ಬೆಂಗಳೂರಿನಲ್ಲಿ ಭಾರೀ ಸೈಬರ್ ಜಾಲ ಭೇದಿಸಿದ ಕರ್ನಾಟಕ ಸೈಬರ್ ಕಮಾಂಡ್: ಡಿಜಿಟಲ್ ಅರೆಸ್ಟ್, ಲೈಂಗಿಕ ಬೆದರಿಕೆಗೆ ಬಳಸುತ್ತಿದ್ದ ಅಕ್ರಮ ಸಿಮ್ ಬಾಕ್ಸ್ ವಶಕ್ಕೆ

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅಕ್ರಮ ಸಿಮ್ ಬಾಕ್ಸ್ ನೆಟ್‌ವರ್ಕ್ ಅನ್ನು ಕರ್ನಾಟಕ ಸೈಬರ್ ಕಮಾಂಡ್ ಭೇದಿಸಿದೆ. ಡಿಜಿಟಲ್ ಅರೆಸ್ಟ್, ಲೈಂಗಿಕ ಬೆದರಿಕೆ, ಹಾಗೂ ಆರ್ಥಿಕ ಸೈಬರ್ ಅಪರಾಧಗಳಿಗೆ ಈ ಜಾಲ ಬಳಕೆಯಾಗುತ್ತಿತ್ತು. ಮಹಾರಾಷ್ಟ್ರ ಮೂಲದ ನಾಲ್ವರನ್ನು ಬಂಧಿಸಲಾಗಿದ್ದು, ನೂರಾರು ಕೋಟಿ ರೂಪಾಯಿ ವಂಚನೆ ಶಂಕೆ ವ್ಯಕ್ತವಾಗಿದೆ. ಈ ಯಶಸ್ವಿ ಕಾರ್ಯಾಚರಣೆ ಸೈಬರ್ ಅಪರಾಧ ಜಗತ್ತಿನಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

ಬೆಂಗಳೂರಿನಲ್ಲಿ ಭಾರೀ ಸೈಬರ್ ಜಾಲ ಭೇದಿಸಿದ ಕರ್ನಾಟಕ ಸೈಬರ್ ಕಮಾಂಡ್: ಡಿಜಿಟಲ್ ಅರೆಸ್ಟ್, ಲೈಂಗಿಕ ಬೆದರಿಕೆಗೆ ಬಳಸುತ್ತಿದ್ದ ಅಕ್ರಮ ಸಿಮ್ ಬಾಕ್ಸ್ ವಶಕ್ಕೆ
ಬೆಂಗಳೂರು ಸೈಬರ್ ವಂಚನೆ , ಸಿಮ್ ಬಾಕ್ಸ್ ಜಾಲ
Image Credit source: Google

Updated on: Oct 24, 2026 | 7:48 AM

ಬೆಂಗಳೂರು, ಅ.24: ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಗೆ ಸೈಬರ್ ವಂಚನೆಗಳು ಹೆಚ್ಚಾಗಿದೆ. ಇದನ್ನು ಪತ್ತೆ ಮಾಡಲು ಪೋಲಿಸರು ಹಾಗೂ ಸೈಬರ್ ಕಮಾಂಡ್ ನಿರಂತರ ಪ್ರಯತ್ನಗಳು ಮಾಡಿದ್ದಾರೆ. ಈಗಾಗಲೇ ಹಲವು ಪ್ರಕರಣಗಳನ್ನು ಭೇದಿಸಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಸೈಬರ್ ವಂಚನೆ ಎಸಗಲು ಸಂಚು ಹೂಡಿದ್ದ ಕುಖ್ಯಾತ ಅಂತರರಾಷ್ಟ್ರೀಯ ಅಕ್ರಮ ಸಿಮ್ ಬಾಕ್ಸ್ ನೆಟ್‌ವರ್ಕ್ ಅನ್ನು ಕರ್ನಾಟಕ ಸೈಬರ್ ಕಮಾಂಡ್ ಯಶಸ್ವಿಯಾಗಿ ಭೇದಿಸಿದೆ. ಡಿಜಿಟಲ್ ಅರೆಸ್ಟ್ ಹಗರಣಗಳು, ಲೈಂಗಿಕ ಬೆದರಿಕೆ ಹಾಗೂ ಇತರೆ ಗಂಭೀರ ಆರ್ಥಿಕ ಸೈಬರ್ ಅಪರಾಧಗಳಿಗೆ ಬಳಕೆಯಾಗುತ್ತಿದ್ದ ಬೃಹತ್ ಜಾಲವನ್ನು ಪತ್ತೆಹಚ್ಚಿರುವ ಪೊಲೀಸರು, ಮಹಾರಾಷ್ಟ್ರ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಡಿಜಿಪಿ ಪ್ರಣಬ್ ಮೊಹಂತಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದ್ದು, ಸೈಬರ್ ಅಪರಾಧ ಲೋಕದಲ್ಲಿ ಇದು ದೊಡ್ಡ ಸಂಚಲನ ಮೂಡಿಸಿದೆ. ಬೆಂಗಳೂರಿನ ವೈಟ್‌ಫೀಲ್ಡ್ ಹಾಗೂ ಕಾಡುಗೋಡಿ ಪ್ರದೇಶಗಳಲ್ಲಿ ಏರ್ಟೆಲ್ ಕಂಪನಿಯ ಸಿಮ್ ಕಾರ್ಡ್‌ಗಳನ್ನು ಬಳಸಿ ಅನಧಿಕೃತವಾಗಿ ಸಿಮ್ ಬಾಕ್ಸ್ ಸೆಟಪ್ ಕಾರ್ಯಾಚರಣೆ ನಡೆಸುತ್ತಿರುವ ಕುರಿತು ‘ಭಾರತಿ ಏರ್ಟೆಲ್ ಲಿಮಿಟೆಡ್’ನಿವೃತ್ತ ನೋಡಲ್ ಅಧಿಕಾರಿಯಿಂದ ಸೈಬರ್ ಕಮಾಂಡ್‌ಗೆ ದೂರು ಸಲ್ಲಿಕೆಯಾಗಿತ್ತು. ಈ ದೂರಿನ ಆಧಾರದ ಮೇಲೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದರು.

