನು ನೋಡುತ್ತಾ ಬೀದಿಯಲ್ಲಿ ನಡೆದು ಹೋಗುತ್ತಿರುತ್ತಾರೆ.

ವಿಡಿಯೊ ಹಂಚಿಕೊಂಡಿರುವ ರಾಯಿಟರ್ಸ್​, ಆನ್​ಲೈನ್​ನಲ್ಲಿ ಮಾತ್ರ ಇರುವ ವಸ್ತುಗಳಿಗೂ ಜನರು ಇಷ್ಟೊಂದು ಬೆಲೆ ತೆರುತ್ತಿದ್ದಾರೆ ಎಂದು ಬರೆದುಕೊಂಡಿದೆ. ನಾನ್ ಫಂಜಿಬಲ್ (Non-fungible) ಎಂದರೆ ಬದಲಾಯಿಸಿಕೊಳ್ಳಲಾಗದ ವಸ್ತುಗಳು. ಅವು ಪ್ರತಿಯೊಂದಕ್ಕೂ ವಿಭಿನ್ನ ಸ್ಥಾನವಿರುತ್ತದೆ. Non-fungible ಎಂದರೆ Fungible ಗೆ ವಿರುದ್ಧವಾದದ್ದಾಗಿದೆ. Fungible ಆಸ್ತಿಗಳಾದ ಹಣ, ಚಿನ್ನದಂತೆ Non-fungible ಆಸ್ತಿಗಳನ್ನು ಬದಲಿಸಿಕೊಳ್ಳಲಾಗುವುದಿಲ್ಲ.

ಅಂದರೆ, ನಾವು ಲಿಯೊನಾರ್ಡೊ ಡಾ ವಿನ್ಚಿ ಬರೆದ ಮೊನಾಲಿಸಾಳ ಚಿತ್ರ ಇರುವ ಕಡೆಗೆ ಹೋಗಿ ಅದರ ಫೊಟೊ ತೆಗೆದುಕೊಂಡು ಬರಬಹುದು. ಆದರೆ, ನಾವು ತೆಗೆದು ತಂದ ಚಿತ್ರಕ್ಕೆ ಮೂಲ ಚಿತ್ರದಷ್ಟು ಬೆಲೆ ಇರುವುದಿಲ್ಲ. ಆ ಚಿತ್ರದ ಇತಿಹಾಸವೂ ನಾವು ತೆಗೆದ ಭಾವಚಿತ್ರದಲ್ಲಿ ಇರುವುದಿಲ್ಲ. ಅಂತೆಯೇ, ಈ 10 ಸೆಕೆಂಡ್​ಗಳ ವಿಡಿಯೊ ಎಂದು ರಾಡ್ರಿಗಸ್ ಪ್ರೈಲ್ ಹೇಳಿದ್ದಾರೆ.

ರಾಯ್ಟರ್ಸ್ ಸುದ್ದಿ ಸಂಸ್ಥೆ ವಿಡಿಯೊವನ್ನು ಹಂಚಿಕೊಂಡಿದೆ

ಇದನ್ನೂ ಓದಿ: ಅಮೆರಿಕದ ಇತಿಹಾಸದಲ್ಲೇ 2 ಬಾರಿ ಮಹಾಭಿಯೋಗಕ್ಕೆ ಗುರಿಯಾದ ಡೊನಾಲ್ಡ್​ ಟ್ರಂಪ್

ಟ್ರಂಪ್ ಬೆಂಬಲಿಗರ ಗಲಾಟೆ: ಟ್ವಿಟರ್ ಸಿಇಒ ವಿರುದ್ಧ ಹರಿಹಾಯ್ದ ಕಂಗನಾ ರನೌತ್

Published On - 8:21 pm, Tue, 2 March 21

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