
ಬೆಂಗಳೂರು: ಬೆಂಗಳೂರು ಮೂಲದ ಕ್ಯಾಪಿಟಲ್ಮೈಂಡ್ನ ಸಂಸ್ಥಾಪಕ ಮತ್ತು ಸಿಇಒ ದೀಪಕ್ ಶೆಣೈ ಅವರು ಚಾಟ್ಜಿಪಿಟಿಯನ್ನು ಬಳಸಿಕೊಂಡು ಮಾಡಿದ ಆವಿಷ್ಕಾರವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಎಐ ಚಾಟ್ಬಾಟ್ ದೀಪಕ್ ಶೆಣೈ ಅವರ ಎಂಆರ್ಐ ರಿಪೋರ್ಟ್ನ ವಿಶ್ಲೇಷಣೆ ಮಾಡಿ ಅವರ ಮೊಣಕಾಲಿನ ಸಮಸ್ಯೆಯಿಂದಾಗಿ ಡೀಪ್ ಸ್ಕ್ವಾಟ್ ಮಾಡಬಾರದು ಎಂದು ಯಾವ ರೀತಿ ಎಚ್ಚರಿಕೆ ನೀಡಿತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ಇದು ಇದೀಗ ಆನ್ಲೈನ್ನಲ್ಲಿ ಚರ್ಚೆಯಾಗುತ್ತಿದೆ. ಆರೋಗ್ತ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನವನ್ನು ಯಾವ ರೀತಿ ಬಳಸಬಹುದು ಎಂಬುದನ್ನು ಇದು ಸಾಬೀತುಪಡಿಸಿದೆ.
“ನನ್ನ ಎಂಆರ್ಐ ವರದಿಯ ಚಾಟ್ಜಿಪಿಟಿ ವಿಶ್ಲೇಷಣೆಯಿಂದ ನಾನು ಡೀಪ್ ಸ್ಕ್ವಾಟ್ಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ಇದೀಗ ತಿಳಿದುಬಂದಿದೆ. ನಾನು ಸ್ಕ್ವಾಟ್ಗಳನ್ನು ಮಾಡಲು ತರಬೇತಿ ಪಡೆಯುತ್ತಿದ್ದರಿಂದ ಚಾಟ್ಜಿಪಿಟಿಯ ಈ ಸಲಹೆ ತುಂಬಾ ಆಸಕ್ತಿದಾಯಕವೆನಿಸಿತು” ಎಂದು ದೀಪಕ್ ಶೆಣೈ ಎಕ್ಸ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಶಿವಲಿಂಗದ ಮೇಲೆ ಕಾಲಿಟ್ಟು ರೀಲ್ಸ್ ಮಾಡಿದ ಯುವಕ; ವಿಡಿಯೋ ವೈರಲ್ ಆಗುತ್ತಿದ್ದಂತೆ ಅರೆಸ್ಟ್!
ಕುತೂಹಲಕಾರಿ ಎಕ್ಸ್ ಬಳಕೆದಾರರು “ಈ ರೆಕಮಂಡೇಷನ್ ಏಕೆ ಬಂತು?” ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ದೀಪಕ್, “ನನಗೆ ಮೊಣಕಾಲಿನ ಸಮಸ್ಯೆ ಇತ್ತು. ವೈದ್ಯರು MRI ಮಾಡಿಸಿಕೊಳ್ಳಲು ಸೂಚಿಸಿದರು. ನಾನು ಫೋಟೋಗಳನ್ನು ಹಾಕಿದ್ದೇನೆ. ನನ್ನ ಮೊಣಕಾಲಿನ ಕ್ಯಾಪ್ಗೆ ಹಾನಿಯಾಗಿದೆ. ಅದರ ವಿಶ್ಲೇಷಣೆಯಲ್ಲಿ ಚಾಟ್ಜಿಪಿಟಿ ದೀರ್ಘವಾದ ಸ್ಕ್ವಾಟ್ಗಳನ್ನು ಮಾಡಬಾರದು ಎಂದು ನನಗೆ ಸೂಚಿಸಿದೆ. ನಾನಿನ್ನೂ ವೈದ್ಯರನ್ನು ಭೇಟಿಯಾಗಿಲ್ಲ” ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:56 pm, Sat, 1 February 25