ಬ್ಲ್ಯಾಕ್​ಫಂಗಸ್ ರೋಗಕ್ಕೆ ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ನೀಡಲು ಸೋನಿಯಾ ಗಾಂಧಿ ಸಲಹೆ; ಪ್ರಧಾನಿ ಮೋದಿಗೆ ಪತ್ರ

ಮ್ಯೂಕೋರ್ಮೈಕೋಸಿಸ್ ಕಾಯಿಲೆಯನ್ನು ಎಪಿಡೆಮಿಕ್​ ಕಾಯ್ದೆಯಡಿ ಸಾಂಕ್ರಾಮಿಕ ಎಂದು ಘೋಷಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಹೀಗಿದ್ದಮೇಲೆ ಈ ಕಾಯಿಲೆಯ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳ ಉತ್ಪಾದನೆ, ಪೂರೈಕೆಗಳೆಲ್ಲ ಸಾಕಷ್ಟು ಪ್ರಮಾಣದಲ್ಲಿ ಇರಬೇಕು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಬ್ಲ್ಯಾಕ್​ಫಂಗಸ್ ರೋಗಕ್ಕೆ ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ನೀಡಲು ಸೋನಿಯಾ ಗಾಂಧಿ ಸಲಹೆ; ಪ್ರಧಾನಿ ಮೋದಿಗೆ ಪತ್ರ
ಸೋನಿಯಾ ಗಾಂಧಿ
Follow us
Lakshmi Hegde
|

Updated on: May 22, 2021 | 7:29 PM

ದೆಹಲಿ: ಮ್ಯೂಕೋರ್ಮೈಕೋಸಿಸ್ (ಬ್ಲ್ಯಾಕ್​ಫಂಗಸ್​ ಅಥವಾ ಕಪ್ಪುಶಿಲೀಂದ್ರ)ನ್ನು ಅಂಟುರೋಗ (ಸಾಂಕ್ರಾಮಿಕ)ವೆಂದು ಘೋಷಿಸುವಂತೆ ಕೇಂದ್ರಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್​ ಹಾಗೂ ಮತ್ತಿತರ ಆರೋಗ್ಯ ವಿಮಾ ಯೋಜನೆಯಡಿ ಈ ರೋಗಕ್ಕೆ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮ್ಯೂಕೋರ್ಮೈಕೋಸಿಸ್ ಕಾಯಿಲೆಯನ್ನು ಎಪಿಡೆಮಿಕ್​ ಕಾಯ್ದೆಯಡಿ ಸಾಂಕ್ರಾಮಿಕ ಎಂದು ಘೋಷಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಹೀಗಿದ್ದಮೇಲೆ ಈ ಕಾಯಿಲೆಯ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳ ಉತ್ಪಾದನೆ, ಪೂರೈಕೆಗಳೆಲ್ಲ ಸಾಕಷ್ಟು ಪ್ರಮಾಣದಲ್ಲಿ ಇರಬೇಕು. ಹಾಗೇ, ಅಗತ್ಯ ಇರುವ ರೋಗಿಗಳಿಗೆ ಚಿಕಿತ್ಸೆ, ಆರೈಕೆಯನ್ನು ಉಚಿತವಾಗಿ ನೀಡಬೇಕು ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ಹೇಳಿದ್ದಾರೆ. ಮ್ಯೂಕೋರ್ಮೈಕೋಸಿಸ್ ಕಾಯಿಲೆ ಚಿಕಿತ್ಸೆಗೆ ಲಿಪೊಸಾರ್ನಲ್ ಆಂಫೊಟೆರಿಸಿನ್-ಇ 1 ಔಷಧ ಅತ್ಯಗತ್ಯವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಈ ಔಷಧಿಯ ತೀವ್ರ ಕೊರತೆ ಇರುವುದಾಗಿ ವರದಿಯಾಗಿದೆ. ಅಷ್ಟೇ ಅಲ್ಲ, ಈ ರೋಗವನ್ನು ಇನ್ನೂ ಆಯುಷ್ಮಾನ್​ ಭಾರತ್ ಸೇರಿ ಯಾವುದೇ ರೀತಿಯ ಆರೋಗ್ಯ ವಿಮೆ ಯೋಜನೆಯಡಿ ಸೇರಿಸಲಾಗಿಲ್ಲ. ದೇಶದಲ್ಲಿ ದಿನೇದಿನೆ ಬ್ಲ್ಯಾಕ್​ ಫಂಗಸ್​​ನಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಅನುಕೂಲವಾಗುವಂತೆ ಕೂಡಲೇ ಯೋಜನೆ ರೂಪಿಸಿ ಎಂದು ಮನವಿ ಮಾಡುತ್ತೇನೆ ಎಂದೂ ಬರೆದಿದ್ದಾರೆ.

ಭಾರತದಲ್ಲಿ ಕೊರೊನಾದಿಂದ ಗುಣಮುಖರಾದವರಲ್ಲಿ ಕಪ್ಪುಶಿಲೀಂದ್ರದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರೂ ಎಚ್ಚರಿಕೆ ನೀಡಿದ್ದಾರೆ. ಈ ಬ್ಲ್ಯಾಕ್​ ಫಂಗಸ್​ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಬೇಕು. ಹೊಸ ಸವಾಲಿನ ವಿರುದ್ಧ ಹೋರಾಡಲು ಸಿದ್ಧರಾಗಬೇಕು ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ದಯವಿಟ್ಟು ಜೀವಂತ ಕೋಳಿಗಳಿಗೆ ಮುತ್ತು ಕೊಡಬೇಡಿ: ಅಮೆರಿಕ ಆರೋಗ್ಯ ಸಂಸ್ಥೆ

ಶ್ವೇತ ಭವನದಲ್ಲಿ ಬೆಚ್ಚನೆಯ ಅಪ್ಪುಗೆಗಳು, ಹೊಸ ವೈಬ್ಸ್ ಶುರು​! ಇದಕ್ಕೆ ಕಾರಣವೇನು? ಕೊರೊನಾ ಕಾಟ ಮುಗಿಯಿತಾ?

Cover Mucormycosis in Ayushman Bharat urged by Sonia Gandhi in letter which is write to PM Modi