ಅನಾರೋಗ್ಯ, ಸಿನಿಮಾ ನಿರ್ದೇಶಕ ಎಸ್ ಉಮೇಶ್ ನಿಧನ
Movie Director S Umesh: ‘ಅವನೇ ನನ್ನ ಗಂಡ’, ‘ನನಗೂ ಹೆಂಡತಿ ಬೇಕು’, ‘ತುಂಬಿದ ಮನೆ’, ‘ರಾಜ ಕೆಂಪು ರೊಜ’ ಇನ್ನೂ ಕೆಲವು ಸಿನಿಮಾಗಳಲ್ಲಿ ನಿರ್ದೇಶಿಸಿದ್ದ ಎಸ್ ಉಮೇಶ್ ಅವರು ಇಂದು (ಫೆಬ್ರವರಿ 21) ನಿಧನ ಹೊಂದಿದ್ದಾರೆ. ಕಳೆದ ಕೆಲ ವರ್ಷಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಅವರನ್ನು ಕಾಡುತ್ತಿತ್ತು.

‘ಅವನೇ ನನ್ನ ಗಂಡ’, ‘ನನಗೂ ಹೆಂಡತಿ ಬೇಕು’, ‘ತುಂಬಿದ ಮನೆ’, ‘ರಾಜ ಕೆಂಪು ರೊಜ’ ಇನ್ನೂ ಕೆಲವು ಸಿನಿಮಾಗಳಲ್ಲಿ ನಿರ್ದೇಶಿಸಿದ್ದ ಎಸ್ ಉಮೇಶ್ ಅವರು ಇಂದು (ಫೆಬ್ರವರಿ 21) ನಿಧನ ಹೊಂದಿದ್ದಾರೆ. ಎಸ್ ಉಮೇಶ್ ಅವರು ಕಳೆದ ಕೆಲ ವರ್ಷಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಎಸ್ ಉಮೇಶ್ ಅವರ ಅಂತ್ಯಕ್ರಿಯೆಯನ್ನು ಇಂದು ಬನಶಂಕರಿಯ ಚಿತಾಗಾರದಲ್ಲಿ ನಡೆಸಲಾಗುತ್ತದೆ ಎಂದು ಕುಟುಂಬದವರು ಮಾಹಿತಿ ಹಂಚಿಕೊಂಡಿದ್ದಾರೆ.
ಎಸ್ ಉಮೇಶ್ ಅವರು ಕಳೆದ ಕೆಲ ವರ್ಷಗಳಿಂದಲೂ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು. ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದ ಎಸ್ ಉಮೇಶ್ ಅವರು 2021 ರಲ್ಲಿ ತಮಗೆ ಆರ್ಥಿಕ ಸಹಾಯದ ಅವಶ್ಯಕತೆ ಇದೆಯೆಂದು ಮನವಿ ಮಾಡಿದ್ದರು. ವಿಡಿಯೋ ಮೂಲಕ ತಮ್ಮ ನೋವನ್ನು ಹೇಳಿಕೊಂಡಿದ್ದ ಉಮೇಶ್, ಸಹಾಯಕ್ಕಾಗಿ ಎಲ್ಲರ ಬಳಿ ಮನವಿ ಮಾಡಿಕೊಂಡಿದ್ದರು. ‘ಕಳೆದ ವರ್ಷ ಕೊರೊನಾ ಸಮಯದಲ್ಲಿ ನನಗೆ ಒಂದು ಕಿಡ್ನಿ ಸಮಸ್ಯೆ ಆಯ್ತು. ಎಡ ಭಾಗದ ಕಿಡ್ನಿ ಸಂಪೂರ್ಣ ವಿಫಲವಾಗಿದೆ. ಡಯಾಲಿಸಿಸ್ ಇಲ್ಲದೇ ಕೇವಲ ಮೆಡಿಸಿನ್ನಲ್ಲೇ ವೈದ್ಯರು ನನ್ನನ್ನು ಕಾಪಾಡಿದ್ದಾರೆ. ಡಯಾಲಿಸಿಸ್ ಶುರುವಾದರೆ ನನ್ನ ಪರಿಸ್ಥಿತಿ ಕಷ್ಟ ಆಗುತ್ತದೆ. ಈಗ ಕೆಲಸ ಕೂಡ ಇಲ್ಲ. ನನ್ನ ಮಗ ಎಸ್ಎಸ್ಎಲ್ಸಿ ಓದುತ್ತಿದ್ದಾನೆ. ಅವನ ಶಾಲೆಯ ಫೀಸ್ ಕಟ್ಟಲು ಸಾಧ್ಯವಾಗಿಲ್ಲ. ಯಾರಾದರೂ ದಾನಿಗಳು ನನಗೆ ಸಹಾಯ ಮಾಡುವುದಾದರೆ ನಾನು ಅದನ್ನು ಸ್ವೀಕರಿಸುತ್ತೇನೆ’ ಎಂದು ಉಮೇಶ್ ಅವರು ಕೋರಿದ್ದರು.
ಇದನ್ನೂ ಓದಿ:ಭೀಕರ ರಸ್ತೆ ಅಪಘಾತ; ಖ್ಯಾತ ಕಿರುತೆರೆ ನಟ ನಿಧನ, ಮೂವರ ಸ್ಥಿತಿ ಗಂಭೀರ
ಆ ಸಮಯದಲ್ಲಿ ಲಹರಿ ಸಂಸ್ಥೆ ಎಸ್ ಉಮೇಶ್ ಅವರ ಚಿಕಿತ್ಸೆಗೆ ನೆರವಾಗಿತ್ತು. ಮನೋಹರ್ ನಾಯ್ಡು, ಲಹರಿ ವೇಣು ಅವರುಗಳು ಉಮೇಶ್ ಅವರಿಗೆ ಒಂದು ಲಕ್ಷ ರೂಪಾಯಿ ಹಣ ನೀಡಿದ್ದರು. ‘ಅವಳೇ ನನ್ನ ಹೆಂಡ್ತಿ’ ಸಿನಿಮಾದ ಸಮಯದಿಂದಲೂ ಉಮೇಶ್ ಹಾಗೂ ಲಹರಿಯ ಮನೋಹರ್ ನಾಯ್ಡು ಜೊತೆಗೆ ಸಂಪರ್ಕ ಇತ್ತಂತೆ. ಹಾಗಾಗಿ ಲಹರಿ ಸಂಸ್ಥೆಯವರು ಉಮೇಶ್ಗೆ ಆರ್ಥಿಕ ಸಹಾಯ ಮಾಡಿದ್ದರು. ಚಿಕಿತ್ಸೆಗಳ ಬಳಿಕ ಇದೀಗ ಉಮೇಶ್ ಅವರು ನಿಧನ ಹೊಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