
ಬೆಂಗಳೂರು, ಜೂ.4: “ರಾಜ್ಯದಲ್ಲಿ ಮುಖ್ಯಮಂತ್ರಿಗಳು ಬದಲಾಗಬಹುದು, ಸರ್ಕಾರಗಳು ಬದಲಾಗಬಹುದು. ಆದರೆ ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳ ಹಣೆಬರಹ ಮಾತ್ರ ಎಂದಿಗೂ ಬದಲಾಗುವುದಿಲ್ಲ. ಇದು ಪ್ರಸ್ತುತ ಬೆಂಗಳೂರಿನ ರಸ್ತೆಗಳಲ್ಲಿ ನಿತ್ಯ ನರಕಯಾತನೆ ಅನುಭವಿಸುತ್ತಿರುವ ಸಾರ್ವಜನಿಕರ ತೀವ್ರ ಆಕ್ರೋಶದ ನುಡಿಗಳು. ನಿತ್ಯ ಸಾವಿರಾರು ವಾಹನ ಸವಾರರು, ಉದ್ಯೋಗಿಗಳು ಮತ್ತು ನಾಗರಿಕರು ಸಂಚರಿಸುವ ಪ್ರಮುಖ ರಸ್ತೆಗಳ ಪರಿಸ್ಥಿತಿ ಇಂದು ನಗರದ ರಸ್ತೆಯಂತೆ ಕಾಣುತ್ತಿಲ್ಲ, ಬದಲಿಗೆ ಅದೊಂದು ಸಾಹಸಮಯ ‘ಆಫ್-ರೋಡ್ ಟ್ರ್ಯಾಕ್’ (Off-road track) ನಂತೆ ಮಾರ್ಪಟ್ಟಿದೆ. ಈ ಬಗ್ಗೆ ವಿಡಿಯೋವೊಂದನ್ನು ಕರ್ನಾಟಕ ಪೋರ್ಟ್ಫೋಲಿಯೋ (Karnataka Portfolio) ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ನಗರದ ಪ್ರಮುಖ ರಸ್ತೆಗಳ ಸಂಪೂರ್ಣ ಭಾಗವು ದೈತ್ಯ ಹೊಂಡಗಳು (Craters), ಕಿತ್ತುಹೋದ ಡಾಂಬರು ಮತ್ತು ಜಲ್ಲಿಕಲ್ಲುಗಳಿಂದ ತುಂಬಿಹೋಗಿದೆ. ಇಲ್ಲಿ ವಾಹನ ಚಾಲನೆ ಮಾಡುವುದು ಕೇವಲ ಅಸಮಾಧಾನ ತರುವುದಲ್ಲ, ಬದಲಿಗೆ ದ್ವಿಚಕ್ರ ವಾಹನ ಸವಾರರು, ಸೈಕಲ್ ಸವಾರರು ಹಾಗೂ ಪಾದಚಾರಿಗಳ ಜೀವಕ್ಕೆ ನೇರ ಕುತ್ತು ತರುತ್ತಿದೆ. ಅದರಲ್ಲೂ ವಿಶೇಷವಾಗಿ ಮಳೆ ಬಂದಾಗ ಈ ರಸ್ತೆ ಗುಂಡಿಗಳು ನೀರಿನಿಂದ ಆವೃತವಾಗಿ ಮಾರಣಾಂತಿಕ ಕಂದಕಗಳಾಗಿ ಬದಲಾಗುತ್ತಿವೆ. ಇದರಿಂದಾಗಿ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ವಾಹನಗಳು ಜಖಂಗೊಳ್ಳುತ್ತಿವೆ.
No matter whether the Chief Minister changes or not, the condition of Bengaluru’s roads seems to remain the same. Just look at the state of this road. Thousands of citizens use this stretch every day for their daily commute, yet it has been reduced to what looks more like an… pic.twitter.com/gG9csStBoU
— Karnataka Portfolio (@karnatakaportf) June 4, 2026
ನಾವು ಪ್ರಾಮಾಣಿಕವಾಗಿ ಆದಾಯ ತೆರಿಗೆ, ರಸ್ತೆ ತೆರಿಗೆ , ಇಂಧನ ತೆರಿಗೆ ಸೇರಿದಂತೆ ಹತ್ತಾರು ರೀತಿಯ ಸೆಸ್‌ಗಳನ್ನು ಸರ್ಕಾರಕ್ಕೆ ಪಾವತಿಸುತ್ತಿದ್ದಾರೆ. ಕನಿಷ್ಠ ಪಕ್ಷ ಸುರಕ್ಷಿತವಾದ ಮೂಲಸೌಕರ್ಯ ಮತ್ತು ರಸ್ತೆಗಳನ್ನು ಪಡೆಯುವ ನಿರೀಕ್ಷೆಯಿಂದ ಜನ ತೆರಿಗೆ ಕಟ್ಟುತ್ತಾರೆ. ಆದರೆ, ರಸ್ತೆಗಳ ಈ ನರಕಸದೃಶ ಸ್ಥಿತಿಯನ್ನು ನೋಡಿದರೆ, “ನಾವು ಕಟ್ಟುವ ತೆರಿಗೆ ಹಣವೆಲ್ಲಾ ಎಲ್ಲಿಗೆ ಹೋಗುತ್ತಿದೆ?” ಎಂಬ ಯಕ್ಷಪ್ರಶ್ನೆ ಪ್ರತಿಯೊಬ್ಬ ನಾಗರಿಕನಲ್ಲೂ ಮೂಡುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಇದನ್ನೂ ಓದಿ: ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್ಗೆ ಡಿಕ್ಕಿ: ತಪ್ಪಿದ ಭಾರಿ ಅನಾಹುತ
ಬೆಂಗಳೂರಿನಂತಹ ಅಂತರರಾಷ್ಟ್ರೀಯ ಮಟ್ಟದ ನಗರಕ್ಕೆ ಇಂತಹ ದುಃಸ್ಥಿತಿ ಖಂಡಿತಾ ಶೋಭಿಸುವುದಿಲ್ಲ. ಸುರಕ್ಷಿತ ಹಾಗೂ ಸುಸಜ್ಜಿತ ರಸ್ತೆಗಳು ನಾಗರಿಕರಿಗೆ ನೀಡುವ ಐಷಾರಾಮಿ ಸೌಲಭ್ಯವಲ್ಲ, ಅದು ಪ್ರತಿಯೊಬ್ಬ ತೆರಿಗೆದಾರನ ಕನಿಷ್ಠ ಮೂಲಭೂತ ಹಕ್ಕು ಎಂಬುದನ್ನು ಬಿಬಿಎಂಪಿ (BBMP) ಮತ್ತು ಸರ್ಕಾರ ಅರಿತುಕೊಳ್ಳಬೇಕಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:08 am, Thu, 4 June 26