ದಯವಿಟ್ಟು ಜೀವಂತ ಕೋಳಿಗಳಿಗೆ ಮುತ್ತು ಕೊಡಬೇಡಿ: ಅಮೆರಿಕ ಆರೋಗ್ಯ ಸಂಸ್ಥೆ
ಈ ಬ್ಯಾಕ್ಟೀರಿಯಾ ಜ್ವರ, ಕಾಮಾಲೆ, ಹೊಟ್ಟೆನೋವು ಮತ್ತು ವಾಂತಿಯನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಪ್ರಾಣಕ್ಕೂ ಅಪಾಯವಾಗುವ ಸಂಭವವಿದೆ ಎಂದು ಸಂಸ್ಥೆ ತಿಳಿಸಿದೆ. ಅಮೆರಿಕದಲ್ಲಿ ಪ್ರತಿವರ್ಷವೂ ಸುಮಾರು 420 ಜನರು ಇದರಿಂದಲೇ ಅಸು ನೀಗಿದ್ದಾರೆ.
ವಾಷಿಂಗ್ಟನ್ ಡಿ.ಸಿ: ಇಡೀ ವಿಶ್ವವೇ ಕೊವಿಡ್ ಬಗ್ಗೆ ತಲೆಕೆಡಿಸಿಕೊಂಡಿದ್ದರೆ ಸದ್ಯ ಅಮೆರಿಕಾಕ್ಕೆ ಸಾಲ್ಮೋನಿಯಾ ಬ್ಯಾಕ್ಟಿರಿಯಾ ಸಮಸ್ಯೆ ತಂದೊಡ್ಡಿದೆ. ಸಾಲ್ಮೋನಿಯಾ ಬ್ಯಾಕ್ಟಿರಿಯಾ ಹರಡದಿರಲು ಜೀವಂತ ಕೋಳಿಗಳಿಗೆ ಮುತ್ತು ನೀಡದಿರುವಂತೆ ಅಮೆರಿಕ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್ ಅಮೆರಿಕಾದ ನಾಗರಿಕರಲ್ಲಿ ಮನವಿ ಮಾಡಿದೆ.
ಅಮೆರಿಕ ಸಂಯುಕ್ತ ಸಂಸ್ಥಾನದ 43 ರಾಜ್ಯಗಳಲ್ಲಿ ಸಾಲ್ಮೋನಿಯಾ ಬಾಕ್ಟಿರಿಯಾದಿಂದ ಉಂಟಾದ ಆರೋಗ್ಯ ಸಮಸ್ಯೆಗಳು ಸುಮಾರು 143 ಜನರಲ್ಲಿ ಕಾಣಿಸಿಕೊಂಡಿದ್ದು, ಇನ್ನೂ ಹೆಚ್ಚಿನ ಜನರಿಗೆ ಈ ರೋಗ ಹರಡದಂತೆ ತಡೆಯುವತ್ತ ಅಮೆರಿಕದ ಆರೋಗ್ಯ ಇಲಾಖೆ ಗಮನಹರಿಸಿದೆ. ಪೌಲ್ಟ್ರಿಗಳಲ್ಲಿ ಸಾಕಿದ ಕೋಳಿಗಳ ಮೂಲಕ ಹರಡುತ್ತಿರುವ ಈ ರೋಗ ಹರಡುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ಮುಂಜಾಗೃತೆ ವಹಿಸಿರುವ ಅಮೆರಿಕ ಆರೋಗ್ಯ ಇಲಾಖೆ ಯಾವುದೇ ಕಾರಣಕ್ಕೂ ಕೋಳಿಯೂ ಸೇರಿದಂತೆ ಜೀವಂತ ಹಕ್ಕಿಗಳನ್ನು ಸ್ಪರ್ಷಿಸಬೇಡಿ. ಅಲ್ಲದೇ ಅವುಗಳಿಗೆ ಮುತ್ತು ಕೊಡಬೇಡಿ ಎಂದು ಎಚ್ಚರಿಕೆಯನ್ನೂ ನೀಡಿದೆ.
ಸಾಕಾಣಿಕಾ ಕೇಂದ್ರಗಳಲ್ಲಿ ಸಾಕಿರುವ ಕೋಳಿ ಅಥವಾ ಬಾತುಕೋಳಿಗಳು ಸ್ವಚ್ಛವಾಗಿಯೇ ಕಾಣಿಸುತ್ತವೆ. ಆದರೆ ಅವುಗಳು ಸಾಲ್ಮೋನಿಯಾ ಬ್ಯಾಕ್ಟಿರಿಯಾ ಹೊಂದಿರಬಹುದು. ಅತ್ಯಂತ ಆರೋಗ್ಯವಾಗಿದ್ದಂತೆಯೇ ಅನಿಸಿದರೂ ಸಹ ಮನುಷ್ಯರಲ್ಲಿ ಆರೋಗ್ಯ ಸಮಸ್ಯೆ ತಂದೊಡ್ಡಲು ಕಾರಣವಾಗಬಹುದು ಎಂದು ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್ ತಿಳಿಸಿದೆ.
ಈ ಬ್ಯಾಕ್ಟೀರಿಯಾ ಜ್ವರ, ಕಾಮಾಲೆ, ಹೊಟ್ಟೆನೋವು ಮತ್ತು ವಾಂತಿಯನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಪ್ರಾಣಕ್ಕೂ ಅಪಾಯವಾಗುವ ಸಂಭವವಿದೆ ಎಂದು ಸಂಸ್ಥೆ ತಿಳಿಸಿದೆ. ಅಮೆರಿಕದಲ್ಲಿ ಪ್ರತಿವರ್ಷವೂ ಸುಮಾರು 420 ಜನರು ಇದರಿಂದಲೇ ಅಸು ನೀಗಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ 18ವರ್ಷ ಮೇಲ್ಪಟ್ಟವರಿಗೆ ಇಂದಿನಿಂದ ಇಲ್ಲ ಕೊವಿಡ್ 19 ಲಸಿಕೆ; 24ಗಂಟೆಯಲ್ಲಿ ವಿದೇಶದಿಂದ ತರಿಸಿಕೊಡಿ ಎಂದ ಸಿಎಂ
ದೇಶದಲ್ಲಿ ಕೊವಿಡ್ ಪಾಸಿಟಿವಿಟಿ ದರ ಶೇ.12.45ಕ್ಕೆ ಕುಸಿತ: ಲವ್ ಅಗರ್ವಾಲ್ Dont kiss or snuggle the bird says US Centers For Disease Control and Prevention warns about Salmonella)