ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿವೆ 3 ಸಾವಿರ ಜಿಂಗಲ್ಸ್: ನಿಮ್ಮಿಷ್ಟದ್ದು ಯಾವುದು?
Vijay Prakash Birthday: ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಲವು ಭಾಷೆಗಳಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ. ಆದರೆ ಅವರು ಮೊದಲು ಸಿನಿಮಾ ಹಾಡುಗಳ ಗಾಯಕನಾಗಿ ಅಲ್ಲದೆ ಜಿಂಗಲ್ ಗಾಯಕನಾಗಿ ಗುರುತಿಸಿಕೊಂಡಿದ್ದರು. ಸುಮಾರು 3000 ಜಿಂಗಲ್ಗಳನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಇವುಗಳಲ್ಲಿ ನಿಮ್ಮ ಮೆಚ್ಚಿನ ಜಿಂಗಲ್ ಯಾವುದು?

ವಿಜಯ್ ಪ್ರಕಾಶ್ ಅವರಿಗೆ ಇಂದು (ಫೆಬ್ರವರಿ 21) ಜನ್ಮದಿನ. ಎಲ್ಲರೂ ನಟಿಗೆ ಶುಭ ಕೋರುತ್ತಿದ್ದಾರೆ. ಅವರು ಗಾಯಕನಾಗಿ ಎಲ್ಲರಿಗೂ ಇಷ್ಟ. ಅವರು ಹಾಡಿದ ಅನೇಕ ಹಾಡುಗಳು ಈಗಲೂ ಅನೇಕರಿಗೆ ಇಷ್ಟ. ಕನ್ನಡಿಗರ ಹೃದಯದಲ್ಲಿ ಅವರಿಗೆ ವಿಶೇಷ ಸ್ಥಾನ ಇದೆ. ಅವರು ಹಾಡಿದ ‘ಗೊಂಬೇ ಹೇಳುತೈತೆ..’ ಅನೇಕರ ಫೇವರಿಟ್ ಎನಿಸಿಕೊಂಡರು. ವಿಜಯ್ ಪ್ರಕಾಶ್ ಅವರು ಆಗಾಗ ಕಾನ್ಸರ್ಟ್ಗಳನ್ನು ಕೂಡ ಮಾಡುತ್ತಾರೆ. ಇದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಈ ಮೊದಲು ಅವರ ಧ್ವನಿ ನೀಡಿದ್ದ ಸಾಕಷ್ಟು ಜಿಂಗಲ್ಸ್ಗಳು ಈಗಲೂ ಗಮನ ಸೆಳೆಯುತ್ತಿವೆ. ಆ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ ಕೇಳಿ.
ವಿಜಯ್ ಪ್ರಕಾಶ್ ಅವರು ಗಾಯಕನಾಗಿ ಮೊದಲು ಗುರುತಿಸಿಕೊಂಡಿದ್ದಲ್ಲ. ಅವರು ಗುರುತಿಸಿಕೊಂಡಿದ್ದು ಜಿಂಗಲ್ಸ್ಗಳಿಂದ. ಜಾಹೀರಾತುಗಳಿಗೆ ಅವರು ಧ್ವನಿ ಆಗುತ್ತಿದ್ದರು. ಅವರು ತಮ್ಮ ವೃತ್ತಿ ಜೀವನದಲ್ಲಿ 3000 ಸಾವಿರಕ್ಕೂ ಅಧಿಕ ಜಿಂಗಲ್ಸ್ಗೆ ಧ್ವನಿ ಆಗಿದ್ದಾರೆ. ಅದರಲ್ಲೂ ಒಂದು ವಿಶೇಷ ಜಿಂಗಲ್ಸ್ ಎಲ್ಲರ ನೆನಪಿನಲ್ಲಿ ಇರುವಂಥದ್ದು.
