ಬಿಬಿಎಂಪಿಯಿಂದ ಮತ್ತೊಂದು ಶಾಕ್: ಮನೆ ಕಾಂಪೌಂಡ್​ ಒಳಗಿನ ಪಾರ್ಕಿಂಗ್​ಗೂ ಕಟ್ಟಬೇಕು​ ಶುಲ್ಕ!​

ಇಂದಿನಿಂದ ಲೈಫ್ ದುಬಾರಿಯಾಗಿದೆ. ಹಾಲು, ವಿದ್ಯುತ್​ ದರ ಏರಿಕೆಯಾಗಿದೆ. ಅಲ್ಲದೇ, ಬೆಂಗಳೂರಿನಲ್ಲಿ ಕಸಕ್ಕೂ ತೆರಿಗೆ ಕಟ್ಟಬೇಕಾಗಿದೆ. ಇದೀಗ, ಬಿಬಿಎಂಪಿ ರಾಜಧಾನಿ ಜನರಿಗೆ ಮತ್ತೊಂದು ಶಾಕ್​ ನೀಡಲು ಹೊರಟಿದೆ. ಪಾರ್ಕಿಂಕ್​ ಶುಲ್ಕವನ್ನು ನಿಗದಿಪಡಿಸಲು ತೀರ್ಮಾನಿಸಿದೆ. ವಾಹನ ನಿಲ್ದಾಣದ ಹೆಸರಿನಲ್ಲಿ ಆದಾಯ ಹೆಚ್ಚಿಸಿಕೊಳ್ಳಲು ಬಿಬಿಎಂಪಿ ಯೋಚಿಸಿದೆ.

ಬಿಬಿಎಂಪಿಯಿಂದ ಮತ್ತೊಂದು ಶಾಕ್: ಮನೆ ಕಾಂಪೌಂಡ್​ ಒಳಗಿನ ಪಾರ್ಕಿಂಗ್​ಗೂ ಕಟ್ಟಬೇಕು​ ಶುಲ್ಕ!​
ಬಿಬಿಎಪಿ, ವಾಹನ ನಿಲುಗಡೆ
ವಿವೇಕ ಬಿರಾದಾರ

Updated on: Apr 01, 2025 | 2:54 PM

ಬೆಂಗಳೂರು, ಏಪ್ರಿಲ್​ 01: ಹಾಲು, ವಿದ್ಯುತ್​ ದರವನ್ನು ಸರ್ಕಾರ ಏರಿಕೆ ಮಾಡಿದ್ದು, ಇಂದಿನಿಂದ ಜಾರಿಗೆ ಬಂದಿದೆ. ಈ ಬೆಲೆ ಏರಿಕೆಯಿಂದ ರಾಜ್ಯದ ಜನರು ರೋಸಿ ಹೋಗಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಜನರು ಮತ್ತು ವಿರೋಧ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು, ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಸಕ್ಕೂ ಸುಂಕ ಸಂಗ್ರಹಣೆ ಮಾಡಲು ತೀರ್ಮಾನಿಸಿತ್ತು. ಇದೀಗ, ಗಾಯದ ಮೇಲೆ ಬರೆ ಎಳೆದಂತೆ ಸದ್ದಿಲ್ಲದೆ ಮತ್ತೊಂದು ಸುತ್ತಿನ ತೆರಿಗೆ ಏರಿಕೆಗೆ ಬಿಬಿಎಂಪಿ ಪ್ಲಾನ್​ ಮಡಿದೆ. ವಾಹನ ನಿಲ್ದಾಣದ ಹೆಸರಿನಲ್ಲಿ ಆದಾಯ ಹೆಚ್ಚಿಸಿಕೊಳ್ಳಲು ಬಿಬಿಎಂಪಿ ಯೋಚಿಸಿದೆ. ವಾಹನ ನಿಲ್ದಾಣದ (Parking) ಪ್ರದೇಶವಾರು ಯೂನಿಟ್ ದರ ನಿರ್ಧರಿಸಲು ಕರಡು ಅಧಿಸೂಚನೆಯನ್ನು ಬಿಬಿಎಂಪಿ ಹೊರಡಿಸಿದೆ. ಅಧಿಸೂಚನೆ ಸಂಬಂಧ ಸಾರ್ವಜನಿಕರು ಸಲಹೆ ಮತ್ತು ಅಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.

ಶುಲ್ಕ ಸಂಗ್ರಹ ಯಾವ ರೀತಿ ಮತ್ತು ಎಷ್ಟು?

ನಿಮ್ಮ ಮನೆಯ ಕಾಂಪೌಂಡ್​, ಅಪಾರ್ಟ್‌ಮೆಂಟ್, ಕಮರ್ಷಿಯಲ್ ಕಾಂಪ್ಲೆಕ್ಸ್, ಮಾಲ್ ಸೇರಿದಂತೆ ಎಲ್ಲ ರೀತಿಯ ಕಟ್ಟಡಗಳಿಗೆ ಪಾರ್ಕಿಂಗ್ ದರ ಏರಿಕೆ ಮಾಡಲು ತೀರ್ಮಾನಿಸಿದೆ. ವಸತಿ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 600 ರೂಪಾಯಿ ಪಾರ್ಕಿಂಗ್ ತೆರಿಗೆ (ಆರಂಭಿಕ ದರ) (ಚದರ ಅಡಿಗೆ 2 ರೂ.) ವಸೂಲಿ ಮಾಡಲು ನಿರ್ಧರಿಸಲಾಗಿದೆ. ವಾಣಿಜ್ಯ ಅಥವಾ ವಸತಿಯೇತರ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 1,125 ರೂ. ಪಾರ್ಕಿಂಗ್ ತೆರಿಗೆ (ಆರಂಭಿಕ ದರ) (ಚದರ ಅಡಿಗೆ 3 ರೂ.) ಸಂಗ್ರಹಿಸಲು ಬಿಬಿಎಂಪಿ ನಿರ್ಧರಿಸಿದೆ.

