Bengaluru Covid Guidelines: ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ ಮಾಸ್ಕ್​ ಕಡ್ಡಾಯಗೊಳಿಸಿ ಆದೇಶ

| Updated By: Rakesh Nayak Manchi

Updated on: Dec 23, 2022 | 12:14 PM

ಕೋವಿಡ್ ಭೀತಿ ಹಿನ್ನಲೆ ಸರ್ಕಾರದ ಮಾರ್ಗಸೂಚಿಗೂ ಮುನ್ನವೇ ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ ಮಾಸ್ಕ್​ ಕಡ್ಡಾಯಗೊಳಿಸಿ ಆದೇಶಿಸಲಾಗಿದೆ. ಕೊವಿಡ್ ಮಾರ್ಗಸೂಚಿ ಪಾಲಿಸುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ.

Bengaluru Covid Guidelines: ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ ಮಾಸ್ಕ್​ ಕಡ್ಡಾಯಗೊಳಿಸಿ ಆದೇಶ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಕೊರೋನಾ (Covid-19) ಭೀತಿ ಹೆಚ್ಚಾಗುತ್ತಿದ್ದು, ಸರ್ಕಾರ ಮಾರ್ಗಸೂಚಿ (Covid Guidelines) ಹೊರಡಿಸುವ ಮುನ್ನವೇ ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಸಿ ಆದೇಶಿಸಲಾಗಿದೆ. ಬೆಂಗಳೂರು ನಗರದಲ್ಲಿ ಮತ್ತೆ ಕೊರೊನಾ ಹೆಚ್ಚಳ ಭೀತಿ (Covid Scare In Bengaluru) ಹಿನ್ನಲೆ ಕೊವಿಡ್ ಮಾರ್ಗಸೂಚಿ ಪಾಲಿಸುವಂತೆ ಶಾಲೆಗಳಿಗೆ ಖಾಸಗಿ ಶಾಲಾ ಒಕ್ಕೂಟ ಸೂಚನೆ ನೀಡಿದೆ. ಮಾಸ್ಕ್ ಕಡ್ಡಾಯಗೊಳಿಸಿ ಖಾಸಗಿ ಶಿಕ್ಷಣ ಮಂಡಳಿ ಆದೇಶಿಸಿದ್ದು, ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಶಾಲೆಗಳಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡುವುದು ಕಡ್ಡಾಯವಾಗಿದ್ದು, ನೆಗಡಿ, ಕೆಮ್ಮು, ಜ್ವರದಂತಹ ಲಕ್ಷಣ ಕಂಡು ಬಂದರೆ ಕೂಡಲೇ ಕೊರೋನಾ ಸೋಂಕು ತಪಾಸಣೆ ನಡೆಸಬೇಕು ಎಂದು ಸೂಚಿಸಲಾಗಿದೆ.

ಕೊರೋನಾ ಹೆಚ್ಚಳವಾದರೆ ಲಾಕ್​ಡೌನ್ ಮಾಡಲಾಗುತ್ತದೆ. ಇದರಿಂದ ಆರ್ಥಿಕವಾಗಿ ಹೊಡತ ಬೀಳಲಿದೆ. ಈ ಹಿಂದಿನ ಲಾಕ್​ಡೌನ್​ನಿಂದಾಗಿ ಶಿಕ್ಷಣ ಸಂಸ್ಥೆಗಳಿಗೂ ಲಾಕ್​ಡೌನ್ ಆರ್ಥಿಕವಾಗಿ ಹೊಡೆತ ನೀಡಿತ್ತು. ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಕೊರೋನಾ ಕುರಿತು ‌ಶಾಲಾ ಮುಖ್ಯಸ್ಥರಿಗೆ ಮಕ್ಕಳ ಪೋಷಕರು ನಿತ್ಯ ಕರೆ ಮಾಡಿ ಆತಂಕ ತೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂದು ಖಾಸಗಿ ಶಾಲೆ ಆಡಳಿತ ಮಂಡಳಿಗಳ ಜೊತೆ ರುಪ್ಸಾ ಸಂಘಟನೆ ಸಭೆ ನಡೆಸಲು ಮುಂದಾಗಿದೆ.

ಇಂದು ಸಂಜೆ 6 ಗಂಟೆಗೆ ವರ್ಚುವಲ್ ಮೂಲಕ ಸಭೆ ಕರೆಯಲಾಗಿದ್ದು, ವೀಡಿಯೋ ಕಾನ್ಫರೆನ್ಸ್ ಮೂಲಕ ಪದಾಧಿಕಾರಿಗಳ ಸಭೆಯಲ್ಲಿ ಕೊರೋನಾ ಕುರಿತು ಗಂಭೀರವಾಗಿ ಚರ್ಚೆ ನಡೆಸಲಿದ್ದಾರೆ. ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರದ ಬಗ್ಗೆ ಹಾಗೂ ಆನ್​ಲೈನ್ ತರಗತಿ ನಡೆಸುವ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ: ಶಿವನೇ ನನಗೆ ಹುಡುಗಿ ಕರುಣಿಸು… ದೇವರಿಗೆ ಪತ್ರ ಬರೆದು ಹುಂಡಿಗೆ ಹಾಕಿರುವ ಭೂಪ

ಕೊವಿಡ್ ಮಾರ್ಗಸೂಚಿ ಪಾಲಿಸುವಂತೆ ಶಾಲೆಗಳಿಗೆ ಸೂಚನೆ

ಬೆಂಗಳೂರು ನಗರದಲ್ಲಿ ಮತ್ತೆ ಕೊರೊನಾ ಹೆಚ್ಚಳ ಭೀತಿ ಹಿನ್ನಲೆ ಕೊವಿಡ್ ಮಾರ್ಗಸೂಚಿ ಪಾಲಿಸುವಂತೆ ಶಾಲೆಗಳಿಗೆ ಖಾಸಗಿ ಶಾಲಾ ಒಕ್ಕೂಟ ಸೂಚನೆ ನೀಡಿದೆ. ಶಾಲೆಗಳಲ್ಲಿ ಮಾಸ್ಕ್​, ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್, ಕ್ರಿಸ್​ಮಸ್​ ರಜೆಗೆ ಊರಿಗೆ ಹೋಗಿರುವವರಲ್ಲಿ ರೋಗ ಲಕ್ಷಣ ಇದ್ದರೆ ಐಸೋಲೇಷನ್ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.

ಮಾಲ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿಯೂ ರೂಲ್ಸ್ ಫಾಲೋ ಮಾಡ್ತಿರುವ ಜನರು

ರೂಪಾಂತರಿ ವೈರಸ್ ಆತಂಕ ಬೆನ್ನಲ್ಲೇ ಎಲ್ಲರೂ ಅಲರ್ಟ್ ಆಗಿದ್ದಾರೆ. ನಗರದ ಮಾಲ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬರುವ ಹೆಚ್ಚಿನ ಜನರು ಮಾಸ್ಕ್​ ಧರಿಸಿಕೊಂಡೇ ಓಡಾಡುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೊವಿಡ್ ನಿಯಮ ಪಾಲನೆ ಮಾಡಲು ಆರಂಭಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:07 pm, Fri, 23 December 22