ಸೆಂಟರ್ ಫ್ರೆಶ್ ಜಾಹೀರಾತು ಹೆಚ್ಚು ಗಮನ ಸೆಳೆದಿದೆ. ಓರ್ವ ತಬಲ ಬಾರಿಸುತ್ತಾ ಇರುತ್ತಾನೆ. ಮತ್ತೋರ್ವ ಹಾಡುತ್ತಾನೆ. ಈ ಹಾಡನ್ನು ಹಾಡುವಾಗ ಸೆಂಟರ್ಫ್ರೆಶ್ ಹಾಕಿಕೊಳ್ಳುವ ವ್ಯಕ್ತಿಯ ನಾಲಿಗೆ ಸುಲಲಿತವಾಗಿ ನುಲಿಯುತ್ತದೆ, ಈ ಹಾಡನ್ನು ಹಾಡಿದ್ದು ವಿಜಯ್ ಪ್ರಕಾಶ್ ಅನ್ನೋದು ಅನೇಕರಿಗೆ ಗೊತ್ತಿಲ್ಲ. ಈ ಬಗ್ಗೆ ಇತ್ತೀಚೆಗೆ ವಿಜಯ್ ಪ್ರಕಾಶ್ ಹೇಳಿದ್ದಾರೆ.
ಇದನ್ನೂ ಓದಿ:ತಾಯಿ ಮಡಿಲಲ್ಲಿ ಪುಟ್ಟ ಮಗುವಂತೆ ಸಮಯ ಕಳೆದ ವಿಜಯ್ ಪ್ರಕಾಶ್
ಪೆಪ್ಸಿ ಜಾಹೀರಾತಿನಲ್ಲಿ ಬರುವ ‘ಯೇ ದಿಲ್ ಮಾಂಗೆ ಮೋರ್’ ವಿಜಯ್ ಪ್ರಕಾಶ್ ಹಾಡಿದ್ದು. 1999 ಅಲ್ಲಿ ಇದು ಬಂದಿತ್ತು. ಸೆಂಟರ್ಫ್ರೆಶ್ನ ‘ಮಗಮಸ..’ ವಿಜಯ್ ಪ್ರಕಾಶ್ ಹಾಡಿದ್ದರು. 3000 ಜಾಹೀರಾತು ಜಿಂಗಲ್ಸ್ನ ಅವರು ಮಾಡಿದ್ದರು. ಐಸಿಐಸಿಐ ಜಾಹೀರಾತನ್ನು ಅವರೇ ಮಾಡಿದ್ದರು. ಮೆಕ್ಡೊನಾಲ್ಡ್ಸ್ ಮೊದಲು ಬಂದಾಗ ಅವರೇ ಧ್ವನಿ ಆಗಿದ್ದರು. ಡಾಮಿನೋಸ್ ಪಿಜ್ಜಾ, ಐಸಿಐಸಿಐ ಬ್ಯಾಂಕ್ನ ‘ಹಂ ಹೇ ನಾ..’ ಅವರೇ ಹಾಡಿದ್ದರು.
ವಿಜಯ್ ಪ್ರಕಾಶ್ ಅವರು ಕನ್ನಡದಲ್ಲಿ ಹಲವು ಹಾಡುಗಳನ್ನು ಹೇಳಿದ್ದಾರೆ. ಹಲವು ಹಾಡುಗಳು ಸೂಪರ್ ಹಿಟ್ ಆಗಿವೆ. ‘ಬೊಂಬೆ ಹೇಳುತೈತೆ’ ಹಾಡನ್ನು ವಿಜಯ್ ಪ್ರಕಾಶ್ ಅವರೇ ಹಾಡಿದ್ದರು. ಅವರ ಧ್ವನಿಗೆ ಮರಳುಗಾದವರೇ ಇಲ್ಲ ಎಂದರೂ ತಪ್ಪಾಗಲಾರದು. ಅವರಿಗೆ ಕನ್ನಡದಲ್ಲಿ ಸಖತ್ ಬೇಡಿಕೆ ಇದೆ. ಯಾವುದೇ ಕಾನ್ಸರ್ಟ್ ನಡೆಸಿದರೂ ಅವರು ‘ಬೊಂಬೆ ಹೇಳುತೈತೆ’ ಹಾಡನ್ನು ಹಾಡುತ್ತಾರೆ. ಸದ್ಯ ‘ಸರಿಗಮಪ’ ವೇದಿಕೆಯಲ್ಲಿ ಜಡ್ಜ್ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:50 am, Fri, 21 February 25