ಸಾಲು-ಸಾಲು ರಜೆ ಮುಗಿಸಿ ಬೆಂಗಳೂರಿಗೆ ವಾಪಾಸ್ಸಾದ ಜನ: ನಗರದಲ್ಲಿ ಫುಲ್ ಟ್ರಾಫಿಕ್ ಜಾಮ್

ಸೋಮವಾರ ಗಾಂಧಿ ಜಯಂತಿ ಇತ್ತು. ಹೀಗಾಗಿ ಇಂದಿನಿಂದ ಸರ್ಕಾರಿ ಕಚೇರಿಗಳು ಎಂದಿನಂತೆ ಆರಂಭವಾಗಲಿವೆ. ಆದ ಕಾರಣ ಸಾಲುಸಾಲು ರಜೆ ಬಳಿಕ ಊರುಗಳಿಂದ ಜನರು ವಾಪಸಾಗುತ್ತಿದ್ದಾರೆ. ಈ ಹಿನ್ನೆಲೆ ಬೆಂಗಳೂರು ನಗರದಲ್ಲಿ ಟ್ರಾಫಿಕ್​ ಜಾಮ್ ಸಮಸ್ಯೆ ಉಲ್ಬಣಗೊಂಡಿದೆ. ಡಬಲ್ ರೋಡ್, K.R.ಸರ್ಕಲ್, ಕಬ್ಬನ್ ಪಾರ್ಕ್​ ಬಳಿ ಟ್ರಾಫಿಕ್​ ಜಾಮ್ ಉಂಟಾಗಿದೆ.

ಬೆಂಗಳೂರು,ಅ.03: ಈದ್ ಮಿಲಾದ್, ಗಾಂಧಿ ಜಯಂತಿ, ವೀಕೆಂಡ್​ ಎಂದು ಸಾಲು ಸಾಲು ರಜೆ ಸಿಕ್ಕ ಕಾರಣ ಸಿಲಿಕಾನ್ ಸಿಟಿ ಬಿಟ್ಟು ಬೇರೆ ಕಡೆ ತೆರಳಿದ್ದ ಜನರೆಲ್ಲ ಈಗ ಮತ್ತೆ ಗೂಡಿಗೆ ಮರಳುತ್ತಿದ್ದಾರೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಭಾರೀ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ (Bengaluru Traffic). ಇತ್ತೀಚೆಗೆ ನಗರದ ಹೊರ ವರ್ತುಲ ರಸ್ತೆಯಲ್ಲಿ ಅಧಿಕ ಸಂಚಾರ ದಟ್ಟಣೆ ಆಗಿ ಸಂಜೆ 4 ಗಂಟೆಗೆ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡ ಹೊರಟಿದ್ದ ಶಾಲಾ ವಾಹನ, ರಾತ್ರಿ 8 ಗಂಟೆಗೆ ಮಕ್ಕಳನ್ನು ಮನೆಗೆ ತಲುಪಿಸಿದ ಘಟನೆ ನಡೆದಿತ್ತು. ಮಕ್ಕಳು 4 ಗಂಟೆ ತಡವಾಗಿ ಮನೆಗೆ ಬಂದ ಬಗ್ಗೆ ಪೋಷಕರು ಶಾಲಾ ಆಡಳಿತ ಮಂಡಳಿಗೆ ಮೆಸೇಜ್​​ ಮಾಡಿ ಆಕ್ರೋಶ ಹೊರ ಹಾಕಿದ್ದ ಮೆಸೇಜ್​ಗಳ ಸ್ಕ್ರೀನ್​ಶಾಟ್​​ಗಳು ಟ್ವಿಟರ್​ನಲ್ಲಿ ವೈರಲ್ ಆಗಿದ್ದವು. ಹಾಗೂ ಟ್ರಾಫಿಕ್​ನಲ್ಲಿ ಪಿಜ್ಜಾ ಆರ್ಡರ್​ ಮಾಡಿ ತಿಂದ ವಿಡಿಯೋ ವೈರಲ್ ಆಗಿತ್ತು. ಈಗ ಇದೇ ರೀತಿಯ ದಟ್ಟ ಟ್ರಾಫಿಕ್ ಸಮಸ್ಯೆ ನಗರದಲ್ಲಿ ಮುರುಕಳಿಸಿದೆ.

