ಬಿಹಾರ್ ಬೆನ್ನಲ್ಲೇ ಕರ್ನಾಟಕದಲ್ಲೂ ಗರಿಗೆದರಿದ ಜಾತಿ ಗಣತಿ ವರದಿ ಸಲ್ಲಿಕೆ ಕಾರ್ಯ ಚಟುವಟಿಕೆಗಳು

Karnataka caste census report: ದೇಶದಲ್ಲೇ ಇದೇ ಮೊದಲ ಬಾರಿ ಬಿಹಾರ ಜಾತಿ ಗಣತಿ ಸಮೀಕ್ಷೆಯ ವರದಿಯನ್ನ ಬಹಿರಂಗ ಪಡಿಸಿದೆ. ಲೋಕಸಭೆ ಚುನಾವಣೆ ಹೊತ್ತಲ್ಲಿ ಇದು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ಸಹ ಜಾತಿ ಗಣತಿ ವರದಿ ಚಟುವಟಿಕೆಗಳು ಗರಿಗೆದರಿದ್ದು, ಶೀಘ್ರದಲ್ಲೇ ಜಾತಿ ಗಣತಿ ವರದಿ ಸಲ್ಲಿಸುವ ಸಾಧ್ಯತೆಗಳಿವೆ. ಇನ್ನು ಈ ಬಗ್ಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಡಾ ಜಯಪ್ರಕಾಶ್ ಹೆಗಡೆ ಟಿವಿ9 ಜೊತೆ ಮಾತನಾಡಿದ್ದು, ಅದು ಈ ಕೆಳಗಿನಂತಿದೆ ನೋಡಿ.

ಬಿಹಾರ್ ಬೆನ್ನಲ್ಲೇ ಕರ್ನಾಟಕದಲ್ಲೂ ಗರಿಗೆದರಿದ ಜಾತಿ ಗಣತಿ ವರದಿ ಸಲ್ಲಿಕೆ ಕಾರ್ಯ ಚಟುವಟಿಕೆಗಳು
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಡಾ ಜಯಪ್ರಕಾಶ್ ಹೆಗಡೆ
Follow us
Pramod Shastri G
| Updated By: ರಮೇಶ್ ಬಿ. ಜವಳಗೇರಾ

Updated on:Oct 03, 2023 | 3:03 PM

ಬೆಂಗಳೂರು, (ಅಕ್ಟೋಬರ್ 03): ಆರ್​ಜೆಡಿ ಹಾಗೂ ಜೆಡಿಯು ನೇತೃತ್ವದ ಸರ್ಕಾರ, ಬಿಹಾರದ ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಿದೆ. ಬಿಹಾರ ಮುಖ್ಯ ಕಾರ್ಯದರ್ಶಿ ಅಮೀರ್ ಸುಭಾನಿ ಗಾಂಧಿ ಜಯಂತಿ ದಿನವೇ ವರದಿ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ಸಹ ಜಾತಿ ಗಣತಿ ವರದಿ(Karnataka caste census report) ಬಿಡುಗಡೆ ಮಾಡುವಂತೆ ಕೂಗು ಕೇಳಿಬಂದಿವೆ. ಅಲ್ಲದೇ ಜಾತಿ ಗಣತಿ ವರದಿ ಸಲ್ಲಿಕೆ ಕಾರ್ಯ ಚಟುವಟಿಕೆಗಳು ಗರಿಗೆದರಿವೆ. ಹೌದು…ಶೀಘ್ರದಲ್ಲೇ ಜಾತಿ ಗಣತಿ ವರದಿ ಸಲ್ಲಿಕೆ ಸಾಧ್ಯತೆ ಇದೆ. ಹಿಂದುಳಿದ ವರ್ಗಗಗಳ ಆಯೋಗವು(Karnataka Backward Classes Commission ) ಈ ಹಿಂದೆ ಕಾಂತರಾಜ್ ಸಮಿತಿಯ ವರದಿಯ ಅಂಕಿ-ಅಂಶ ಆಧರಿಸಿ ಹೊಸ ರಿಪೋರ್ಟ್ ಸಿದ್ಧಪಡಿಸಿ ವೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ಸರ್ಕಾರಕ್ಕೆ ಸಲ್ಲಿಸಲು ತಯಾರಿ ನಡೆಸಿದೆ.

