Ashden Award: ಅಂತಿಮ ಪಟ್ಟಿಯಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್

ಬ್ರಿಟನ್‌ನ ಆಶ್ಡೆನ್ ಸಂಸ್ಥೆ ನೀಡುವ ಜಾಗತಿಕ ಮಟ್ಟದ ಪ್ರತಿಷ್ಠಿತ ಆಶ್ಡೆನ್ ಪ್ರಶಸ್ತಿಯ, ಸುಸ್ಥಿರ ಶಕ್ತಿಯ ಕೌಶಲ ವೃದ್ಧಿಯ ವಿಭಾಗದ ಅಂತಿಮ ದೀರ್ಘಪಟ್ಟಿಯಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಆಯ್ಕೆಯಾಗಿದೆ.

Ashden Award: ಅಂತಿಮ ಪಟ್ಟಿಯಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್
ಭಾರತೀಯ ವಿಕಾಸ ಟ್ರಸ್ಟ್​ನಿಂದ ಆಯೋಜಿಸಿದ ಕಾರ್ಯಾಗಾರದಲ್ಲಿ ಗ್ರಾಮೀಣ ಹೆಣ್ಣುಮಕ್ಕಳು
Follow us
ಶ್ರೀದೇವಿ ಕಳಸದ
|

Updated on: May 22, 2021 | 7:55 PM

ಮಣಿಪಾಲ : ಬ್ರಿಟನ್‌ನ ಆಶ್ಡೆನ್ ಸಂಸ್ಥೆ ನೀಡುವ ಜಾಗತಿಕ ಮಟ್ಟದ ಪ್ರತಿಷ್ಠಿತ ಆಶ್ಡೆನ್ ಪ್ರಶಸ್ತಿಯ, ಸುಸ್ಥಿರ ಶಕ್ತಿಯ ಕೌಶಲ ವೃದ್ಧಿಯ ವಿಭಾಗದ ಅಂತಿಮ ದೀರ್ಘಪಟ್ಟಿಯಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಆಯ್ಕೆಯಾಗಿದೆ ಎಂದು ಆಶ್ಡೆನ್ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಯುನೈಟೆಡ್ ಕಿಂಗ್ಡಮ್​ನ ಆಶ್ಡೆನ್ ಸಂಸ್ಥೆಯು ಕಳೆದ 20 ವರ್ಷಗಳಿಂದ ಹವಾಮಾನ ಬದಲಾವಣೆಯ ಪರಿಹಾರಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. 2021 ರ ಆಶ್ಡೆನ್ ಪ್ರಶಸ್ತಿಗಾಗಿ 800ಕ್ಕೂ ಹೆಚ್ಚು ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಇದೀಗ 35 ಸಂಸ್ಥೆಗಳನ್ನು ದೀರ್ಘಪಟ್ಟಿಯಲ್ಲಿ ಹೆಸರಿಸಿದ್ದು, ಅದರಲ್ಲಿ ಬಿವಿಟಿ ಕೂಡ ಒಂದು.

ಪ್ರಶಸ್ತಿಯ ಆಯ್ಕೆಯ ಪ್ರಕ್ರಿಯೆಯು ಪಾರದರ್ಶಕವಾಗಿದ್ದು ಪಟ್ಟಿಯಲ್ಲಿದ್ದ ಸಂಸ್ಥೆಗಳನ್ನು ಸ್ವತಃ ಭೇಟಿ ಮಾಡಿ, ತಜ್ಞರ ಅಭಿಪ್ರಾಯಗಳನ್ನು ಪಡೆಯುವ ಮೂಲಕ ಕಠಿಣ ಮೌಲ್ಯಮಾಪನ ಹಾಗೂ ತೀರ್ಪಿನ ಪ್ರಕ್ರಿಯೆ ನಡೆಯಲಿದೆ. ಪ್ರಶಸ್ತಿ ವಿಜೇತರನ್ನು ನವೆಂಬರ್ 2021ರಲ್ಲಿ ಘೋಷಿಸಲಾಗುವುದು ಎಂದು ಆಶ್ಡೆನ್​ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹ್ಯಾರಿಯಟ್ ಲಾಂಬ್ ತಿಳಿಸಿದ್ದಾರೆ.

