ಗ್ರಾಮೀಣ ಜನರ ನೆರವಿಗೆ ನಿಂತ ಉದ್ಯೋಗ ಖಾತ್ರಿ ಯೋಜನೆ: ಬೀದರ್ನ ಕಾರ್ಮಿಕರಿಗೆ ಎಂಜಿಎನ್ಆರ್ಇಜಿಎಯಿಂದ ಆಸರೆ
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳ ಜನರಿಗೆ ಬದು ನಿರ್ಮಾಣ, ಕೃಷಿ ಹೊಂಡ, ಕೆರೆ ಅಭಿವೃದ್ಧಿ, ರಸ್ತೆ ಅಭಿವೃದ್ಧಿ, ತೆರೆದ ಬಾವಿ, ಕೊಳವೆ ಬಾವಿಗಳ ಮರು ಪರಿಶೀಲನೆ ಕೆಲಸ ನೀಡಲು ಮುಂದಾಯಿತು. 275 ರೂಪಾಯಿ ವೇತನದಂತೆ ಒಂದು ಕುಟುಂಬಕ್ಕೆ ನೂರು ದಿನಗಳ ಉದ್ಯೋಗವನ್ನು ನೀಡಿದ್ದು, ಜನರು ಕೂಡಾ ಖುಷಿಯಿಂದ ಕೆಲಸ ಮಾಡುತ್ತಿದ್ದಾರೆ.
ಬೀದರ್: ಕೊರೊನಾ ಎರಡನೇ ಅಲೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದ್ದು, ಲಾಕ್ಡೌನ್ನಿಂದಾಗಿ ಜನರು ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಇದರಿಂದಾಗಿ ದುಡಿಯಲು ಶಕ್ತಿಯಿದ್ದರು ಕೈಗೆ ಕೆಲಸವಿಲ್ಲದ್ದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಉದ್ಯೋಗವಿಲ್ಲದೆ ಮನೆಯಲ್ಲಿಯೇ ಉಳಿದ್ದಿದ್ದರ ಪರಿಣಾಮ ಅದೇಷ್ಟೋ ಕೂಲಿ ಕಾರ್ಮಿಕರ ಕುಟುಂಬಗಳು ಹಸಿವಿನಿಂದ ಬಳುತ್ತಿವೆ. ಆದರೀಗ ಉದ್ಯೋಗ ಖಾತ್ರಿ ಯೋಜನೆ ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ಅವರ ಹಸಿವು ನೀಗಿಸುವ ಕೆಲಸ ಮಾಡುತ್ತಿದೆ.
ಕೋವಿಡ್ನ ಈ ಸಂಕಷ್ಟದ ದಿನಗಳಲ್ಲಿ ಕಳೆದೊಂದು ತಿಂಗಳಿಂದ ಸಾವಿರಾರು ಸಂಖ್ಯೆಯಲ್ಲಿ ಯುವಕರು- ಯುವತಿಯರು ಕೆಲಸ ಬಿಟ್ಟು ತಮ್ಮ ಹಳ್ಳಿಗಳಿಗೆ ಬಂದಿದ್ದಾರೆ. ಆದರೇ ಅವರು ತಮ್ಮ ಹಳ್ಳಿಗಳಿಗೆ ಬಂದ ನಂತರ ಅವರಿಗೆ ಕೆಲಸವಿಲ್ಲದ್ದರಿಂದ ಮನೆಯಲ್ಲಿಯೇ ಇರಬೇಕಾದ ಸ್ಥಿತಿಯಿಲ್ಲಿ ನಿರ್ಮಾಣವಾಗಿತ್ತು. ಅವತ್ತಿನ ದುಡಿಮೆಯಲ್ಲಿಯೇ ಅವತ್ತಿನ ಊಟ ಮಾಡುವಂತಾ ಸ್ಥಿತಿ ಕೆಲವು ಕುಟುಂಬಕ್ಕಿದೆ. ಹೀಗಾಗಿ ಕೆಲಸವಿಲ್ಲದ್ದರಿಂದ ಮನೆಯಲ್ಲಿ ಸಾಲಾ ಸೋಲಾ ಮಾಡಿ ಅರ್ಧಹೊಟ್ಟೆಯಲ್ಲಿಯೇ ದಿನದೂಡಬೇಕಾದ ಸ್ಥಿತಿಯಿತ್ತು. ಆದರೇ ಇಂತಹ ಕುಟುಂಬಗಳಿಗೆ ಉದ್ಯೋಗ ಖಾತ್ರಿ ಯೋಜನೆಯೀಗ ವರವಾಗಿದ್ದು, ಬೀದರ್ನ ಗ್ರಾಮೀಣ ಭಾಗದ ಜನರ ಹಸಿವು ನೀಗಿಸುವ ಯೋಜನೆಯಾಗಿ ಮಾರ್ಪಾಡಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳ ಜನರಿಗೆ ಬದು ನಿರ್ಮಾಣ, ಕೃಷಿ ಹೊಂಡ, ಕೆರೆ ಅಭಿವೃದ್ಧಿ, ರಸ್ತೆ ಅಭಿವೃದ್ಧಿ, ತೆರೆದ ಬಾವಿ, ಕೊಳವೆ ಬಾವಿಗಳ ಮರು ಪರಿಶೀಲನೆ ಕೆಲಸ ನೀಡಲು ಮುಂದಾಯಿತು. 275 ರೂಪಾಯಿ ವೇತನದಂತೆ ಒಂದು ಕುಟುಂಬಕ್ಕೆ ನೂರು ದಿನಗಳ ಉದ್ಯೋಗವನ್ನು ನೀಡಿದ್ದು, ಜನರು ಕೂಡಾ ಖುಷಿಯಿಂದ ಕೆಲಸ ಮಾಡುತ್ತಿದ್ದಾರೆ.
