IPL 2025: ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಮಿಚೆಲ್ ಮಾರ್ಷ್
Mitchell Marsh century: ಐಪಿಎಲ್ 2025ರಲ್ಲಿ ಪ್ಲೇಆಫ್‌ನಿಂದ ಹೊರಗುಳಿದಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಿಚೆಲ್ ಮಾರ್ಷ್ ಅವರು ಗುಜರಾತ್ ವಿರುದ್ಧ 56 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಇದು ಈ ಸೀಸನ್ನಲ್ಲಿ ಲಕ್ನೋ ಪರ ಮೊದಲ ಶತಕ ಹಾಗೂ ಮಾರ್ಷ್ ಅವರ ಐಪಿಎಲ್ ವೃತ್ತಿಜೀವನದ ಮೊದಲ ಮತ್ತು ಟಿ20 ವೃತ್ತಿಜೀವನದ ಎರಡನೇ ಶತಕವಾಗಿದೆ. ಇದಲ್ಲದೆ, ಅವರು ಈ ಸೀಸನ್ನಲ್ಲಿ ಶತಕ ಬಾರಿಸಿದ ಮೊದಲ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ.
ಐಪಿಎಲ್ 2025 ರಲ್ಲಿ ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿರುವ ಲಕ್ನೋ ಸೂಪರ್ ಜೈಂಟ್ಸ್‌ನ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಮಿಚೆಲ್ ಮಾರ್ಷ್ ಸಿಡಿಲಬ್ಬರದ ಶತಕ ಬಾರಿಸಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಮಾರ್ಷ್ ಕೇವಲ 56 ಎಸೆತಗಳಲ್ಲಿ ಶತಕ ಪೂರೈಸಿದರು. ಅಹಮದಾಬಾದ್‌ನಲ್ಲಿ ಮಾರ್ಷ್ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ, ಈ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದು ಮಾತ್ರವಲ್ಲದೆ, ಇದು ಐಪಿಎಲ್ ವೃತ್ತಿಜೀವನದಲ್ಲಿ ಮಾರ್ಷ್ ಅವರ ಮೊದಲ ಶತಕ ಮತ್ತು ಟಿ20 ವೃತ್ತಿಜೀವನದಲ್ಲಿ ಕೇವಲ ಎರಡನೇ ಶತಕವಾಗಿದೆ.
ಕಳೆದ ಪಂದ್ಯದಲ್ಲಿ ಅದ್ಭುತ ಅರ್ಧಶತಕ ಗಳಿಸಿದ್ದ ಮಿಚೆಲ್ ಮಾರ್ಷ್, ಗುಜರಾತ್ ವಿರುದ್ಧದ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದರು. ಮಾರ್ಷ್ ಕೇವಲ 56 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ ಈ ಶತಕವನ್ನು ಪೂರ್ಣಗೊಳಿಸಿದರು. ಮಾರ್ಷ್ ಅವರ ಸುಮಾರು 16 ವರ್ಷಗಳ ಟಿ20 ವೃತ್ತಿಜೀವನದಲ್ಲಿ ಇದು ಕೇವಲ ಎರಡನೇ ಶತಕವಾಗಿದೆ. ಆದಾಗ್ಯೂ ಮಾರ್ಷ್ ಅವರ ಶತಕ ವಿಶೇಷವಾಗಿದ್ದು, ಈ ಸೀಸನ್ನಲ್ಲಿ 100ರ ಗಡಿ ದಾಟಿದ ಮೊದಲ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ. ಮಾರ್ಷ್ಗೂ ಮೊದಲು, ಐಪಿಎಲ್ 2025 ರಲ್ಲಿ ದಾಖಲಾದ ಎಲ್ಲಾ ಶತಕಗಳನ್ನು ಭಾರತೀಯ ಆಟಗಾರರು ಸಿಡಿಸಿದ್ದಾರೆ. ಇದರಲ್ಲಿ ಕೆಲವು ಅನ್‌ಕ್ಯಾಪ್ಡ್ ಬ್ಯಾಟ್ಸ್‌ಮನ್‌ಗಳು ಸೇರಿದ್ದಾರೆ.

