ಮಂಗಳೂರು: ಐಸ್ಕ್ರೀಮ್ನೊಂದಿಗೆ ಕದ್ದ ಚಿನ್ನ ನುಂಗಿದ್ದ ಕಳ್ಳ; ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆದ ವೈದ್ಯರು
ಸುಳ್ಯದ ಮೋಹನ ಜ್ಯುವೆಲರಿಯಲ್ಲಿ ಕಳ್ಳರು ಚಿನ್ನವನ್ನು ಕದ್ದಿದ್ದರು. 180 ಗ್ರಾಂ ಚಿನ್ನ ಮತ್ತು 50,000 ರೂ. ನಗದು ದೋಚಿದ್ದರು. ಈ ಪ್ರಕರಣ ಸಂಬಂಧ ಮ್ಯಾಥ್ಯೂ ಮತ್ತು ಶಿಬು ಎಂಬುವವರನ್ನು ಸುಳ್ಯ ಪೊಲೀಸರು ಬಂಧಿಸಿದ್ದರು. ಪೊಲೀಸರು ಪ್ರಾರಂಭದಲ್ಲಿ 147 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದರು.
ಮಂಗಳೂರು: ಕಳ್ಳರು ಕದ್ದ ವಸ್ತುಗಳನ್ನು ಎತ್ತುಕೊಂಡು ಆ ಜಾಗದಿಂದ ಕಾಲು ಕೀಳುತ್ತಾರೆ. ಯಾರ ಕೈಗೂ ಸಿಗಬಾರದು ಅಂತ ಪರಾರಿಯಾಗುತ್ತಾರೆ. ಆದರೆ ಒಬ್ಬ ಕಳ್ಳ ಕದ್ದಿರುವ ಚಿನ್ನವನ್ನು ನುಂಗಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಈ ಘಟನೆ ಸಂಭವಿಸಿದೆ. ಕೇರಳದ ತ್ರಿಶೂರ್ನ ಕಳ್ಳ ಶಿಬು ಎಂಬಾತ ಕದ್ದ ಚಿನ್ನವನ್ನು ನುಂಗಿದ್ದಾನೆ. ನುಂಗಿದ್ದ ಸುಮಾರು 35 ಗ್ರಾಂ ಚಿನ್ನವನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆದಿದ್ದಾರೆ.
ಸುಳ್ಯದ ಮೋಹನ ಜ್ಯುವೆಲರಿಯಲ್ಲಿ ಕಳ್ಳರು ಚಿನ್ನವನ್ನು ಕದ್ದಿದ್ದರು. 180 ಗ್ರಾಂ ಚಿನ್ನ ಮತ್ತು 50,000 ರೂ. ನಗದು ದೋಚಿದ್ದರು. ಈ ಪ್ರಕರಣ ಸಂಬಂಧ ಮ್ಯಾಥ್ಯೂ ಮತ್ತು ಶಿಬು ಎಂಬುವವರನ್ನು ಸುಳ್ಯ ಪೊಲೀಸರು ಬಂಧಿಸಿದ್ದರು. ಪೊಲೀಸರು ಪ್ರಾರಂಭದಲ್ಲಿ 147 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದರು. ಬಂಧನದ ಬಳಿಕ ಶಿಬು ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಶಿಬುನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ವಿಪರೀತ ಹೊಟ್ಟೆ ನೋವನ್ನು ಅನುಭವಿಸುತ್ತಿದ್ದ ಶಿಬುನನ್ನು ಆಸ್ಪತ್ರೆಗೆ ದಾಖಲು ಮಾಡಿದ ಬಳಿಕ ಏಕ್ಸ್ ರೇ ಮಾಡಿದರು. ಏಕ್ಸ್ ರೇ ಮಾಡಿದ ಸಂದರ್ಭ ಹೊಟ್ಟೆಯಲ್ಲಿ ಆಭರಣ ಇರುವುದು ತಿಳಿದುಬಂದಿದೆ. ಬಂಧನದ ಸಂದರ್ಭ ಪೊಲೀಸರಿಂದ ಮರೆಮಾಚುವುದಕ್ಕೆ ಕಳ್ಳ ಚಿನ್ನ ನುಂಗಿದ್ದ. 25 ಕ್ಕೂ ಹೆಚ್ಚು ಉಂಗುರ ನುಂಗಿದ್ದ ಕಳ್ಳನ ಹೊಟ್ಟೆಯಿಂದ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.
ಇದನ್ನೂ ಓದಿ
ಇಡೀ ದಿನ ಮನೆಯಲ್ಲಿಯೇ ಕುಳಿತು ಕೆಲಸ ಮಾಡುತ್ತಿದ್ದೀರಾ? ನಿಮಗಾಗಿ ಈ 3 ಕಿವಿಮಾತು
ಕೊಡಗಿನಲ್ಲಿ ಪ್ರವಾಹದಿಂದ ಸೂರು ಕಳೆದುಕೊಂಡವರಿಗಾಗಿ ಮನೆ ನಿರ್ಮಿಸುತ್ತಿದೆ ಇನ್ಫೋಸಿಸ್ ಫೌಂಡೇಶನ್
(thief swallowed gold that was stolen with ice cream and Doctors have extracted gold by performing surgery)
Published On - 2:45 pm, Mon, 31 May 21