ಬೀದರ್ ಜಿಲ್ಲೆಯಲ್ಲಿರುವ 185 ಗ್ರಾಮ ಪಂಚಾಯತಿಗೆ ಬರುತ್ತಿದ್ದು, ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸಾವಿರಾರು ಕೂಲಿ ಕಾರ್ಮಿಕರಿಗೆ ಉದ್ಯೋಗವನ್ನ ಕಲ್ಪಿಸಿಕೊಟ್ಟಿದೆ. ಕೆಲಸ ಕೇಳಿಕೊಂಡು ಅದೇಷ್ಟೇ ಜನರು ಬಂದರು ಕೂಡಾ ಕೆಲಸ ಇಲ್ಲ ಎಂದು ಹೇಳಿದಂತೆ ಸರಕಾರ ಆದೇಶ ಮಾಡಿದ್ದರಿಂದ ಎಲ್ಲರಿಗೂ ಕೆಲಸ ಕೊಡಲಾಗುತ್ತಿದೆ. ಇನ್ನೂ ಜಿಲ್ಲೆಯಲ್ಲಿ 1.59 ಲಕ್ಷ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಕುಟುಂಬಗಳಿದ್ದು 3.17 ಲಕ್ಷ ಕೂಲಿ ಕಾರರಿದ್ದಾರೆ. ಈಗ 39333 ಜನರು ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿದಿನ ಕೆಲಸ ಮಾಡುತ್ತಿದ್ದು, ಪ್ರತಿದಿನ ಇದರ ಸಂಖ್ಯೆ ಏರುತ್ತಲೇ ಹೋಗುತ್ತಿದೆ.
ಇನ್ನೂ ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಜನರು ಕೆಲಸಕ್ಕೆ ಬರುತ್ತಿದ್ದು, ಬರುವ ಎಲ್ಲರಿಗೂ ಕೂಡಾ ಇಲ್ಲಿ ಕೆಲಸವನ್ನ ನೀಡಲಾಗುತ್ತಿದೆ. ಕೂಲಿ ಕಾರ್ಮಿಕರಿಗೆ ಗ್ರಾಮದ ಸುತ್ತಮುತ್ತಲಿನಲ್ಲೇ ಕೆಲಸವನ್ನು ಕೊಡಲಾಗುತ್ತಿದು, ಇದು ಕೂಡಾ ಕಾರ್ಮಿಕರಿಗೆ ಅನೂಕೂಲವಾಗಿದೆ. ಜತೆಗೆ ಇವರು ಪ್ರತಿ ನಿತ್ಯ ದುಡಿದ ಹಣವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಾಕುವುದರಿಂದ ಎಲ್ಲಿಯೂ ಕೂಡಾ ಭ್ರಷ್ಟಾಚಾರಕ್ಕೆ ಅನುವು ಮಾಡಿ ಕೊಟ್ಟಿಲ್ಲ.
ಒಂದು ಕುಟುಂಬಕ್ಕೆ ನೂರು ದಿನಗಳ ಉದ್ಯೋಗವನ್ನು ಸೃಜನೆ ಮಾಡಲಾಗಿದ್ದು, ಓರ್ವ ವ್ಯಕ್ತಿಗೆ ಒಂದು ದಿನದ ಕೆಲಸಕ್ಕೆ 275 ರೂಪಾಯಿ ವೇತನವನ್ನು ನೀಡಲಾಗುತ್ತಿದೆ. ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಲಾಕ್‌ಡೌನ್ ವಿದಿ ಸಿದ್ದರಿಂದ ಉದ್ಯೋಗವಿಲ್ಲದೇ ಜನರು ಪರದಾಡುವಂತಹ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆ ಉದ್ಯೋಗ ನೀಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡುತ್ತಿದ್ದಾರೆಂದು ಸಿಇಓ ಜಹೀರಾ ನಸೀಮ್ ಹೇಳಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ಜನತೆಗೆ ಉದ್ಯೋಗ ನೀಡಿರುವುದು ಜಿಲ್ಲೆಯ ಜನತೆಗೆ ಅನುಕೂಲವಾಗಿದೆ. ಕೊರೊನಾಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಉದ್ಯೋಗ ನೀಡಲಾಗಿದೆ. ಜಿಲ್ಲೆಯಲ್ಲಿ ಗುಂಪು ಕಾಮಗಾರಿಗಳಿಗಿಂತ ಹೆಚ್ಚು ವೈಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಉದ್ಯೋಗಕ್ಕೆ ಬರುವ ಪ್ರತಿಯೊಬ್ಬರು ಕೊವಿಡ್ 19 ರೋಗವನ್ನು ಹರಡಿಸುವುದಿಲ್ಲ ಎಂಬ ಪ್ರತಿಜ್ಞೆ ಮಾಡಿಸಲಾಗುತ್ತಿದೆ. ಕಾಮಗಾರಿ ಸ್ಥಳದಲ್ಲಿ ಎಲ್ಲರೂ ಸಾಮಾಜಿಕ ಅಂತರ ಸೇರಿದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಮೇಲ್ವಿಚಾರಣೆಗೆ ನೇಮಿಸಲಾಗಿದೆ. ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳಿಗೆ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದ್ದು, ಸಾವಿರಾರು ಕುಟುಂಬಗಳಿಗೆ ಬದುಕುವ ಆಸೆ ಹುಟ್ಟಿಸಿದೆ.
ಇದನ್ನೂ ಓದಿ:
Published On - 11:07 am, Sat, 29 May 21