ಸೋಮವಾರ ಗಾಂಧಿ ಜಯಂತಿ ಇತ್ತು. ಹೀಗಾಗಿ ಇಂದಿನಿಂದ ಸರ್ಕಾರಿ ಕಚೇರಿಗಳು ಎಂದಿನಂತೆ ಆರಂಭವಾಗಲಿವೆ. ಆದ ಕಾರಣ ಸಾಲುಸಾಲು ರಜೆ ಬಳಿಕ ಊರುಗಳಿಂದ ಜನರು ವಾಪಸಾಗುತ್ತಿದ್ದಾರೆ. ಈ ಹಿನ್ನೆಲೆ ಬೆಂಗಳೂರು ನಗರದಲ್ಲಿ ಟ್ರಾಫಿಕ್​ ಜಾಮ್ ಸಮಸ್ಯೆ ಉಲ್ಬಣಗೊಂಡಿದೆ. ಡಬಲ್ ರೋಡ್, K.R.ಸರ್ಕಲ್, ಕಬ್ಬನ್ ಪಾರ್ಕ್​ ಬಳಿ ಟ್ರಾಫಿಕ್​ ಜಾಮ್ ಉಂಟಾಗಿದೆ. ಇದರ ನಡುವೆ ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗ ಹಿನ್ನೆಲೆ ಮೆಟ್ರೋ ಪ್ರಯಾಣಿಕರು ಕೂಡ ಓಲಾ, ಊಬರ್, ಆಟೋಗಳ ಮೊರೆ ಹೋಗುತ್ತಿದ್ದಾರೆ.

ಇದನ್ನೂ ಓದಿ: ಸೆ.27ರ ಸಂಜೆ ನಾಲ್ಕು ಗಂಟೆಗೆ ಶಾಲೆ ಬಿಟ್ಟ ಮಕ್ಕಳು ಮನೆಗೆ ತಲುಪಿದ್ದು ರಾತ್ರಿ ಎಂಟಕ್ಕೆ !!

ಮೆಜೆಸ್ಟಿಕ್ ತಲುಪುವ ರಸ್ತೆಗಳಲ್ಲಿ ಫುಲ್ ಟ್ರಾಫಿಲ್ ಸಮಸ್ಯೆ ಆಗಿದ್ದು ಜನ ಗಂಟೆಗಟ್ಟಲೆ ಟ್ರಾಫಿಕ್​ನಲ್ಲಿ ಕಾಲ ಕಳೆಯುವಂತಾಗಿದೆ. ಇನ್ ಟೈಮ್​ಗೆ ಆಫೀಸ್​ಗೆ ಹೋಗಲು ಆಗದೆ ಜನರು ಪರದಾಡುತ್ತಿದ್ದಾರೆ. ಬೆಳಗ್ಗೆ 9:30ಕ್ಕೆ ಮನೆ ಬಿಟ್ಟು 11 ಗಂಟೆಗೆ ಮಕ್ಕಳನ್ನು ಶಾಲೆಗೆ ಡ್ರಾಪ್ ಮಾಡ್ತಿದ್ದೀವಿ ಎಂದು ಪೋಷಕರೊಬ್ಬರು ಟ್ರಾಫಿಕ್ ಸಮಸ್ಯೆ ಬಗ್ಗೆ ತಿಳಿಸಿದರು. ಇನ್ನು ಇದೇ ವೇಳೆ ಆಟೋ ಚಾಲಕರು ಕೂಡ ಟ್ರಾಫಿಕ್ ಸಮಸ್ಯೆ ಬಗ್ಗೆ ಬೇಸರ ಹೊರ ಹಾಕಿದರು. ಇವತ್ತು ಗಾಡಿ ಓಡಿಸೋಕೆ ಬೇಜಾರ್ ಆಗ್ತಿದೆ. ಒಂದೊಂದು ಸಿಗ್ನಲ್ ಮೂವ್ ಆಗೋದಕ್ಕೆ 30 ನಿಮಿಷ ತೆಗೆದುಕೊಳ್ತಾಯಿದೆ. ಮೆಜೆಸ್ಟಿಕ್​ಗೆ ಹೋಗಬೇಕು ಅಂದ್ರೆ ಒಂದು ಗಂಟೆ ತೋರುಸ್ತಾ ಇದೆ. ಬಿನ್ನಿಮಿಲ್ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಇನ್ನೂ ಟ್ರಾಫಿಕ್ ಜಾಸ್ತಿಯಾಗಿದೆ. ಪ್ರತಿದಿನ 9 ಗಂಟೆಯವರೆಗೂ ಟ್ರಾಫಿಕ್ ಇರ್ತಿತ್ತು. ಇವತ್ತು 12 ಗಂಟೆಯಾದ್ರು ಟ್ರಾಫಿಕ್ ಕಡಿಮೆಯಾಗಿಲ್ಲ ಎಂದು ಆಟೋ ಚಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