ಉದ್ಯೋಗ ಖಾತ್ರಿ ಯೋಜನೆಯಿಂದ ವಂಚಿತರಾದ ಆಶ್ರಯ ಮನೆಯ ಜನ; ಕೆಲಸವಿಲ್ಲದೆ ಗ್ರಾಮಸ್ಥರ ಪರದಾಟ

ಬೀದರ್ ನಗರದ ಹೊರವಲಯದಲ್ಲಿರುವ ಗೊರನಳ್ಳಿ ಆಶ್ರಯ ಮನೆಯಲ್ಲಿ ವಾಸ ಮಾಡುವ ಇನ್ನೂರಕ್ಕೂ ಅಧಿಕ ಕುಟುಂಬಗಳು ಕೆಲಸವಿಲ್ಲದೆ ಕಳೆದೆರಡು ತಿಂಗಳಿಂದ ಮನೆಯಲ್ಲಿಯೇ ಇರಬೇಕಾಗಿದೆ. ಇವರು ವಾಸ ಮಾಡುವ ಪ್ರದೇಶ ಬೀದರ್ ನಗರ ಸಭೆಯ ವ್ಯಾಪ್ತಿಗೆ ಬರುವುದರಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಕೆಲಸ ಇವರಿಗೆ ಕೊಡುವುದಕ್ಕೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಿಂದ ವಂಚಿತರಾದ ಆಶ್ರಯ ಮನೆಯ ಜನ; ಕೆಲಸವಿಲ್ಲದೆ ಗ್ರಾಮಸ್ಥರ ಪರದಾಟ
ಉದ್ಯೋಗ ಖಾತ್ರಿ ಯೋಜನೆಯಿಂದ ವಂಚಿತರಾದ ಆಶ್ರಯ ಮನೆಯ ಜನ
Follow us
preethi shettigar
|

Updated on:May 31, 2021 | 2:00 PM

ಬೀದರ್: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಆದರೆ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಇನ್ನಿತರ ದಿನಗೂಲಿಕಾರರು ನಿತ್ಯ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿ ಸಾವಿರಾರು ಜನರಿಗೆ ಕೆಲಸ ಕೊಟ್ಟಿದೆ. ಆದರೆ ಬೀದರ್ ಜಿಲ್ಲೆಯ ಆಶ್ರಯ ಮನೆಯಲ್ಲಿ ವಾಸ ಮಾಡುವ ನೂರಾರು ಕುಟುಂಬಗಳು ಈ ಯೋಜನೆಯಿಂದ ದೂರ ಉಳಿದಿದ್ದು, ಕೆಲಸ ವಿಲ್ಲದೇ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೀದರ್ ನಗರದ ಹೊರವಲಯದಲ್ಲಿರುವ ಗೊರನಳ್ಳಿ ಆಶ್ರಯ ಮನೆಯಲ್ಲಿ ವಾಸ ಮಾಡುವ ಇನ್ನೂರಕ್ಕೂ ಅಧಿಕ ಕುಟುಂಬಗಳು ಕೆಲಸವಿಲ್ಲದೆ ಕಳೆದೆರಡು ತಿಂಗಳಿಂದ ಮನೆಯಲ್ಲಿಯೇ ಇರಬೇಕಾಗಿದೆ. ಇವರು ವಾಸ ಮಾಡುವ ಪ್ರದೇಶ ಬೀದರ್ ನಗರ ಸಭೆಯ ವ್ಯಾಪ್ತಿಗೆ ಬರುವುದರಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಕೆಲಸ ಇವರಿಗೆ ಕೊಡುವುದಕ್ಕೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ. ಹೀಗಾಗಿ ಕೆಲಸ ವಿಲ್ಲದೇ ಮನೆಯಲ್ಲಿಯೇ ಇರಬೇಕಾದ ಸ್ಥಿತಿ ಇಲ್ಲಿನ ವಾಸಿಗರಿಗೆ ಎದುರಾಗಿದ್ದು ಬದುಕು ನಡೆಸುವುದು ಇವರಿಗೆ ಸವಾಲಾಗಿ ಪರಿಣಮಿಸಿದೆ.

