ಇಡೀ ದಿನ ಮನೆಯಲ್ಲಿಯೇ ಕುಳಿತು ಕೆಲಸ ಮಾಡುತ್ತಿದ್ದೀರಾ? ನಿಮಗಾಗಿ ಈ 3 ಕಿವಿಮಾತು

ಗಂಟೆಗಟ್ಟಲೆ ಲ್ಯಾಪ್​ಟಾಟ್​ನ್ನು ದಿಟ್ಟಿಸಿ ನೋಡುತ್ತಿರುತ್ತೀರಿ, ಹಾಗೆಯೇ ದೇಹವನ್ನು ಅಲ್ಲಾಡಿಸದೇ ಕೈಕಾಲುಗಳೆಲ್ಲ ಹಿಡಿದಂತೆ ಭಾಸವಾಗುತ್ತದೆ. ಹೀಗಿರುವಾಗ ಕುರ್ಚಿಯ ಮೇಲೆ ಕುಳಿತಲ್ಲಿಯೇ ಸರಳ ವಿಧಾನದ ವ್ಯಾಯಾಮವನ್ನು ಕಲಿಯಿರಿ. ಇದರಿಂದ ಆರೋಗ್ಯ ಸುಧಾರಿಸುವರ ಜತೆಗೆ ಮನಸ್ಸಿನ ಕಿರಿ-ಕಿರಿಯನ್ನು ದೂರಮಾಡಿಕೊಳ್ಳಬಹುದು. 

ಇಡೀ ದಿನ ಮನೆಯಲ್ಲಿಯೇ ಕುಳಿತು ಕೆಲಸ ಮಾಡುತ್ತಿದ್ದೀರಾ? ನಿಮಗಾಗಿ ಈ 3 ಕಿವಿಮಾತು
ಸಾಂದರ್ಭಿಕ ಚಿತ್ರ
Follow us
shruti hegde
|

Updated on:Jun 01, 2021 | 7:25 AM

ಕೊರೊನಾ ಸೋಂಕಿನ ಹರಡುವಿಕೆ ನಮ್ಮನ್ನು ಮನೆಯಲ್ಲೆ ಇರುವಂತೆ ಮಾಡಿದೆ. ಇಡೀ ದಿನ ಲ್ಯಾಪ್​ಟಾಪ್​​​ ಅಥವಾ ಕಂಪ್ಯೂಟರ್​ ಮುಂದೆ ಕುಳಿತು ಕೆಲಸ ಮಾಡಬೇಕು. ಕುತ್ತಿಗೆ, ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆ. ಕೈಕಾಲುಗಳು ಹಿಡಿದುಕೊಳ್ಳುತ್ತಿವೆ. ಹೀಗಿರುವಾಗ ಕೆಲಸದ ವಿರಾಮದ ಸಮಯದಲ್ಲಿ ನೀವು ಮಾಡಬಹುದಾದ 3 ರೀತಿಯ ವ್ಯಾಯಾಮವನ್ನು ಫಿಟ್​ನೆಸ್​ ತಜ್ಞೆ ರುಜುತಾ ದಿವಾಕರ್​ ಹೇಳಿದ್ದಾರೆ.

ದಿನ ಬೆಳಿಗ್ಗೆ ಎದ್ದಾಗಿನಿಂದ ಲ್ಯಾಪ್​ಟಾಪ್​ ಮುಂದೆ ಕೂತು ಸೋತಿರುತ್ತೀರಿ. ಚಿಕ್ಕ ವಯಸ್ಸಿನಲ್ಲಿಯೇ ಬೆನ್ನು ನೋವು, ಕೈಕಾಲುಗಳ ನೋವು ಶುರುವಾಗಿರುತ್ತದೆ. ಸತತವಾಗಿ ಅದೆಷ್ಟೋ ಗಂಟೆಗಳ ಕಾಲ ಕೂತು ಕೆಲಸ ಮಾಡುವುದರಿಂದ ದೇಹಕ್ಕೆ ಸುಸ್ತು ಎನಿಸುತ್ತದೆ. ಹಾಗಿದ್ದಾಗ ಸರಳ ವಿಧಾನದ ವ್ಯಾಯಾಮವನ್ನು ಕಲಿಯಿರಿ. ಮನಸ್ಸಿನ ಖುಷಿಯ ಜತೆಗೆ ಚೈತನ್ಯದಿಂದ ಕೆಲಸ ಮಾಡಬಹುದು.

