ಪ್ರಶಸ್ತಿ ನೀಡಬೇಕಿತ್ತೇ ಎನ್ನುವ ಪ್ರಿಯಾಂಕ್ ಖರ್ಗೆ ಪ್ರಾಣ ತೆಗೆಯಬೇಕು ಅಂದುಕೊಂಡಿದ್ದರೇ? ನಾರಾಯಣ ಸ್ವಾಮಿ ಚಲವಾದಿ
ತಾನು ನೇರವಾಗಿ, ಸತ್ಯವನ್ನು ಮುಚ್ಚಿಡದೆ ಮಾತಾಡೋದು ಪ್ರಿಯಾಂಕ್ ಖರ್ಗೆ ಸಹಿಸಲಾಗುತ್ತಿಲ್ಲ, ಅವರು ಜಮೀನನ್ನು ವಾಪಸ್ಸು ನೀಡಿದ ಸಂದರ್ಭ ಬಂದಾಗಿನಿಂದ ತನ್ನ ವಿರುದ್ಧ ಹಲ್ಲು ಮಸೆಯುತ್ತಿದ್ದಾರೆ, ತನ್ನನ್ನು ಮುಗಿಸುವ ಕುತಂತ್ರ ಅವತ್ತಿನಿಂದ ನಡೆಯುತ್ತಿದೆ, ನಿನ್ನೆ ಚಿತ್ತಾಪುರನಲ್ಲಿ ತನ್ನನ್ನು 5 ತಾಸ ತಡೆಹಿಡಿಯಲಾಗಿತ್ತು, ತಾನು ಯಾವುದಕ್ಕೂ ಹೆದರೋನಲ್ಲ, ಬಿಜೆಪಿ ನಾಯಕರೆಲ್ಲ ತನ್ನೊಂದಿಗಿದ್ದಾರೆ ಎಂದು ಚಲವಾದಿ ಹೇಳಿದರು.
ಬೆಂಗಳೂರು, ಮೇ 22: ವಿಧಾನ ಪರಿಷತ್ ವಿಪಕ್ಷ ನಾಯಕ ನಾರಾಯಣಸ್ವಾಮಿ ಚಲವಾದಿಯವರನ್ನು ನಿನ್ನೆ ಚಿತಾಪುರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬೆಂಬಲಿಗರು ಘೇರಾವ್ ಮಾಡಿ ತಡೆಹಿಡಿದದ್ದರ ವಿರುದ್ಧ ಬಿಜೆಪಿ ದೊಡ್ಡ ಹೋರಾಟ ಮಾಡಲು ನಿರ್ಧರಿಸಿದೆ. ಮಾಧ್ಯಮಗಳೊಂದಿಗೆ ಮಾತಾಡಿದ ನಾರಾಯಣ ಸ್ವಾಮಿ, ಮಲ್ಲಿಕಾರ್ಜುನ ಖರ್ಗೆಯವರು ದೇಶದ ಪ್ರಧಾನ ಮಂತ್ರಿಯವರನ್ನು ಸರ್ಪಕ್ಕೆ ಹೋಲಿಸುತ್ತಾರೆ, ಅವರ ಮಗ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರನ್ನು ಚೆಡ್ಡಿಗಳು ಅನ್ನುತ್ತಿರುತ್ತಾರೆ, ಇವರು ಏನು ಬೇಕಾದರೂ ಹೇಳಬಹುದು, ನಾನೊಂದು ಗಾದೆಮಾತನ್ನು ಬಳಸಿದರೆ ಇವರಿಗೆ ಚುಚ್ಚುತ್ತದೆಯೇ ಎಂದರು. ಇವತ್ತು ಬೆಳಗ್ಗೆ ಪ್ರಿಯಾಂಕ್ ಮಾತಾಡಿದ್ದು ಕೇಳಿಸಿಕೊಂಡೆ, ನಮ್ಮನ್ನು ನಾಯಿ ಅಂತ ಹೇಳಿದವರನ್ನು ಪ್ರಶಸ್ತಿ ನೀಡಿ ಗೌರವಿಸಬೇಕಾಗಿತ್ತಾ ಅಂತ ಕೇಳುತ್ತ್ತಾರೆ, ಅಂದರೇನು ನನ್ನ ಪ್ರಾಣ ತೆಗೆಯುವ ಯೋಚನೆ ಅವರಿಗಿತ್ತೇ? ನನಗೆ ಜೀವ ಬೆದರಿಕೆ ಇದೆ, ಹಾಗಾಗಿ ನಾವು ಬಿಜೆಪಿ ನಾಯಕರು ಹೋರಾಟ ನಿಲ್ಲಿಸಲ್ಲ, ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇವೆ, ಗೃಹ ಮಂತ್ರಿಗಳಿಗೆ ನೀಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ಬಣ ಬಡಿದಾಟ ನಡೆದರೆ ನಮ್ಮಲ್ಲಿ ಪಕ್ಷದ ಸಂಘಟನೆಗಾಗಿ: ನಾರಾಯಣಸ್ವಾಮಿ ಚಲವಾದಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