ಈಗಾಗಲೇ ವರದಿ ಸಿದ್ದಪಡಿಸಲು ಐದು ಮಂದಿ ತಜ್ಙರನ್ನ ನೇಮಕ ಮಾಡಲಾಗಿದ್ದು, ಈ ವಾರದಿಂದಲೇ ಮಾಹಿತಿ ಕ್ರೂಢಿಕರಣ ಆರಂಭವಾಗಲಿದೆ. ಹಿಂದುಳಿದ ವರ್ಗಗಳನ್ನ ಮರು ವಿಂಗಡಿಸಿ ಶಿಫಾರಸ್ಸು ಮಾಡುವ ಸಾಧ್ಯತೆ ಇದೆ. ಇನ್ನು ಹಾಲಿ ಇರುವ ಒಬಿಸಿ ಸಮುದಾಯದ ಮರು ವರ್ಗೀಕರಣ ಮಾಡುವ ನಿರೀಕ್ಷೆ ಇದೆ ಎಂದು ಟಿವಿ9ಗೆ ಹಿಂದುಳಿದ ಆಯೋಗದ ಉನ್ನತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಇದನ್ನೂ ಓದಿ: ಬಿಹಾರ ಜಾತಿ ಜನಗಣತಿ ವರದಿ ಬಹಿರಂಗ ಬೆನಲ್ಲೇ ಕರ್ನಾಟಕದಲ್ಲೂ ಜಾತಿ ಗಣತಿ ಬಿಡುಗಡೆಗೆ ಕೇಳಿಬಂತು ಕೂಗು

ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಹೇಳಿದ್ದೇನು?

ಇನ್ನು ಈ ಬಗ್ಗೆ ಟಿವಿ9 ಜೊತೆ ಸ್ವತಃ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಡಾ ಜಯಪ್ರಕಾಶ್ ಹೆಗಡೆ ಮಾತನಾಡಿದ್ದು, ಬಿಹಾರದಲ್ಲಿ ಕೊಟ್ಟಿದ್ದು ಜಾತಿ ಗಣತಿ ವರದಿ. ಕರ್ನಾಟಕದ್ದು ಸಮಾಜಿಕ ಮತ್ತು ಶೈಕ್ಷಣಿಕ ವರದಿ. ಕಾಂತರಾಜ್ ಯಾಕೆ ಕೊಟ್ಟಿಲ್ಲ ಎನ್ನುವುದು ನಾನು ಚರ್ಚೆ ಮಾಡಿಲ್ಲ. ಸಾಮಾಜಿಕ ಮತ್ತು ಶೈಕ್ಚಣಿಕ ವರದಿ ಸಲ್ಲಿಸಲು ಸರ್ಕಾರದಿಂದ ಪತ್ರ ಬಂದಿದೆ. ನಾವು ಶೀಘ್ರದಲ್ಲೇ ವರದಿ ಸಲ್ಲಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ವರದಿ ಸಲ್ಲಿಸಲು ಕಾಲಮಿತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರ ಪತ್ರ ಬರೆದಿರುವುದರಿಂದ ವರದಿ ನೀಡುವುದು ನಮ್ಮ ಜವಾಬ್ದಾರಿ ಆಗುತ್ತೆ. ನವೆಂಬರ್ 25ಕ್ಕೆ ನನ್ನ ಅವಧಿ ಮುಗಿಯಲಿದೆ. ಅದರೊಳಗೆ ವರದಿ ಸಲ್ಲಿಕೆ ಆಗಲಿದೆ. ಕಾಂತರಾಜು ಅವರ ನೀಡಿರುವ ಅಂಕಿ-ಅಂಶವನ್ನ ನಾವು ಅಲ್ಲಗೆಳಯಲು ಆಗುವುದಿಲ್ಲ. ಅವರನ್ಬ ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ವರದಿಗೆ ಕೆಲ ಸಮುದಾಯಗಳ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿದ ಅವರು, ಡಾಟಾ ಸರಿಯಾಗಿ ಬಂದಿರಬೇಕು. ಯಾವ ರಾಜಕೀಯ ಪಕ್ಷಗಳು ಮಾಡಿಲ್ಲ. ಶಿಕ್ಷಕರು ಮನೆ ಮನೆಗೆ ಹೋಗಿ ಮಾಡಿದ್ದಾರೆ. ಶೇಕಡಾ 80ಕ್ಕಿಂತ ಹೆಚ್ಚು ಇದ್ದರೆ ಅದನ್ನ ಒಪ್ಪಿಕೊಳ್ಳಬೇಕಾಗುತ್ತೆ. ಆಕ್ಷೇಪಣೆ ಸರ್ಕಾರಕ್ಕೆ ಕೆಲವರು ಮಾಡಿದಾರೆ. ಆದರೆ ನಾವು ಡಾಟಾ ಆಧಾರದಲ್ಲಿ ಮಾಡಿ್ದೇವೆ. ಉಳಿದಿದ್ದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ಹೇಳಿದರು.

