IPL 2025: ಸುಮ್ಮನಿದ್ದ ಪೂರನ್ನ ಕೆಣಕಿ ಇಂಗು ತಿಂದ ಮಂಗನಂತಾದ ಸಿರಾಜ್; ವಿಡಿಯೋ ನೋಡಿ
Nicholas Pooran punishes Mohammed Siraj: ಲಕ್ನೋ ಸೂಪರ್ ಜೈಂಟ್ಸ್ ಪರ ನಿಕೋಲಸ್ ಪೂರನ್ ಗುಜರಾತ್ ಟೈಟಾನ್ಸ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 27 ಎಸೆತಗಳಲ್ಲಿ 56 ರನ್ ಗಳಿಸಿದ ಪೂರನ್ 4 ಬೌಂಡರಿ ಮತ್ತು 5 ಸಿಕ್ಸರ್ ಗಳನ್ನು ಬಾರಿಸಿದರು. ಮೊಹಮ್ಮದ್ ಸಿರಾಜ್ ಜೊತೆಗಿನ ಮಾತಿನ ಚಕಮಕಿಯ ನಂತರ ಪೂರನ್ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಸಿರಾಜ್ ಗೆ ಉತ್ತರಿಸಿದರು.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ಜೈಂಟ್ಸ್ ತಂಡದ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ಅಬ್ಬರದ ಬ್ಯಾಟಿಂಗ್ ಮೂಲಕ ಅದ್ಭುತ ಅರ್ಧಶತಕ ಬಾರಿಸಿದರು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪೂರನ್, ಅಂತಿಮವಾಗಿ 27 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಹಿತ 56 ರನ್ಗಳ ಇನ್ನಿಂಗ್ಸ್ ಆಡಿದರು. ಇದೇ ವೇಳೆ, ಪೂರನ್ ಹಾಗೂ ಗುಜರಾತ್ ವೇಗಿ ಮೊಹಮ್ಮದ್ ಸಿರಾಜ್ ನಡುವೆ ಕ್ರೀಸ್ನಲ್ಲಿಯೇ ದೃಷ್ಟಿಯುದ್ದ ನಡೆಯಿತು.
ವಾಸ್ತವವಾಗಿ ಮೊಹಮ್ಮದ್ ಸಿರಾಜ್ ತನ್ನ ಖೋಟಾದ ಕೊನೆಯ ಓವರ್‌ನಲ್ಲಿ ಸ್ಟ್ರೈಕ್ನಲ್ಲಿದ್ದ ಪೂರನ್ಗೆ ಬೌನ್ಸರ್ ಎಸೆದರು. ಈ ಎಸೆತವನ್ನು ದಂಡಿಸುವಲ್ಲಿ ಪೂರನ್ ವಿಫಲರಾದರು. ಈ ವೇಳೆ ಸಿರಾಜ್, ಪೂರನ್ಗೆ ಏನೋ ಹೇಳಿದರು. ಆ ಸಮಯದಲ್ಲಿ ಪೂರನ್ ಯಾವುದಕ್ಕೂ ಉತ್ತರ ಕೊಡದೆ ಸುಮ್ಮನಾದರು. ಆದರೆ ಮುಂದಿನ ಎಸೆತದಲ್ಲೇ ಸಿರಾಜ್ಗೆ ತಕ್ಕ ಉತ್ತರ ನೀಡಿದ ಪೂರನ್, ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಇತ್ತ ಪೂರನ್ರನ್ನು ಕೆಣಕಿ ಬೌಂಡರಿ, ಸಿಕ್ಸರ್‌ಗಳ ಒದೆ ತಿಂದ ಸಿರಾಜ್ ಈ ಪಂದ್ಯದಲ್ಲಿ ಯಾವುದೇ ವಿಕೆಟ್ ಇಲ್ಲದೆ ತಮ್ಮ ಓವರ್ ಖೋಟಾವನ್ನು ಮುಗಿಸಿದರು.
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ

