ಬೆಂಗಳೂರಿನ ಸೆಖೆಗೆ ಬೆದರಿ ಕೆಫೆ ಸೇರುತ್ತಿದ್ದಾರೆ ಟೆಕ್ಕಿಗಳು! ದಿನಕ್ಕೆ 800 ರೂ. ಖರ್ಚು ಮಾಡಿದ್ರೂ ಎಸಿ ಅಂದ್ರೆ ಪ್ರಾಣ!

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸುಡುವ ಬಿಸಿಲು ಮತ್ತು 'ವರ್ಕ್ ಫ್ರಮ್ ಹೋಮ್' (WFH) ಮಾಡುವವರು ಎದುರಿಸುತ್ತಿರುವ ಸವಾಲುಗಳಿಗೂ ಒಂದು ಪರಿಹಾರ ಸಿಕ್ಕಿದೆ. ಇದೀಗ ಎಕ್ಸ್​​ನಲ್ಲಿ ವೈರಲ್ ಆಗಿರುವ ವಿಡಿಯೋದ ಪ್ರಕಾರ, ಮನೆಯಲ್ಲಿ ಕುಳಿತು ಕೆಲಸ ಮಾಡುವ ಉದ್ಯೋಗಿಗಳಿಗೆ ಸೆಖೆ ತಾಳಲಾರದೆ ಈಗ ಹೊಸ ಟ್ರೆಂಡ್ ಶುರುವಾಗಿದೆ. ತಾನು ಮನೆಯಲ್ಲಿ ಸೆಖೆ ತಡೆಯಲಾಗದೆ ಕೆಫೆಗೆ ಹೋಗಿ ಕೆಲಸ ಮಾಡಿದ್ದಾಗಿ ತಿಳಿಸಿದ್ದಾಳೆ.ಈ ರೀತಿಯಲ್ಲಿ ಮಾಡಿದ ಕಾರಣ ಒಂದು ದಿನದ ತಿಂಡಿ, ಊಟ ಮತ್ತು ಕಾಫಿಗೆ ಸುಮಾರು 800 ರೂಪಾಯಿ ಖರ್ಚಾಗಿದೆ.

ಬೆಂಗಳೂರಿನ ಸೆಖೆಗೆ ಬೆದರಿ ಕೆಫೆ ಸೇರುತ್ತಿದ್ದಾರೆ ಟೆಕ್ಕಿಗಳು! ದಿನಕ್ಕೆ 800 ರೂ. ಖರ್ಚು ಮಾಡಿದ್ರೂ ಎಸಿ ಅಂದ್ರೆ ಪ್ರಾಣ!
ವೈರಲ್​​​ ವಿಡಿಯೋ

Updated on: May 12, 2026 | 10:53 PM

ಬೆಂಗಳೂರು, ಮೇ,12: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ವರ್ಷ ಬಿಸಿಲಿನ ತಾಪ ದಾಖಲೆ ಮಟ್ಟದಲ್ಲಿದೆ. ಮನೆಯಲ್ಲಿ ಕುಳಿತು ಕೆಲಸ ಮಾಡುವ ಉದ್ಯೋಗಿಗಳಿಗೆ ಸೆಖೆ ತಾಳಲಾರದೆ ಈಗ ಹೊಸ ಟ್ರೆಂಡ್ ಶುರುವಾಗಿದೆ. ಅದೇ ‘ವರ್ಕ್ ಫ್ರಮ್ ಕೆಫೆ’ (Work From Cafe). ಇತ್ತೀಚೆಗೆ ಬೆಂಗಳೂರಿನ ಯುವತಿಯೊಬ್ಬಳು ಹಂಚಿಕೊಂಡಿರುವ ಕೆಫೆ ಖರ್ಚಿನ ವಿವರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಯುವತಿ, ತಾನು ಮನೆಯಲ್ಲಿ ಸೆಖೆ ತಡೆಯಲಾಗದೆ ಕೆಫೆಗೆ ಹೋಗಿ ಕೆಲಸ ಮಾಡಿದ್ದಾಗಿ ತಿಳಿಸಿದ್ದಾಳೆ.ಈ ರೀತಿಯಲ್ಲಿ ಮಾಡಿದ ಕಾರಣ ಒಂದು ದಿನದ ತಿಂಡಿ, ಊಟ ಮತ್ತು ಕಾಫಿಗೆ ಸುಮಾರು 800 ರೂಪಾಯಿ ಖರ್ಚಾಗಿದೆ. ಇಷ್ಟೊಂದು ಹಣ ಖರ್ಚಾದರೂ ಆಕೆಗೆ ಬೇಸರವಿಲ್ಲ. ಯಾಕೆಂದರೆ, ದಿನವಿಡೀ ಸಿಗುವ ಹವಾನಿಯಂತ್ರಿತ (AC) ವ್ಯವಸ್ಥೆಯೇ ಅತಿದೊಡ್ಡ ಸಮಾಧಾನ ಎಂದು ಆಕೆ ಹೇಳಿಕೊಂಡಿದ್ದಾಳೆ. ಬೆಂಗಳೂರಿನ ಹರ್ಲೀನ್ ಕೆಫೆಯಲ್ಲಿ ಪ್ರತಿದಿನ ಈ ಕೆಲಸ ಮಾಡುತ್ತೇನೆ. ಬೆಳಿಗ್ಗೆ ತಿಂಡಿ, ಊಟ, ಕಾಫಿ ಎಲ್ಲವೂ ಸೇರಿ 700 ರೂ ಆಗುತ್ತದೆ. ದಿನದ ಕೊನೆಯಲ್ಲಿ 800 ರೂ. ಖರ್ಚಾಗುತ್ತದೆ ಎಂದು ಹೇಳಿದ್ದಾಳೆ.