ಭಾರತೀಯ ವಿಕಾಸ್ ಟ್ರಸ್ಟ್ (ಬಿವಿಟಿ) ಸ್ವಯಂ ಸಬಲೀಕರಣದ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಗ್ರಾಮೀಣ ಭಾರತಕ್ಕೆ ದೊಡ್ಡ ಅಪಾಯವೆಂದರೆ ಯುವಜನರು ನಗರ ಪ್ರದೇಶಗಳಿಗೆ ವಲಸೆ ಹೋಗುವುದು. ಉತ್ತಮ ಭವಿಷ್ಯ ಮತ್ತು ಉತ್ತಮ ಜೀವನಮಟ್ಟದ ಹುಡುಕಾಟದ ಕಾರಣದಿಂದ ಉಂಟಾಗುವ ಈ ವಲಸೆಯಿಂದಾಗಿ ನಗರೀಕರಣ ಹೆಚ್ಚುತ್ತದೆ ಹಾಗೂ ಕೌಶಲಗಳ ಕೊರತೆ ಜಾಸ್ತಿಯಾಗುತ್ತದೆ. 1996ರಲ್ಲಿ ಬಿವಿಟಿ ವಿಶ್ವಾಸಾರ್ಹ ಹಾಗೂ ಕೈಗೆಟುಕಬಹುದಾದ ಇಂಧನ ಪರಿಹಾರಗಳ ಅಗತ್ಯವನ್ನು ಮನಗಂಡಿದ್ದು, ಬಡತನ ನಿವಾರಿಸಲು ಇದೊಂದು ಪ್ರಮುಖ ಕ್ರಮ ಎಂಬುದನ್ನೂ ಗುರುತಿಸಿದೆ. ಸೌರ ಶಕ್ತಿಯ ಕುರಿತಾಗಿ 2001ರಿಂದ ಸುಮಾರು 1000 ತರಬೇತಿಗಳನ್ನು ಬಿವಿಟಿ ನೀಡಿದ್ದು, ಸರಿಸುಮಾರು 50,000 ಅಂತಿಮ ಬಳಕೆದಾರರು ಇದರಲ್ಲಿ ನೇರವಾಗಿ ಭಾಗವಹಿಸಿದ್ದಾರೆ. ಜೊತೆಗೆ, 680ಕ್ಕೂ ಹೆಚ್ಚು ವಿವಿಧ ರೀತಿಯ ಹಣಕಾಸು ಸಂಸ್ಥೆಗಳಿಂದ 14,000 ಹಣಕಾಸುದಾರರನ್ನು ಕೇಂದ್ರವಾಗಿಟ್ಟುಕೊಂಡು 500ಕ್ಕೂ ಹೆಚ್ಚು ಬ್ಯಾಂಕರ್ ತರಬೇತಿಗಳನ್ನು ನೀಡಿದೆ. ಇದರ ಪರಿಣಾಮವಾಗಿ ಸುಮಾರು 6,00,000 ಸೌರಶಕ್ತಿ ಆಧಾರಿತ ಪರಿಹಾರಗಳಿಗೆ ಸಾಲವನ್ನು ನಿಯೋಜಿಸಲಾಗಿತ್ತು.

ಆಶ್ಡೆನ್​ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹ್ಯಾರಿಯಟ್ ಲಾಂಬ್ “ಸರ್ಕಾರಗಳು, ಹವಾಮಾನ ನಾವೀನ್ಯಕಾರರು ಮತ್ತು ಕಾರ್ಯಕರ್ತರು ಸ್ಕಾಟ್ಲಾಂಡ್ ದೇಶದ ಗ್ಲಾಸ್ಗೋದಲ್ಲಿ ಈ ವರ್ಷ ನಡೆಯಲಿರುವ ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಸೇರಲಿದ್ದಾರೆ. ಈ ಸಮಯದಲ್ಲಿ ಸ್ಫೂರ್ತಿದಾಯಕ ಹವಾಮಾನ ನಾಯಕರು ಕಡಿಮೆ ಸಮಯದಲ್ಲಿ, ದೊಡ್ಡ ಮಟ್ಟದ ಪುನರಾವರ್ತಿಸಬಹುದಾದ ಪರಿಹಾರಗಳನ್ನು ಪ್ರದರ್ಶಿಸಲಿದ್ದಾರೆ. ಆಶ್ಡೆನ್ ಪ್ರಶಸ್ತಿಯು ನ್ಯಾಯೋಚಿತವಾದ ಅತ್ಯಾಧುನಿಕ ಹಾಗೂ ಪರಿಸರ ಸ್ನೇಹಿ ಉಪಕ್ರಮಗಳ ಮೇಲೆ ಕೇಂದ್ರಿತವಾಗಿದೆ. ಇದು ಹವಾಮಾನ ನ್ಯಾಯವನ್ನು ಒದಗಿಸುವುದಷ್ಟೇ ಅಲ್ಲದೆ ಉತ್ತಮ ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಜನರಿಗೆ ಹಸಿರು ಕೌಶಲಗಳಲ್ಲಿ ತರಬೇತಿ ನೀಡುತ್ತದೆ ಹಾಗೂ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಸಹಕರಿಸುತ್ತದೆ.

