AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಶಂಕಿತ ಅಭ್ಯರ್ಥಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್

ಅಶ್ಲೀಲ ಸಿಡಿ ಪ್ರಕರಣದ ಶಂಕಿತ ಆರೋಪಿಗಳು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಸಿಟಿ ಸಿವಿಲ್ ಕೋರ್ಟ್​ ಜೂನ್ 2ಕ್ಕೆ ಮುಂದೂಡಿದೆ. ಈ ಸಂಬಂಧ ಸಿಟಿ ಸಿವಿಲ್ ಕೋರ್ಟ್​ನ 91ನೇ ಕೋರ್ಟ್​ ಆದೇಶ ನೀಡಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಶಂಕಿತ ಅಭ್ಯರ್ಥಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್
ಪ್ರಾತಿನಿಧಿಕ ಚಿತ್ರ
Ghanashyam D M | ಡಿ.ಎಂ.ಘನಶ್ಯಾಮ
|

Updated on: May 31, 2021 | 2:48 PM

Share

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಭಾಗಿಯಾಗಿರುವ ಅಶ್ಲೀಲ ಸಿಡಿ ಪ್ರಕರಣದ ಶಂಕಿತ ಆರೋಪಿಗಳು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಸಿಟಿ ಸಿವಿಲ್ ಕೋರ್ಟ್​ ಜೂನ್ 2ಕ್ಕೆ ಮುಂದೂಡಿದೆ. ಈ ಸಂಬಂಧ ಸಿಟಿ ಸಿವಿಲ್ ಕೋರ್ಟ್​ನ 91ನೇ ಕೋರ್ಟ್​ ಆದೇಶ ನೀಡಿದೆ. ಬ್ಲಾಕ್​ಮೇಲ್ ಸಂಬಂಧ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆರೋಪಿಗಳಾದ ನರೇಶ್​ ಗೌಡ ಮತ್ತು ಶ್ರವಣ್ ಈ ಸಂಬಂಧ​ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಿಟಿ ಸಿವಿಲ್ ಕೋರ್ಟ್​ನ ಮೇ 24ರಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಸದಾಶಿವನಗರ ಠಾಣೆ ಪೊಲೀಸರಿಗೆ ನೊಟೀಸ್ ನೀಡಿದ್ದ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮೇ 29ರಂದು ನಡೆಸುವುದಾಗಿ ಹೇಳಿತ್ತು. ಸಿಡಿ ಪ್ರಕರಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ಎಸಗಲಾಗಿದೆ ಎಂದು ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಆಪಾದಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳಾದ ನರೇಶ್ ಮತ್ತು ಶ್ರವಣ್‌ ಅವರುಗಳು ತಲೆಮರಿಸಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿ ಇವರಿಬ್ಬರಿಗಾಗಿ ಹುಡುಕಾಟ ನಡೆಸುತ್ತಿತ್ತು.

ಆರೋಪಿಗಳಾದ ನರೇಶ್, ಶ್ರವಣ್​ಗೆ ಜಾಮೀನು ನೀಡಬಾರದು ಎಂದು ಎಸ್​ಐಟಿ ಹೈಕೋರ್ಟ್​ಗೆ ಮನವಿ ಸಲ್ಲಿಸಿತ್ತು. ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನಲ್ಲಿ ಆರೋಪಿಗಳಾದ ನರೇಶ್ ಮತ್ತು ಶ್ರವಣ್ ಪಾತ್ರದ ಬಗ್ಗೆ ಹಲವು ಅನುಮಾನಗಳಿವೆ. ಇವರು ಹನಿಟ್ರ್ಯಾಪ್ ಸಂಚಿನ ಭಾಗವಾಗಿರುವ ಬಗ್ಗೆ ಹಲವು ದಾಖಲೆಗಳು ಸಿಕ್ಕಿವೆ. ಸಿಸಿಟಿವಿ ದೃಶ್ಯಗಳು ಹಾಗೂ ದಾಖಲಾತಿಗಳ ಸಹಿತ ಎಸ್​ಐಟಿ ಕೋರ್ಟ್​ಗೆ ಮನವಿ ಸಲ್ಲಿಸಿದೆ.

ಎಸ್​ಪಿ ರೋಡಿನಲ್ಲಿ ದುಬಾರಿ ಕ್ಯಾಮರಾ ಖರೀದಿ ಪೊಲೀಸರ ಕೈಗೆ ಸಿಗದೆ, ಈವರೆಗೂ ಎಲ್ಲೆಲ್ಲಿ ತಿರುಗಿದ್ದಾರೆ ಎಂಬ ಮಾಹಿತಿಯನ್ನೂ ಪೊಲೀಸರು ನ್ಯಾಯಾಲಯಕ್ಕೆ ನೀಡಿದ್ದಾರೆ.

(Court Postpones hearing of anticipatory bail plea of suspects in Ramesh Jarkiholi CD Case)

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನಲ್ಲಿ ಆರೋಪಿಗಳಾದ ನರೇಶ್, ಶ್ರವಣ್ ಗೆ ಬೇಲ್ ನೀಡದಂತೆ ಎಸ್​ಐಟಿಯಿಂದ ಮನವಿ

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್​ಐಟಿ ತನಿಖೆ ಮುಂದುವರಿಕೆಗೆ ಹೈಕೋರ್ಟ್​ ಗ್ರೀನ್​ ಸಿಗ್ನಲ್​