ಗಂಟೆಗಟ್ಟಲೆ ಲ್ಯಾಪ್​ಟಾಟ್​ನ್ನು ದಿಟ್ಟಿಸಿ ನೋಡುತ್ತಿರುತ್ತೀರಿ, ಹಾಗೆಯೇ ದೇಹವನ್ನು ಅಲ್ಲಾಡಿಸದೇ ಕೈಕಾಲುಗಳೆಲ್ಲ ಹಿಡಿದಂತೆ ಭಾಸವಾಗುತ್ತದೆ. ಹೀಗಿರುವಾಗ ಕುರ್ಚಿಯ ಮೇಲೆ ಕುಳಿತಲ್ಲಿಯೇ ಸರಳ ವಿಧಾನದ ವ್ಯಾಯಾಮವನ್ನು ಕಲಿಯಿರಿ. ಇದರಿಂದ ಆರೋಗ್ಯ ಸುಧಾರಿಸುವರ ಜತೆಗೆ ಮನಸ್ಸಿನ ಕಿರಿ-ಕಿರಿಯನ್ನು ದೂರಮಾಡಿಕೊಳ್ಳಬಹುದು.

ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡ ರುಜುತಾ ಸರಳ ವಿಧಾನದ ವ್ಯಾಯಾಮವನ್ನು ಹೇಳಿಕೊಟ್ಟಿದ್ದಾರೆ.

* ಕುರ್ಚಿಯ ಮುಂದಿರುವ ಲ್ಯಾಪ್​ಟಾಪನ್ನು ಚೂರು ಮುಂದಕ್ಕೆ ಸರಿಸಿ. ಕುರ್ಚಿಯ ಮೇಲೆ ಕುಳಿತಿದ್ದಾಗಲೇ ದೃಷ್ಟಿ ನೇರವಾಗಿರಲಿ. ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಮತ್ತು ನೇರವಾಗಿರಲಿ. ಕಾಲುಗಳನ್ನು ಅಗಲ ಮಾಡಿ ಮುಂದಕ್ಕೆ ಬಾಗಿ, ಕೈಗಳು ಸಹ ಬಾಗಲಿ. ಮುಖ ಮಾತ್ರ ನೇರವಾಗಿರಲಿ. ಬಾಗಿದ ಕೈಗಳು ನೇರವಾಗಿರಲಿ.

*  ಹೊಟ್ಟೆಯ ಭಾಗವನ್ನು ಚೂರು ಮುಂದಕ್ಕೆ ತಳ್ಳಿ. ಕೈಗಳು ನೇರವಾಗಿರಲಿ. ಇದೇ ರೀತಿ ನಿಮ್ಮ ಕೈಲಾದಷ್ಟು ಸಮಯ ಈ ಆಸನದಲ್ಲಿಯೇ ಕುಳಿತಿರಿ. ನಂತರ ನಿಧಾನವಾಗಿ ಮೇಲಕ್ಕೆ ಎದ್ದೇಳಬಹುದು.

* ಕೈಗಳಿಂದ ಬೆನ್ನಿನ ಹಿಂದಿರುವ ಕುರ್ಚಿಯ ಕೈಗಳನ್ನು ಹಿಡಿಯಿರಿ. ಆದಷ್ಟು ಮುಂದಕ್ಕೆ ಬಾಗಲು ಪ್ರಯತ್ನಿಸಿ. ಖುರ್ಚಿಯ ಮೇಲೆ ಕುಳಿತು ಕಾಲುಗಳನ್ನು ಅಗಲಿಸಿ. ತೊಡೆಯ ಭಾಗ ನೇರವಾಗಿರಬೇಕು. ಭುಜವೂ ನೆರವಾಗಿರಬೇಕು. ಎರಡೂ ಕೈಗಳಿಂದ ಖುರ್ಚಿಯ ಕೈಗಳನ್ನು ಹಿಡಿದು, ಭುಜವನ್ನು ನೇರವಾಗಿ ಮಾಡಿ. ಆ ಬಳಿಕ ಕೈಗಳಿಗೆ ವ್ಯಾಯಾಮ ನೀಡಿ.

ಇದನ್ನೂ ಓದಿ: 

ಕೊರೊನಾ ರೋಗಿಗಳು ಉಸಿರಾಟದ ವ್ಯಾಯಾಮ ಮಾಡುವುದು ಹೇಗೆ?..ಇಲ್ಲಿದೆ ನೋಡಿ ಕೇಂದ್ರ ಸರ್ಕಾರ ಸೂಚಿಸಿದ ಕ್ರಮಗಳು

ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡಿ..ಆದರೆ ಈ ಮೂರು ಮಿಥ್ಯೆಗಳನ್ನು ನಂಬಬೇಡಿ

Published On - 12:50 pm, Mon, 31 May 21