ಈ ವರ್ಷ ಸಲ್ಲಿಸಲ್ಪಟ್ಟ ಅರ್ಜಿಗಳ ಪೈಕಿ ಹವಾಮಾನ ಪರಿಹಾರದ ಕುರಿತು ಒಂದಕ್ಕಿಂತ ಒಂದು ಅದ್ಭುತ ಪರಿಹಾರಗಳು ಹಾಗೂ ಹಸಿರು ಉದ್ಯಮಶೀಲತೆಯ ಅಂಶಗಳಿದ್ದು, ಪ್ರಶಸ್ತಿಗೆ ಆಯ್ಕೆ ಮಾಡುವುದು ಕಠಿಣವಾಗಲಿದೆ! ಅಂತಿಮವಾಗಿ ವಿಜೇತರನ್ನು ಘೋಷಿಸಿದಾಗ ಅವರ ಅತ್ಯುತ್ತಮ ಆವಿಷ್ಕಾರಗಳು ಜಗತ್ತಿಗೆ ತೆರೆದುಕೊಳ್ಳಲಿವೆ. ನಾವೂ ಅದಕ್ಕಾಗಿಯೇ ಕಾಯುತ್ತಿದ್ದೇವೆ.

ಇದರ ಪ್ರಶಸ್ತಿ ಮತ್ತು ನಿರಂತರವಾದ ಸಂಪರ್ಕಗಳ ಮೂಲಕ, ಆಶಡನ್, ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಪರಿಹಾರಗಳನ್ನು ಕಂಡುಹಿಡಿದು ಈ ಕ್ಷೇತ್ರದಲ್ಲಿ ಸಾಬೀತು ಮಾಡಿದ ಜಗತ್ತಿನಾದ್ಯಂತವಿರುವ ಉದ್ಯಮ, ವ್ಯವಹಾರಗಳು, ಲಾಭರಹಿತ ಮತ್ತು ಸಾರ್ವಜನಿಕ ವಲಯಗಳು, ಸಂಸ್ಥೆಗಳೂ ಸೇರಿದಂತೆ ಹವಾಮಾನ ಮತ್ತು ಶಕ್ತಿಯ ಹೊಸ ಶೋಧಕರನ್ನು ಗುರುತಿಸಿ ಬೆಳಕಿಗೆ ತರುತ್ತದೆ ಮತ್ತು ಬೆಂಬಲಿಸುತ್ತದೆ. ಬಿವಿಟಿಯ ವ್ಯವಸ್ಥಾಪಕ ಟ್ರಸ್ಟಿ, ಅಶೋಕ್ ಪೈ ಅವರು, “ಮಹಿಳಾ ಸಬಲೀಕರಣ ಮತ್ತು ಸುಸ್ಥಿರ ಇಂಧನ ಆಧಾರಿತ ಗ್ರಾಮೀಣ ಅಭಿವೃದ್ಧಿಗೆ ತಕ್ಕುದಾದ ಕೌಶಲಗಳನ್ನು ಬೆಳೆಸುವಲ್ಲಿ ಬಿವಿಟಿ ಮಹತ್ತರ ಪಾತ್ರ ವಹಿಸಿದೆ. ಕಳೆದ ಎರಡು ದಶಕಗಳಲ್ಲಿ, ವಿವಿಧ ಪಾಲುದಾರರ ಪೈಕಿ 1000ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಬಿವಿಟಿ ಸೌರಶಕ್ತಿ ಕೌಶಲಗಳ ಕುರಿತು ತರಬೇತಿ ನೀಡಿದ್ದು, ಯುವಕರಿಗೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಇದೊಂದು ಅವಕಾಶವನ್ನು ಸೃಷ್ಟಿಸಿದೆ. ನೇರವಾಗಿ ಪಾಲುದಾರರಿಗೆ ಮತ್ತು ಅಂತಿಮ ಬಳಕೆದಾರರಿಗೆ ತರಬೇತಿ ನೀಡುವ ಈ ಮಾದರಿಯನ್ನು ದೇಶಾದ್ಯಂತ ವಿಸ್ತರಿಸಿ, ಪುನರಾವರ್ತಿಸಿ, ಸ್ಥಾಪಿಸುವ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನ ಹಾಕುವುದು ನಮ್ಮ ಧ್ಯೇಯವಾಗಿದೆ,” ಎಂದರು.

ಇದನ್ನೂ ಓದಿ : ಗೋವಿಂದರಾಜು ಎಂ. ಕಲ್ಲೂರು ಅವರಿಗೆ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