ಇಲ್ಲಿದೆ ನೋಡಿ ವಿಡಿಯೋ:

ಈ ಪೋಸ್ಟ್​​ನಲ್ಲಿ ಯಾವುದೇ ಕಾರಣಕ್ಕೂ ಕೆಲಸ ನಿಲ್ಲಬಾರದು ಎಂದು ಬರೆದುಕೊಂಡಿದ್ದಾಳೆ. ಇನ್ನು ಈ ವಿಡಿಯೋದಲ್ಲಿ ಆಕೆ, ಕೆಲಸ ಮಾಡುವುದನ್ನು ಕಾಫಿ ಮತ್ತು ಆಹಾರವನ್ನು ಆರ್ಡರ್ ಮಾಡುವಾಗ ಮತ್ತು ಹಗಲಿನಲ್ಲಿ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವಾಗ ಶಾಂತವಾದ ಕೆಫೆ ವಾತಾವರಣವನ್ನು ಆನಂದಿಸುವುದನ್ನು ತೋರಿಸಲಾಗಿದೆ. ಈ ವಿಡಿಯೋ ಬೆಂಗಳೂರಿನ ಅನೇಕ ಕೆಲಸ ಮಾಡುವ ವೃತ್ತಿಪರರನ್ನು, ವಿಶೇಷವಾಗಿ ವರ್ಕ್​​ ಫ್ರಮ್​​ ಹೋಂ ಮಾಡುವವರಿಗೆ ಇದೊಂದು ಪರ್ಯಯ ವ್ಯವಸ್ಥೆಯಾಗಿತ್ತು. ಇದು ಕೆಲವರಿಗೆ ಪರಿಸರದ ಬದಲಾವಣೆ, ಉತ್ತಮ ಗಮನ ಮತ್ತು ಸೌಕರ್ಯವನ್ನು ನೀಡುತ್ತವೆ. ಇನ್ನು ಕೆಲವರಿಗೆ, ಪ್ರತಿದಿನ ಕೆಫೆಯಿಂದ ಕೆಲಸ ಮಾಡುವ ವೆಚ್ಚವು ಕಳವಳಕಾರಿಯಾಗಿಯೇ ಉಳಿದಿದೆ.

ಇದನ್ನೂ ಓದಿ: ಮುಂದಿನ 3 ದಿನ ರಾಜ್ಯದ ಈ 8 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆ: ಕರಾವಳಿ ಜನರೇ ಎಚ್ಚರ

ಈ ಪೋಸ್ಟ್ ನೋಡಿದ ಹಲವು ಬೆಂಗಳೂರಿಗರು ತಮಗೂ ಇದೇ ಪರಿಸ್ಥಿತಿ ಎದುರಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. “ಮನೆಯಲ್ಲಿ ಎಸಿ ಹಾಕಿದರೆ ಕರೆಂಟ್ ಬಿಲ್ ಜಾಸ್ತಿ ಬರುತ್ತದೆ, ಅದಕ್ಕಿಂತ ಕೆಫೆ ಉತ್ತಮ” ಎಂದು ಕೆಲವರು ಹೇಳಿದರೆ, “ದಿನಕ್ಕೆ 800 ರೂಪಾಯಿ ಅಂದರೆ ತಿಂಗಳಿಗೆ ದೊಡ್ಡ ಮೊತ್ತವಾಗುತ್ತದೆ, ಇದು ಸಾಮಾನ್ಯರಿಗಲ್ಲ” ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ, ಬೆಂಗಳೂರಿನ ಉದ್ಯೋಗಿಗಳಿಗೆ ಈಗ ‘ಹಸಿವಿಗಿಂತ ಎಸಿ’ ಮುಖ್ಯ ಎನ್ನುವಂತಾಗಿದೆ!

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us