ಸಿಮ್ ಬಾಕ್ಸ್ ಎಂದರೇನು? ಹೇಗೆ ಕೆಲಸ ಮಾಡುತ್ತದೆ?

ಸಿಮ್ ಬಾಕ್ಸ್ ಎಂಬುದು ಬಹು ಸಿಮ್ ಕಾರ್ಡ್‌ಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ ಸಾಧನವಾಗಿದೆ. ವಿದೇಶಗಳಿಂದ ಬರುವ ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಂತೆ ಬಿಂಬಿಸಿ ರೂಟ್ ಮಾಡಲು ವಂಚಕರು ಇದನ್ನು ಬಳಸುತ್ತಾರೆ. ತನಿಖೆಯ ಪ್ರಕಾರ, ಕಾಡುಗೋಡಿ ಹಾಗೂ ವೈಟ್‌ಫೀಲ್ಡ್‌ನಲ್ಲಿ ಈ ಜಾಲವನ್ನು ನಡೆಸಲಾಗುತ್ತಿತ್ತು. ಕಾಡುಗೋಡಿಯಲ್ಲಿ ತಲಾ 32 ಸಿಮ್ ಸ್ಲಾಟ್‌ಗಳಿರುವ 6 ಸಾಧನಗಳು (ಒಟ್ಟು 192 ಸಿಮ್ ಸ್ಲಾಟ್‌ಗಳು) ಹಾಗೂ ವಿವಿಧ ಸೇವಾ ಪೂರೈಕೆದಾರರ ಇ-ಸಿಮ್ ಸಂಪರ್ಕಗಳು ಪತ್ತೆಯಾಗಿವೆ. ಇನ್ನುಳಿದ ಸ್ಥಳದಲ್ಲಿ ಒಟ್ಟು 128 ಸಿಮ್ ಸ್ಲಾಟ್‌ಗಳಿರುವ 4 ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ 10 ಸಿಮ್ ಬಾಕ್ಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯ, ಹಣದ ಆಸೆಯಿಂದಲ್ಲೇ ನನ್ನ ಸ್ನೇಹಿತ ಸಾವು? ಯಶವಂತಪುರದ ಖಾಸಗಿ ಆಸ್ಪತ್ರೆ ಎದುರು ಕುಟುಂಬಸ್ಥರು, ಸ್ನೇಹಿತರ ಆಕ್ರೋಶ

ಮಹಾರಾಷ್ಟ್ರದಿಂದ ಸಿಮ್ ಪೂರೈಕೆ ಮತ್ತು ನಾಲ್ವರು ಆರೋಪಿಗಳ ಬಂಧನ:

ಈ ಸಿಮ್ ಕಾರ್ಡ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಿ, ನಂತರ ಅವುಗಳನ್ನು ಸೈಬರ್ ವಂಚನೆಗಾಗಿ ಇ-ಸಿಮ್ ಪ್ರೊಫೈಲ್‌ಗಳಾಗಿ ಪರಿವರ್ತಿಸುತ್ತಿದ್ದ ಜಾಲದ ಜಾಡು ಹಿಡಿದು ಹೊರಟ ಪೊಲೀಸರು, ಮಹಾರಾಷ್ಟ್ರದ ತಿರೋಡಾ ಮೂಲದ ನಾಲ್ವರು ಶಂಕಿತರನ್ನು ಬಂಧಿಸಿದ್ದಾರೆ. ವಂಚಕರು ನೂರಾರು ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಆನ್‌ಲೈನ್ ಮೂಲಕ ಲೂಟಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us