ಇಲ್ಲಿ ವಾಸಿಸುವ ಎಲ್ಲರೂ ಅವತ್ತಿನ ದುಡಿಮೆಯಲ್ಲಿಯೇ ಬದುಕು ಸಾಗಿಸುತ್ತಿದ್ದವರು. ಆದರೇ ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದೆ ಮನೆಯಲ್ಲಿಯೇ ಇರಬೇಕಾಗಿದೆ. ಮನೆಯಲ್ಲಿ ಚಿಕ್ಕಚಿಕ್ಕ ಮಕ್ಕಳಿದ್ದಾರೆ, ವಿಕಲಚೇತನರಿದ್ದಾರೆ ನಾವು ದುಡಿಯಲಿಕ್ಕೆ ಶಕ್ತಿಯಿದ್ದರು ನಮಗೆ ಕೆಲಸವಿಲ್ಲದ್ದಂತಾಗಿದೆ. ಯಾರು ಕೂಡಾ ದಾನಿಗಳು ನಮ್ಮ ಕಡೆಗೆ ಬಂದಿಲ್ಲ ಊಟವೂ ಸಹ ನಮಗೆ ಕೊಟ್ಟಿಲ್ಲ. ಹೀಗಾಗಿ ಹಸಿವು ನೀಗಿಸಿಕೊಳ್ಳಲು ಪರದಾಟ ನಡೆಸಬೇಕಾಗಿದೆ ಎಂದು ಆಶ್ರೆಯ ಬಡಾವಣೆಯ ನಿವಾಸಿ ಜಯಶ್ರಿ ಬೇಸರ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ವಾಸಿಗರೆಲ್ಲ ಬೀದರ್ ನಗರದ ಎಪಿಎಂಸಿಯಲ್ಲಿ ಇನ್ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿಯೂ ಕೂಡಾ ರೈತರು ಬೆಳೆದ ಉತ್ಪನ್ನಗಳು ಹೆಚ್ಚಿಗೆ ಬಾರದಿರುವ ಕಾರಣ ಇವರಿಗೆ ಇನ್ನೇರಡು ತಿಂಗಳು ಬಿಟ್ಟು ಕೆಲಸಕ್ಕೆ ಬನ್ನಿ ಎಂದು ಹೇಳುತ್ತಿರುವುದು ಇವರ ಆತಂಕ ಹೆಚ್ಚಿಸುವಂತೆ ಮಾಡಿದೆ. ಇನ್ನೂ ಮಹಿಳೆಯರು ಹೊಲಗಳಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಆದರೇ ಲಾಕ್​ಡೌನ್​ನಿಂದಾಗಿ ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾರದೆ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಅವರು ಕೂಡಾ ಮಹಿಳೆಯರಿಗೆ ಕೆಲಸಕೊಡುತ್ತಿಲ್ಲ.

ದಾನಿಗಳು, ರಾಜಕಾರಣಿಗಳು ಬಡವರಿಗೆ ಆಹಾರ ಕಿಟ್ ಕೊಡುತ್ತಿದ್ದಾರೆ. ಆದರೇ ನಮಗೆ ಇವರಿಗೆ ಯಾರು ಆಹಾರದ ಕಿಟ್ ಕೊಟ್ಟಿಲ್ಲ. ಸರಕಾರ ಕೊಡುವ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನ ಊಟಕ್ಕೆ ಬಳಸಿಕೊಳ್ಳುವಂತಾಗಿದೆ. ಸರಕಾರ ನಮ್ಮ ಕಡೆಗೆ ನೋಡಲಿ ಜತೆಗೆ ಈ ಬಡಾವಣೆಯಲ್ಲಿ 40 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಂಗವಿಕಲರಿದ್ದಾರೆ, ಕಡು ಬಡವರು ಇಲ್ಲಿ ವಾಸ ಮಾಡುತ್ತಿದ್ದಾರೆ. ಹೀಗಾಗಿ ಕೆಲಸವಿಲ್ಲದ ನಮಗೆ ಊಟಕೊಡಿ ಸಾಕು ಎಂದು ಇಲ್ಲಿನ ವಯೋವೃದ್ಧರಾದ ವಾಮನ್ ರಾವ್ ಕುಲಕರ್ಣಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಟ್ಟಡ, ಕೈಗಾರಿಕೆ, ಗಾರ್ಮೆಂಟ್ಸ್ ಸೇರಿದಂತೆ ಅನೇಕ ಕಡೆ ದುಡಿಮೆಯಲ್ಲಿದ್ದ ಕಾರ್ಮಿಕರು ಕೆಲಸ ವಿಲ್ಲದೆ ತುತ್ತು ಅನ್ನಕ್ಕಾಗಿ ತತ್ವಾರ ಪಡುತ್ತಿದ್ದಾರೆ. ಇತ್ತ ರೈತರು ಬೆಳೆದ ಬೆಳೆ ಮಾರಾಟ ಮಾಡಲಾಗದೆ ರೈತರು ಕೂಡಾ ಹೊಲದಲ್ಲಿ ಕೆಲಸ ಮಾಡಲು ಯಾರಿಗೆ ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಇವರಿಗೆ ಕೆಲಸವಿಲ್ಲದೆ ಪರದಾಟ ನಡೆಸುವಂತಾಗಿದೆ. ದೇಶದ ಆರ್ಥಿಕತೆಗೆ ಪ್ರಬಲ ಶಕ್ತಿಯಾದ ಕಾರ್ಮಿಕರು ಮೊದಲೇ ಕೆಲಸವಿಲ್ಲದೆ ಹೈರಾಣಾಗಿದ್ದಾರೆ, ಈಗ ಲಾಕ್​ಡೌನ್ ಪದೇ ಪದೇ ವಿಸ್ತರಣೆಯಾಗುತ್ತಿದ್ದು ಇವರಿಗೆ ಬರಸಿಡಿಲು ಬಡಿದಂತಾಗಿದೆ. ಇನ್ನಾದರು ಸರ್ಕಾರ ಇಂತಹವರ ನೆರವಿಗೆ ದಾವಿಸಬೇಕಾಗಿದೆ.

ಇದನ್ನೂ ಓದಿ:

ಗ್ರಾಮೀಣ ಜನರ ನೆರವಿಗೆ ನಿಂತ ಉದ್ಯೋಗ ಖಾತ್ರಿ ಯೋಜನೆ: ಬೀದರ್​ನ ಕಾರ್ಮಿಕರಿಗೆ ಎಂಜಿಎನ್​ಆರ್​ಇಜಿಎಯಿಂದ ಆಸರೆ

ಗ್ರಾಮೀಣ ಭಾಗದ ಜನರ ಮನೆಗೆ ವೈದ್ಯಕೀಯ ಸೇವೆ; ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಸೋಂಕಿತರಿಗೆ ನೆರವು

Published On - 1:59 pm, Mon, 31 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