ನಿರ್ದೇಶಕನಾಗಬೇಕಿದ್ದ ಸುದೀಪ್ ಅವರು ಹೀರೋ ಆಗಿದ್ದು ಹೇಗೆ?
Kichcha Sudeep: ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಸ್ಟಾರ್ ನಟ ಮಾತ್ರವಲ್ಲದೆ ಸ್ಟಾರ್ ಪ್ಯಾನ್ ಇಂಡಿಯಾ ನಟರೂ ಸಹ ಹೌದು. ಆದರೆ ಸುದೀಪ್ಗೆ ನಟನೆ ಇಷ್ಟವಿರಲಿಲ್ಲ, ಅವರಿಗೆ ತಾವೊಬ್ಬ ಒಳ್ಳೆಯ ಸಿನಿಮಾ ನಿರ್ದೇಶಕ ಆಗಬೇಕು ಎಂಬ ಆಸೆಯಿತ್ತು. ನಿರ್ದೇಶಕನಾಗಬೇಕು ಎಂದುಕೊಂಡಿದ್ದ ಸುದೀಪ್ ನಟನಾಗಿದ್ದು ಹೇಗೆ?

ಸುದೀಪ್ ಅವರು ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗಮನ ಸೆಳೆದಿದ್ದಾರೆ. ಅವರು ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಮ್ಯಾಕ್ಸ್’ ಸಿನಿಮಾ ಯಶಸ್ಸು ಕಂಡಿದೆ. ಅವರು ಹೀರೋ ಆಗೋಕೆ ಕಾರಣ ಆಗಿದ್ದು ಉಪೇಂದ್ರ ಎಂಬ ವಿಚಾರ ನಿಮಗೆ ಗೊತ್ತೇ? ಆ ಬಗ್ಗೆ ನಾವು ಹೇಳುತ್ತಿದ್ದೇವೆ ಕೇಳಿ. ಈ ವಿಚಾರವನ್ನು ಉಪೇಂದ್ರ ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಅವರು ಹೀರೋ ಆಗಿ ಮಿಂಚುತ್ತಿದ್ದಾರೆ. ಆದರೆ, ಮೊದಲು ಅವರಲ್ಲಿ ಆ ರೀತಿಯ ಆಸೆಗಳೇ ಇರಲಿಲ್ಲ. ಅವರು ನಿರ್ದೇಶಕರಾಗಬೇಕು ಎಂದುಕೊಂಡಿದ್ದರು. ಇದನ್ನು ಉಪೇಂದ್ರ ಅವರು ಒಮ್ಮೆ ರಿವೀಲ್ ಮಾಡಿದ್ದರು. ಸುದೀಪ್ ಚಿತ್ರರಂಗಕ್ಕೆ ಬರುವಾಗ ಉಪೇಂದ್ರ ನಿರ್ದೇಶನದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಈ ಕಾರಣಕ್ಕೆ ಉಪೇಂದ್ರ ಬಳಿ ಅವಕಾಶ ಕೇಳಿಕೊಂಡು ಸುದೀಪ್ ಹೋಗಿದ್ದರಂತೆ.
‘ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲು ಅವಕಾಶ ಕೊಡಿ’ ಎಂದು ಉಪೇಂದ್ರ ಬಳಿ ಸುದೀಪ್ ಅವರು ಕೋರಿದ್ದರು. ಅವರ ಎತ್ತರ ಹಾಗೂ ಪರ್ಸನಾಲಿಟಿ ನೋಡಿ ‘ನೀವು ಯಾಕೆ ಡೈರೆಕ್ಟರ್ ಆಗ್ತೀರಾ. ಇಷ್ಟು ಹೈಟ್ ಇದೆ ಹೀರೋ ಆಗಿ’ ಎಂದು ಕಿವಿಮಾತು ಹೇಳಿ ಕಳುಹಿಸಿದ್ದರು. ಈ ಕಿವಿಮಾತು ಕೆಲಸ ಮಾಡಿತ್ತು. ಸುದೀಪ್ ಅವರು ಹೀರೋ ಆದರು.
ಇದನ್ನೂ ಓದಿ:‘ಮಲಗಿದ್ದವನಿಗೆ ಕರೆ ಮಾಡಿ ಹಾಡು ಹೇಳಿಸ್ತಾರೆ’: ಸುದೀಪ್ ಬಗ್ಗೆ ವಿಜಯ್ ಪ್ರಕಾಶ್ ಮಾತು
ಸುದೀಪ್ ಅವರು ಹೀರೋ ಆದ ಹೊರತಾಗಿಯೂ ನಿರ್ದೇಶಕನಾಗಬೇಕು ಎಂಬ ಆಸೆಯನ್ನು ಬಿಟ್ಟಿಲ್ಲ. ಹೀರೋ ಆಗಿ ಯಶಸ್ಸು ಕಂಡ ಬಳಿಕ ಅವರು ಡೈರೆಕ್ಷನ್ಗೆ ಇಳಿದರು. ಡೈರೆಕ್ಷನ್ ಮಾಡಿ ಅವರು ಫೇಮಸ್ ಆದರು. ಹಲವು ಹಿಟ್ ಚಿತ್ರಗಳನ್ನು ಡೈರೆಕ್ಟ್ ಮಾಡಿದ್ದಾರೆ.
ಸದ್ಯ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರದ ಬಳಿಕ ಅವರು ‘ಬಿಲ್ಲ ರಂಗ ಭಾಷ’ ಸಿನಿಮಾಗಳಲ್ಲಿ ಮಾಡುತ್ತಿದ್ದಾರೆ. ಈ ಚಿತ್ರದ ಬಳಿಕ ಅವರು ಒಂದು ಚಿತ್ರವನ್ನು ನಿರ್ದೇಶನ ಕೂಡ ಮಾಬಡೇಕಿದೆ. ಈ ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ ಸುದೀಪ್ ಅವರು ಸಿಸಿಎಲ್ ಪಂದ್ಯಗಳಲ್ಲಿ ಬ್ಯುಸಿ ಇದ್ದಾರೆ. ಅವರು ಒಂದು ಚಿತ್ರವನ್ನು ನಿರ್ದೇಶನ ಮಾಡೋದಾಗಿಯೂ ಘೋಷಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Fri, 21 February 25