ಮಕ್ಕಳಿಗೆ ಕೊವಿಡ್ ತಗುಲಿದರೂ ಸಾವು ಕಡಿಮೆ; ನೀತಿ ಆಯೋಗದ ಸದಸ್ಯ ವಿ ಕೆ ಪೌಲ್
Covid in Children: ಆದರೆ 10ರಿಂದ 12 ವರ್ಷದ ಮಕ್ಕಳನ್ನು ಈ ಸಂದರ್ಭದಲ್ಲಿ ಹೆಚ್ಚು ಗಮನಿಸಬೇಕಾದ ಅಗತ್ಯವಿದ್ದು, ಈ ವಯೋಮಾನದ ಮಕ್ಕಳು ಎಲ್ಲೆಂದರಲ್ಲಿ ತಿರುಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಪಾಲಕರು ಮಕ್ಕಳ ಮೇಲೆ ವಿಶೇಷ ಗಮನವಿರಿಸಬೇಕು ಎಂದು ಅವರು ಸೂಚಿಸಿದರು.
ದೆಹಲಿ: ದೇಶದಲ್ಲಿ ಮಕ್ಕಳಿಗೂ ಕೊರೊನಾ ಸೋಂಕು ತಗಲುತ್ತಿದೆ. ಆದರೆ ಕೊವಿಡ್ ತಗುಲಿದ ಹೆಚ್ಚಿನ ಮಕ್ಕಳಲ್ಲಿ ಸೋಂಕಿನ ಯಾವುದೇ ಲಕ್ಷಣ ಕಾಣಿಸಿಲ್ಲ. ಹೆಚ್ಚಿನ ಸಾವು ಸಹ ಸಂಭವಿಸುವ ಸಾಧ್ಯತೆಯಿಲ್ಲ. ಕೊವಿಡ್ ತಗುಲಿದ ಮಕ್ಕಳಿಗೆ ಸೋಂಕಿನ ಹೆಚ್ಚಿನ ಗುಣಲಕ್ಷಣ ಇರದಿದ್ದಲ್ಲಿ ಕಡ್ಡಾಯವಾಗಿ ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ತಿಳಿಸಿದರು.
ಭಾರತ ಮತ್ತು ಇತರ ದೇಶಗಳಲ್ಲಿ ವಿಡ್ ಸೋಂಕು ತಗುಲಿದ ಶೇಕಡಾ 3ರಿಂದ 4ರಷ್ಟು ಪ್ರಮಾಣದ ಮಕ್ಕಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ 10ರಿಂದ 12 ವರ್ಷದ ಮಕ್ಕಳನ್ನು ಈ ಸಂದರ್ಭದಲ್ಲಿ ಹೆಚ್ಚು ಗಮನಿಸಬೇಕಾದ ಅಗತ್ಯವಿದ್ದು, ಈ ವಯೋಮಾನದ ಮಕ್ಕಳು ಎಲ್ಲೆಂದರಲ್ಲಿ ತಿರುಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಪಾಲಕರು ಮಕ್ಕಳ ಮೇಲೆ ವಿಶೇಷ ಗಮನವಿರಿಸಬೇಕು ಎಂದು ಅವರು ಸೂಚಿಸಿದರು.
ಕೊರೊನಾ ಸೋಂಕಿಗೂ ಮೊದಲೇ ಬ್ಲ್ಯಾಕ್ ಫಂಗಸ್ ಸೋಂಕು ಇತ್ತು. ಹೆಚ್ಚಾಗಿ ಡಯಾಬಿಟಿಸ್ ಇರುವವರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಿವೆ. ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಸ್ಥಿರವಾಗುತ್ತಿದೆ. ಪಾಸಿಟಿವಿಟಿ ಪ್ರಮಾಣ, ಸಕ್ರಿಯ ಕೇಸ್ ಸಂಖ್ಯೆ ಕುಸಿತವಾಗುತ್ತಿದೆ. ಯಾವುದೇ ರಾಜ್ಯಕ್ಕೆ ಕೊವಿಡ್ ಲಸಿಕೆ ಕೊರತೆಯಾದರೆ ತುರ್ತಾಗಿ ಪೂರೈಸುತ್ತೇವೆ ಎಂದ ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್, ಕೊವಿಡ್ ಚಿಕಿತ್ಸೆ ವೇಳೆ ಅನಗತ್ಯವಾಗಿ ಸ್ಟಿರಾಯ್ಡ್ ಅನ್ನು ಬಳಸಬಾರದು ಎಂದು ಸಹ ವಿವರಿಸಿದರು.
ಇದನ್ನೂ ಓದಿ: Radhika Apte: ಕೊವಿಡ್ ಲಸಿಕೆ ಪಡೆದ ನಟಿ ರಾಧಿಕಾ ಆಪ್ಟೆ; ಸುತ್ತಿಬಳಸಿ ಕಾಲೆಳೆದ ನಟ ವಿಜಯ್ ವರ್ಮಾ
ಜೊಮ್ಯಾಟೊದ 1.5 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ಕೊವಿಡ್ ಲಸಿಕೆ ಉಚಿತ; ಸಿಇಒ ದೀಪಿಂದರ್ ಗೋಯಲ್ ಘೋಷಣೆ
(Covid fetality rate low in Children says VK Paul)
Published On - 5:33 pm, Sat, 22 May 21