ಮೊದಲೆಲ್ಲ ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಕಮರ್ಷಿಯಲ್ ಇದ್ದರೇ, ಕಮರ್ಷಿಯಲ್ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ವಸತಿ ಇದ್ದರೇ ವಸತಿ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕವನ್ನು ತೋಚಿದಷ್ಟು ವಸೂಲಿ ಮಾಡಲಾಗುತ್ತಿತ್ತು. ಆದರೆ, ಇದೀಗ ಪಾರ್ಕಿಂಗ್​ಗೆ ಚದರ ಅಡಿ ಲೆಕ್ಕದಲ್ಲಿ ಪಾಲಿಕೆ ದರ ನಿಗದಿ ಮಾಡಿದೆ.

ಇದನ್ನೂ ಓದಿ
ನಮ್ಮ ಮೆಟ್ರೋ ಗುಡ್ ನ್ಯೂಸ್: ಐಪಿಎಲ್ ಪ್ರಯುಕ್ತ ಸಂಚಾರ ಸಮಯ ವಿಸ್ತರಣೆ
ಬೆಂಗಳೂರಿನಲ್ಲಿ ಆರ್​ಸಿಬಿ ಪಂದ್ಯ; ಪಾರ್ಕಿಂಗ್ ವಿವರ, ಸಂಚಾರ ಸಲಹೆ ಇಲ್ಲಿದೆ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಕ್ರಮ
ಈ ಸೈಟ್​ನಲ್ಲಿ ಅರ್ಜಿ ಸಲ್ಲಿಸಿದ್ರೆ ಎರಡೇ ದಿನಗಳಲ್ಲಿ ಸಿಗುತ್ತೆ ಇ ಖಾತಾ!

ಕಸಕ್ಕೂ ಕಟ್ಟಬೇಕು ಟ್ಯಾಕ್ಸ್

ಮನೆ, ಅಂಗಡಿ ಮುಂಗಟ್ಟಿನ ಕಸಕ್ಕೂ ತೆರಿಗೆ ಪಾವತಿ ಮಾಡಬೇಕು ಎಂದು ಬೆಂಗಳೂರು ಮಹಾನಗರ ಪಾಲಿಕೆ ಸೂಚಿಸಿದೆ. ಈ ವಿಚಾರವಾಗಿ ಬಿಬಿಎಂಪಿ ಬಜೆಟ್​​​ನಲ್ಲೂ ಘೋಷಣೆ ಮಾಡಲಾಗಿದೆ. ಈ ಮೂಲಕ 600 ಕೋಟಿ ರೂಪಾಯಿ ಆದಾಯ ಸಂಗ್ರಹಕ್ಕೆ ಬಿಬಿಎಂಪಿ ಗುರಿ ಹಾಕಿಕೊಂಡಿದೆ.

ಇದನ್ನೂ ಓದಿ: ಒಂದನಿ ಕಾವೇರಿ ನೀರು ಬರಲ್ಲ, ಆದ್ರೂ ಸಾವಿರಾರು ರುಪಾಯಿ ಬಿಲ್: ಬೆಂಗಳೂರಿನ ಜನ ಕಂಗಾಲ್​!

ಎಷ್ಟಿರಲಿದೆ ಬಿಬಿಎಂಪಿ ಕಸ ತೆರಿಗೆ?

ಅಂಗಡಿಮುಂಗಟ್ಟುಗಳಲ್ಲಿ ಪ್ರತಿ ಕೆಜಿ ಕಸಕ್ಕೆ 12 ರೂಪಾಯಿ ತೆರಿಗೆ ವಸೂಲಿಗೆ ಪಾಲಿಕೆ ಸಜ್ಜಾಗಿದೆ. ಪ್ರತಿ ತಿಂಗಳು ಕಸ ಸಂಗ್ರಹ ಹಾಗೂ ವಿಲೇವಾರಿ ವೆಚ್ಚ ಹೆಚ್ಚಾಗುತ್ತಿದ್ದು, ಈ ಕಾರಣದಿಂದ ತೆರಿಗೆ ವಿಧಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ. ಕಟ್ಟಡದ ವಿಸ್ತೀರ್ಣದ ಆಧಾರತದ ಮೇಲೆ ಕಸದ ಶುಲ್ಕ ನಿಗದಿಪಡಿಸಲಾಗುತ್ತದೆ. ಆಸ್ತಿ ತೆರಿಗೆ ಜೊತೆಯೇ ಕಸ ತೆರಿಗೆಯನ್ನೂ ಪಾಲಿಕೆ ಸಂಗ್ರಹ ಮಾಡಲಿದೆ.

ವರದಿ: ಲಕ್ಷ್ಮೀ ನರಸಿಂಹ್

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

Follow Us