ಇದು ಬರೀ ಸಿನಿಮಾ ಹಾಡಲ್ಲ, ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
‘45’ ಸಿನಿಮಾದ ‘ಶಿವಂ ಶಿವಂ ಸನಾತನಂ’ ಹಾಡಿಗೆ ವಿಜಯ್ ಪ್ರಕಾಶ್ ಅವರು ಧ್ವನಿ ನೀಡಿದ್ದಾರೆ. ಈ ಹಾಡು ಅದ್ದೂರಿಯಾಗಿ ಬಿಡುಗಡೆ ಆಗಿದೆ. ಸಾಂಗ್ ರಿಲೀಸ್ ವೇದಿಕೆಯಲ್ಲಿ ವಿಜಯ್ ಪ್ರಕಾಶ್ ಅವರು ಮಾತನಾಡಿದರು. ಸಿನಿಮಾದ ವಿಶೇಷತೆ ಮತ್ತು ಹಾಡಿನ ವಿಶೇಷತೆ ಏನು ಎಂಬುದನ್ನು ಅವರು ವಿವರಿಸಿದ್ದಾರೆ.
ಅರ್ಜುನ್ ಜನ್ಯ ನಿರ್ದೇಶನ ಮಾಡಿರುವ ‘45’ ಚಿತ್ರದ ‘ಶಿವಂ ಶಿವಂ ಸನಾತನಂ..’ (Shivam Shivam Sanaatanam) ಗೀತೆಗೆ ಗಾಯಕ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ. ಈ ಹಾಡು ಇಂದು (ಮೇ 22) ಬಿಡುಗಡೆ ಆಗಿದೆ. ಸಾಂಗ್ ರಿಲೀಸ್ ಕಾರ್ಯಕ್ರಮದ ವೇದಿಕೆಯಲ್ಲಿ ವಿಜಯ್ ಪ್ರಕಾಶ್ ಮಾತನಾಡಿದರು. ಸಿನಿಮಾ ಮತ್ತು ಹಾಡಿನ ವಿಶೇಷತೆ ಏನು ಎಂಬುದನ್ನು ಅವರು ವಿವರಿಸಿದರು. ‘ಇಂಥ ಹಾಡುಗಳನ್ನು ಹಾಡಲು ಒಂದು ಯೋಗ ಇರಬೇಕು. ಯಾಕೆಂದರೆ ಇದು ಬರೀ ಸಿನಿಮಾ ಹಾಡಲ್ಲ. ಇದು ಆತ್ಮದ ಹಾಡು, ಜೀವನದ ಹಾಡು. ಈ ರೀತಿಯ ಹಾಡುಗಳನ್ನು ಯಾರೂ ಕೂಡ ಕೇವಲ ಮನರಂಜನೆಗಾಗಿ ಕೇಳಲ್ಲ. ಆತ್ಮರಂಜನೆಗಾಗಿ ಕೇಳುತ್ತಾರೆ. ಅದರಿಂದ ನೆಮ್ಮದಿ ಪಡೆಯುತ್ತಾರೆ’ ಎಂದು ವಿಜಯ್ ಪ್ರಕಾಶ್ (Singer Vijay Prakash) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.