ದೆಹಲಿಯಲ್ಲಿ 18ವರ್ಷ ಮೇಲ್ಪಟ್ಟವರಿಗೆ ಇಂದಿನಿಂದ ಇಲ್ಲ ಕೊವಿಡ್​ 19 ಲಸಿಕೆ; 24ಗಂಟೆಯಲ್ಲಿ ವಿದೇಶದಿಂದ ತರಿಸಿಕೊಡಿ ಎಂದ ಸಿಎಂ

ದೆಹಲಿ: 18 ವರ್ಷ ಮೇಲ್ಪಟ್ಟವರಿಗೆ ಕೊವಿಡ್​ 19 ಲಸಿಕೆ ನೀಡುವುದನ್ನು ಇಂದಿನಿಂದ (ಶನಿವಾರ) ಸ್ಥಗಿತಗೊಳಿಸಲಾಗುತ್ತಿದೆ. ನಮ್ಮಲ್ಲಿ ಕೊರೊನಾ ಲಸಿಕೆ ಸಂಪೂರ್ಣವಾಗಿ ಖಾಲಿಯಾಗಿರುವ ಕಾರಣ ಲಸಿಕೆ ವಿತರಣಾ ಅಭಿಯಾನವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಶನಿವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​, ದೆಹಲಿಯಲ್ಲಿ 18ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದನ್ನು ಇಂದಿನಿಂದ ನಿಲ್ಲಿಸುತ್ತೇವೆ. ಈ ವರ್ಗದವರಿಗಾಗಿ ಮೀಸಲಿಟ್ಟಿದ್ದ ಲಸಿಕೆ ಖಾಲಿಯಾಗಿದೆ. ದೇಶದಲ್ಲಿರುವ ಕೊರೊನಾ ಲಸಿಕೆ ಸಾಕಾಗುತ್ತಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ವಿದೇಶಗಳಿಂದ ಇನ್ನು 24 […]

ದೆಹಲಿಯಲ್ಲಿ 18ವರ್ಷ ಮೇಲ್ಪಟ್ಟವರಿಗೆ ಇಂದಿನಿಂದ ಇಲ್ಲ ಕೊವಿಡ್​ 19 ಲಸಿಕೆ; 24ಗಂಟೆಯಲ್ಲಿ ವಿದೇಶದಿಂದ ತರಿಸಿಕೊಡಿ ಎಂದ ಸಿಎಂ
ಅರವಿಂದ್ ಕೇಜ್ರಿವಾಲ್​
Follow us
Lakshmi Hegde
|

Updated on: May 22, 2021 | 6:17 PM

ದೆಹಲಿ: 18 ವರ್ಷ ಮೇಲ್ಪಟ್ಟವರಿಗೆ ಕೊವಿಡ್​ 19 ಲಸಿಕೆ ನೀಡುವುದನ್ನು ಇಂದಿನಿಂದ (ಶನಿವಾರ) ಸ್ಥಗಿತಗೊಳಿಸಲಾಗುತ್ತಿದೆ. ನಮ್ಮಲ್ಲಿ ಕೊರೊನಾ ಲಸಿಕೆ ಸಂಪೂರ್ಣವಾಗಿ ಖಾಲಿಯಾಗಿರುವ ಕಾರಣ ಲಸಿಕೆ ವಿತರಣಾ ಅಭಿಯಾನವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಶನಿವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​, ದೆಹಲಿಯಲ್ಲಿ 18ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದನ್ನು ಇಂದಿನಿಂದ ನಿಲ್ಲಿಸುತ್ತೇವೆ. ಈ ವರ್ಗದವರಿಗಾಗಿ ಮೀಸಲಿಟ್ಟಿದ್ದ ಲಸಿಕೆ ಖಾಲಿಯಾಗಿದೆ. ದೇಶದಲ್ಲಿರುವ ಕೊರೊನಾ ಲಸಿಕೆ ಸಾಕಾಗುತ್ತಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ವಿದೇಶಗಳಿಂದ ಇನ್ನು 24 ಗಂಟೆಯಲ್ಲಿ ಕೊರೊನಾ ವೈರಸ್​ ಲಸಿಕೆಗಳನ್ನು ಖರೀದಿಸಬೇಕು ಎಂದು ಅರವಿಂದ್​ ಕೇಜ್ರಿವಾಲ್ ಹೇಳಿದ್ದಾರೆ.

ಹಲವು ರಾಷ್ಟ್ರಗಳಲ್ಲಿ ಅಲ್ಲಿನ ಅಗತ್ಯತೆಗಿಂತ ಜಾಸ್ತಿ ಕೊವಿಡ್ 19 ಲಸಿಕೆ ಇದೆ. ಅಂಥ ದೇಶಗಳ ಬಳಿ ಭಾರತ ಮನವಿ ಮಾಡಿಕೊಂಡು, ವ್ಯಾಕ್ಸಿನ್​ ಖರೀದಿಗೆ ಮುಂದಾಗಬೇಕು ಎಂದು ತಿಳಿಸಿದ್ದಾರೆ. ಹಾಗೇ, ವಿದೇಶಿ ಕಂಪನಿಗಳಿಗೆ ಭಾರತದಲ್ಲಿ ವ್ಯಾಕ್ಸಿನ್​ ತಯಾರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ಹಾಗೇ, ಕೊವ್ಯಾಕ್ಸಿನ್​ ಲಸಿಕೆ ತಯಾರಿಕೆಯ ಫಾರ್ಮುಲಾವನ್ನು ಹಂಚಿಕೊಳ್ಳಲು ಭಾರತ್​ ಬಯೋಟೆಕ್​ ಒಪ್ಪಿಕೊಂಡಿರುವುದರಿಂದ, ಹೆಚ್ಚೆಚ್ಚು ಕಂಪನಿಗಳನ್ನು ಅದನ್ನು ಉತ್ಪಾದಿಸಲು ಶೀಘ್ರವೇ ಅನುವು ಮಾಡಿಕೊಡಬೇಕು ಎಂದೂ ಕೇಜ್ರಿವಾಲ್ ಕೇಂದ್ರಕ್ಕೆ ಸಲಹೆ ನೀಡಿದ್ದಾರೆ. ದೆಹಲಿಯಲ್ಲಿ ಎಲ್ಲರಿಗೂ ಲಸಿಕೆ ನೀಡಲು ಇನ್ನೂ 80 ಲಕ್ಷ ಡೋಸ್​ ಅಗತ್ಯವಿದೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: Cash with public: 2021ರ ಮೇ 7ರ ಕೊನೆಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ ಜನರ ಬಳಿಯ ನಗದು ರೂ. 28.39 ಲಕ್ಷ ಕೋಟಿ

ಪ್ರಧಾನಿ ಸೂಚನೆಯಂತೆ ಆರ್​.ಆರ್​. ನಗರ ಕ್ಷೇತ್ರಕ್ಕೆ ಆಕ್ಸಿಜನ್​ ಟ್ಯಾಂಕ್​ ತರಿಸಿದ್ದೇವೆ: ಸ್ಥಳೀಯ ಶಾಸಕ ಮುನಿರತ್ನ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