ಅಮೆರಿಕದ ಇತಿಹಾಸದಲ್ಲೇ 2 ಬಾರಿ ಮಹಾಭಿಯೋಗಕ್ಕೆ ಗುರಿಯಾದ ಡೊನಾಲ್ಡ್ ಟ್ರಂಪ್
ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಹಾಭಿಯೋಗ ಹೊರಡಿಸಲಾಗಿದೆ. ಇದರಿಂದ ಅಮೆರಿಕದ ಇತಿಹಾಸದಲ್ಲಿ 2 ಬಾರಿ ಮಹಾಭಿಯೋಗಕ್ಕೆ ಡೊನಾಲ್ಡ್ ಟ್ರಂಪ್ ಗುರಿಯಾಗಿದ್ದಾರೆ.
ಅಮೆರಿಕದ ಕ್ಯಾಪಿಟಲ್ ಬಿಲ್ಡಿಂಗ್‌ನಲ್ಲಿ ಘರ್ಷಣೆ ಮತ್ತು ಹಿಂಸಾಚಾರಕ್ಕೆ ತನ್ನ ಬೆಂಬಲಿಗರನ್ನು ಪ್ರಚೋದನೆ ಮಾಡಿದ ಹಿನ್ನೆಲೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಮೂವರು ಸಂಸದರು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣಾ (ಮಹಾಭಿಯೋಗ) ಕರಡನ್ನು ಸಂಸತ್ನಲ್ಲಿ ಮಂಗಳವಾರ ಪರಿಚಯಿಸಿದ್ದರು.
ಅಮೆರಿಕದ ಕಾಂಗ್ರೆಸ್ನ ಡೆಮಾಕ್ರಟಿಕ್ ಪಕ್ಷದ ಜೇಮೀ ರಾಸ್ಕಿನ್, ಡೇವಿಡ್ ಸಿಸಿಲಿನ್ ಮತ್ತು ಟೆಡ್ ಲಿಯು ಮಹಾಭಿಯೋಗ ರಚಿಸಿದ್ದು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ 211 ಸದಸ್ಯರು ಕರಡುವಿಗೆ ಬೆಂಬಲ ನೀಡಿದ್ದರು. ಅಮೆರಿಕದ ಇತಿಹಾಸದಲ್ಲೇ 2 ಬಾರಿ ಮಹಾಭಿಯೋಗಕ್ಕೆ ಡೊನಾಲ್ಡ್ ಟ್ರಂಪ್ ಗುರಿಯಾಗಿದ್ದಾರೆ.
ಯಾರೂ ಕಾನೂನಿನ ಮೇಲಲ್ಲ, ಯುನೈಟೆಡ್ ಸ್ಟೇಟ್ಸ್ನ ಅಧ್ಯಕ್ಷರೂ ಅಲ್ಲ ಎಂಬುವುದನ್ನು ಸದನವು ತಿಳಿಸಿಕೊಟ್ಟಿದೆ ಎಂದು ಡೆಮಾಕ್ರಟಿಕ್ ಪಕ್ಷದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ರು.
ಕ್ಯಾಪಿಟಲ್ ಬಿಲ್ಡಿಂಗ್ ಘರ್ಷಣೆ: ಟ್ರಂಪ್ ಟ್ವಿಟ್ಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆಗಳು ಬಂದ್
Published On - 7:53 am, Thu, 14 January 21