ಹಿಂದುಳಿದ ವರ್ಗಗಳನ್ಬ ಮರು ವರ್ಗಿಕರಣ ಮಾಡಬೇಕಾಗುತ್ತೆ. ಪ್ರತಿ ಹತ್ತು ವರ್ಷಗಳಿಗೆ ಮರು ವರ್ಗಿಕರಣ ಮಾಡಬೇಕು‌. ಆದರೆ ಈಗ 20 ವರ್ಷ ಆಗಿದೆ. ಬಾಕಿ ಇರುವ ಹಿಂದಿನ ಆಯೋಗದ ವರದಿಯನ್ನ ಸಹ ಸರ್ಕಾರಕ್ಕೆ ಪಟ್ಟಿ ಕೊಡುತ್ತೇವೆ. ಇದು ಸಿದ್ದರಾಮಯ್ಯ ಅವರ ಬ್ರೈನ್ ಚೈಲ್ಡ್. ಅವರು ಈ ವರದಿಯನ್ನ ಒಪ್ಪುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

2014ರಲ್ಲೇ ಜಾತಿ ಗಣತಿ ನಡೆಸುವಂತೆ ಹೇಳಿದ್ದ ಸಿದ್ದರಾಮಯ್ಯ

ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಅವಧಿಯಲ್ಲಿ 2014ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಜಾತಿ ಗಣತಿ ನಡೆಸುವಂತೆ ತಿಳಿಸಿತ್ತು. ಈ ಆಯೋಗವು ಕಾಂತರಾಜ್ ಸಮಿತಿ ರಚಿಸಿತ್ತು. 1932 ರ ಬಳಿಕ ದೇಶದಲ್ಲಿ ಜಾತಿವಾರು ಜನಗಣತಿ ನಡೆದಿಲ್ಲ. ವಿವಿಧ ಧರ್ಮ, ಜಾತಿ, ಉಪ ಜಾತಿಗಳ ಜನಸಂಖ್ಯೆ ಎಷ್ಟಿದೆ ಎಂಬ ನಿಖರವಾದ ಅಂಕಿ ಅಂಶಗಳಿಲ್ಲ. ಇಂತಹುದೊಂದು ಪ್ರಯತ್ನವನ್ನು ಸಿದ್ದರಾಮಯ್ಯ ಸರ್ಕಾರ ಮಾಡಿತ್ತು.

ಎಚ್. ಕಾಂತರಾಜ್ ಸಾರಥ್ಯದ ಸಮಿತಿಯು 2016ರಲ್ಲಿ ಜಾತಿ ಗಣತಿ ವರದಿ ಸಿದ್ದಪಡಿಸಿ ಅದನ್ನು ಸರ್ಕಾರಕ್ಕೆ ನೀಡಿತ್ತು. ಈ ಸಮಿತಿಯು ಸಮೀಕ್ಷೆ ನಡೆಸಲು 162 ಕೋಟಿ ರೂ. ವೆಚ್ಚ ಮಾಡಿತ್ತು. ಆದ್ರೆ, ಸಿದ್ದರಾಮಯ್ಯ ಸರ್ಕಾರವು ತಮ್ಮದೇ ಸರ್ಕಾರದ ಆದೇಶದ ಮೇರೆಗೆ ಸಿದ್ಧವಾಗಿದ್ದ ವರದಿಯನ್ನು ಜಾರಿ ಮಾಡಲು ಹಿಂದೇಟು ಹಾಕಿತ್ತು. ಇದಕ್ಕೆ ಹಲವು ರಾಜಕೀಯ ಕಾರಣಗಳಿವೆ ಎನ್ನಲಾಗಿದೆ. ಪ್ರಮುಖವಾಗಿ ರಾಜ್ಯದ ಪ್ರಬಲ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳ ನಾಯಕರು ಈ ವರದಿಗೆ ಆಕ್ಷೇಪ ಎತ್ತಿದ್ದರು ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:33 pm, Tue, 3 October 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್